ಬೆಳಗಾವಿಯಲ್ಲಿ ಏನು ನಡೆಯುತ್ತಿದೆ ಗೊತ್ತಾ ? ಕನ್ನಡಿಗರು ತಿಳಿದುಕೊಳ್ಳಲೇ ಬೇಕಾದ ವಿಷಯ..

Advertisements

ಇತ್ತೀಚಿಗೆ ನಮ್ಮ ಕರ್ನಾಟಕ ಸರ್ಕಾರ ಕರ್ನಾಟಕದಲ್ಲಿರುವ ಮರಾಠ ಸಮುದಾಯದ ಏಳಿಗೆಗಾಗಿ ಮರಾಠ‌ ಪ್ರಾಧಿಕಾರವನ್ನು ರಚಿಸಿದೆ. ಅದು ಒಳ್ಳೆಯದು ಕೆಟ್ಟದ್ದೊ ಅದು ಬೇರೆಯದೇ ವಿಷಯ. ಆದರೆ ಇದರ ಬೆನ್ನಲ್ಲೇ ಬೆಳಗಾವಿಯಲ್ಲಿ ಎಮ್’ಇಎಸ್ ಪುಂ’ಡಾಟಿಕೆ ಹೆಚ್ಚಿದೆ. ರಾಜಾರೋಷವಾಗಿ ಕನ್ನಡಕ್ಕೆ ಕನ್ನಡಿಗರ ಮೇಲೆ ದೌ’ರ್ಜನ್ಯ ನಡೆಯುತ್ತಿದೆ. ಕೆಲವು ರಾಜಕಾರಣಿಗಳ ಮಾತು ವರ್ತನೆ ಕನ್ನಡ ವಿ’ರೋಧಿಯಾಗಿದ್ದು ಬೆಳಗಾವಿ ಕರ್ನಾಟಕದ ಭಾಗವೇ ಅಲ್ಲ ಎಂಬ ಉ’ದ್ಧಟತನದ ಜೋರಾಗಿದೆ.

[widget id=”custom_html-4″]

ಇಷ್ಟಾದರೂ ಕೆಲ ಕನ್ನಡ ಪರ ಸಂಘಟನೆಗಳು ಹೋರಾಟ ಮಾಡಿದ್ದು ಬಿಟ್ಟರೆ ನಾಡ ದ್ರೋ’ಹಿಗಳಿಗೆ ಯಾವುದೇ ಕಾನೂನು ಲಂಗು ಲಗಾಮು ಇಲ್ಲದಂತೆ ಆಗಿದೆ. ಇತ್ತೀಚಿಗೆ ಬೆಳಗಾವಿ ಹೋರಾಟದ ಕುರಿತಾದ ಪುಸ್ತಕ ಬಿಡುಗಡೆ ಮಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಉ’ದ್ದಟತನ ಪ್ರದರ್ಶಿಸಿದ್ದಾರೆ. ಕರ್ಣಾಟದ ಆಡಳಿತಕ್ಕೆ ಒಳಪಟ್ಟಿರುವ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು. ಎಂದಿಗಾದರೂ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಂಡೇ ತೀರುತ್ತೇವೆ ಎಂದಿದ್ದಾರೆ.

[widget id=”custom_html-4″]

Advertisements

ಅಲ್ಲದೆ ಬೆಳಗಾಂ ಹೆಸರು ಬದಲು ಮಾಡಿ, ತನ್ನ ಆಡಳಿತ ಕೇಂದ್ರವನ್ನಾಗಿ ಮಾಡಿಕೊಂಡಿರುವ ಕರ್ನಾಟಕ ಸರ್ಕಾರ ಕಾನೂನು ಉಲ್ಲಂಘನೆ ಮಾಡಿದೆ ಎಂದು ದೂರಿದ್ದಾರೆ. ಗಡಿ ವಿವಾದ ಇನ್ನೂ ಸುಪ್ರೀಂ ಕೋರ್ಟ್ ನಲ್ಲಿ ಇರುವುದರಿಂದ ಕರ್ನಾಟಕ ಸರ್ಕಾರ ಹೀಗೆಲ್ಲ ನ್ಯಾಯಾಂಗ ಉ’ಲ್ಲಂಘನೆ ಮಾಡುತ್ತಿದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯದ ಬೆಳಗಾವಿ ಬಿ’ಜೆಪಿ ನಾಯಕರು ನಾವೇನು ಕೈಕಟ್ಟಿ ಕೂತಿಲ್ಲ ಎಂದು ಗು’ಡುಗಿದ್ದಾರೆ.
ಒಂದು ಹೆಜ್ಜೆ ಮುಂದೆಹೋದ ಲಕ್ಷ್ಮಣ ಸವದಿ, ಹಾಗಾದರೆ ಮುಂಬೈ ಹಿಂದೆ ಕನ್ನಡಿಗರ ವಶದಲ್ಲಿ ಇತ್ತು .ಈಗ ಅದು ಕರ್ನಾಟಕಕ್ಕೆ ಸೇರಬೇಕು. ನಾವು ಕೂಡ ಮುಂಬೈ ಕರ್ನಾಟಕಕ್ಕೆ ಸೇರುವವರೆಗೆ ಹೋರಾಟ ಮಾಡುತ್ತೇವೆ ಎಂದು ವ್ಯಂಗ್ಯ ಆಡುವ ಮೂಲಕ ಉದ್ಧವ್ ಠಾಕ್ರೆ ಯ ಅರ್ಥಹೀನ ಮಾತುಗಳಿಗೆ ಸರಿಯಾಗಿ ಪ್ರತ್ಯುತ್ತರ ನೀಡಿದ್ದಾರೆ.

ಆದರೆ ಕರ್ನಾಟಕ ಸರ್ಕಾರ ಏಕೆ ಪುಂ’ಡ ಎಂ’ ಇ ಎಸ್ ಬ್ಯಾನ್ ಮಾಡುತ್ತಿಲ್ಲ? ಬೆಳಗಾವಿಯಲ್ಲಿ ಕನ್ನಡ ದ್ವಜ ಆರಿಸದಂತೆ ತಡೆಯುವಷ್ಟು ಎಂ’ ಇ ಎಸ್ ಅನ್ನು ಮುಂದುವರೆಯಲು ಏಕೆ ಬಿಟ್ಟಿದೆ? ಹೀಗೆ ಹಲವಾರು ಪ್ರಶ್ನೆಗಳು ಕನ್ನಡಿಗರ ಆ’ಕ್ರೋಶಕ್ಕೆ ಕಾರಣವಾಗಿದೆ. ಶಿವಸೇನೆ ಇಂತಹ ಉ’ದ್ದಟತನ ತೋರಲು ಶಿವಸೇನೆಯೊಂದಿಗೆ ಕೇಂದ್ರ ಬಿ’ಜೆಪಿಯ ಮೈತ್ರಿಯೂ ಕಾರಣ ಎಂಬ ಆ’ರೋಪಗಳೂ ಕೇಳಿಬರುತ್ತಿವೆ. ಇಲ್ಲಿಯ ಬಿಜೆಪಿ ರಾಜ್ಯ ಸರ್ಕಾರ ತಮನ್ನು ಏನೂ ಮಾಡುವುದಿಲ್ಲ ಎಂಬುವ ಸದರದಿಂದ ಶಿವಸೇನೆ ಕನ್ನಡಿಗರನ್ನು ಹಗುರವಾಗಿ ತೆಗೆದುಕೊಂಡಿದೆ ಎಂದು ಪ್ರತಿಪಕ್ಷಗಳು ಆ’ರೋಪಿಸುತ್ತಿವೆ.