4 ದಿನಗಳಿಂದ ತಿನ್ನಲು ತುತ್ತು ಅನ್ನ ಇಲ್ಲ..ಒಂದೊತ್ತಿಗಾದರೂ ಊಟ ಕೊಡಿ ಎಂದು ಗೊಳಿಸುತ್ತಿರುವ ಬೆಳಗಾವಿ ಮಹಿಳೆಯರು..

News

ಕೊರೋನಾ ಮಹಾಮಾರಿಯಿಂದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದ್ದು ಬಡವರು, ನಿರ್ಗತಿಕರು, ಸಾಮಾನ್ಯ ಜನರು ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಕೆಲವರು ತುತ್ತು ಅನ್ನವೂ ಸಿಗದೇ ಹಪಹಪಿಸುತ್ತಿದ್ದಾರೆ.

ಇನ್ನು ಸಂಕಷ್ಟಕ್ಕೆ ಒಳಗಾಗಿರುವ ಜನರಲ್ಲಿ ಲೈಂಗಿಕ ಕಾರ್ಯಕರ್ತರು ಸೇರಿಕೊಂಡಿದ್ದಾರೆ. ಇನ್ನು ಲಾಕ್ ಡೌನ್ ಪರಿಣಾಮ ನಾಲ್ಕು ದಿನಗಳಿಂದ ಊಟ ಇಲ್ಲದೆ ಸಂಕಷ್ಟ ಪಡುತ್ತಿರುವ ಕರುಣಾಜನಕ ಘಟನೆ ನಡೆದಿದೆ. ಇನ್ನು ಇದು ಬೆಳಗಾವಿಯಲ್ಲಿ ನಡೆದಿದೆ. ಇನ್ನು ಅನ್ನ ಸಿಗದೇ ನಾಲ್ಕು ದಿನಗಳನ್ನು ಬರೀ ನೀರನ್ನ ಕುಡಿದು ಬದುಕುತ್ತಿರುವ ಲೈಂಗಿಕ ಕಾರ್ಯಕರ್ತೆಯರು ತುತ್ತು ಅನ್ನಕ್ಕಾಗಿ ತುದಿಗಾಲಲ್ಲಿ ನಿಂತಿದ್ದಾರೆ.

ನಾವು ಕೈ ಮುಗಿದು ಕೇಳಿಕೊಳ್ಳುತ್ತೇವೆ, ಒಂದೊತ್ತಿಗಾದರೂ ಊಟ ಕೊಡಿಸಿ ಅಂತ ಮೊರೆ ಇಟ್ಟಿದ್ದಾರೆ. ನಾವು ಇಲ್ಲಿಗೆ ಬಂದು ೧೫ ವರ್ಷಗಳಾಗಿವೆ. ಬಾಡಿಗೆ ಮನೆಯಲ್ಲಿ ಜೀವನ ಮಾಡುತ್ತಿದ್ದೇವೆ. ಇನ್ನು ರೇಷನ್ ತೆಗೆದುಕೊಳ್ಳಲು ನಮ್ಮ ಬಳಿ ರೇಷನ್ ಕಾರ್ಡ್ ಕೂಡ ಇಲ್ಲ. ಇನ್ನು ಬಾಡಿಗೆ ಕಟ್ಟದೆ ಇರುವುದಕ್ಕೆ ಮನೆಯಿಂದ ಹೊರಹಾಕುತ್ತೇವೆ ಎಂದು ಮನೆ ಮಾಲೀಕರು ಹೇಳುತ್ತಿದ್ದಾರೆ.

ಇನ್ನು ಸರ್ಕಾರ, ಸಂಘ ಸಂಸ್ಥೆಗಳು ಮುಂದೆ ಬಂದು ಅವರ ಕಷ್ಟಕ್ಕೆ ನೇರವಾಗಿ ಎರಡೊತ್ತಿನ ಊಟಕ್ಕಾದರೂ ಅವರಿಗೆ ಸಹಾಯ ಮಾಡಬೇಕು. ದಯವಿಟ್ಟು ಈ ಲೈಂಗಿಕ ಕಾರ್ಯಕರ್ತರು ನೆಲಸಿರುವ ಮನೆಯ ಹತ್ತಿರ ಇರುವ ಯಾರಾದರೂ ಇವರಿಗೆ ಸಹಾಯ ಮಾಡಿ, ಅವರ ಹಸಿವನ್ನ ನೀಗಿಸಿ.