ಆಸ್ಪತ್ರೆಗೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡೋ ಬದಲು ಈ 5ಧಾನ್ಯಗಳನ್ನ ತಿನ್ನಿ

Health

ಮನುಷ್ಯನಿಗೆ ಕಾಯಿಲೆ ಬರದೇ, ಮರಕ್ಕೆ ಬರುತ್ತಾ ಎಂಬ ಗಾದೆ ಮಾತಿದೆ. ಹಾಗೆಯೇ ಇಂದಿನ ಜೀವನ ಶೈಲಿಯೂ ಅನೇಕ ಕಾಯಿಲೆಗಳ ಹುಟ್ಟಿಗೆ ಕಾರಣವಾಗಿದೆ. ಇದಕ್ಕೆಲ್ಲಾ ಕಾರಣ ಈಗಿನ ನಮ್ಮ ಆಹಾರ ಪದ್ಧತಿ. ಹಾಗೆ ನಮಗೆ ಕಾಯಿಲೆ ಬಂದಾಕ್ಷಣ ಮೊದಲು ಹೋಗುವುದು ಆಸ್ಪತ್ರೆಗೆ.

ಇನ್ನು ಆಸ್ಪತ್ರೆಗೆ ಹೋದ ಮೇಲೆ ಮಾತ್ರೆ, ಸ್ಕ್ಯಾನಿಂಗ್ ಅಂತ ಸಾವಿರಾರು ರೂಪಾಯಿಗಳನ್ನ ಖರ್ಚು ಮಾಡಬೇಕಾಗುತ್ತೆ. ಆದರೂ ತಕ್ಷಣಕ್ಕೆ ಕಾಯಿಲೆ ವಾಸಿಯಾದರು ಮತ್ತೆ ಬರೋದಿಲ್ಲ ಅಂತ ಯಾವುದೇ ವೈದ್ಯರು ನಿಮಗೆ ಗ್ಯಾರಂಟಿ ಕೊಡೋದಿಲ್ಲ. ಆದರೆ ನೀವು ಸರಿಯಾದ ಆಹಾರ ಪದ್ದತಿಯನ್ನ ಅನುಸರಿಸಿದ್ರೆ ಕಾಯಿಲೆ ಬರದಂತೆಯೇ ತಡೆಯಬಹುದು. ಹೌದು, ನೀವು ಸಿರಿಧಾನ್ಯಗಳನ್ನ ತಿನ್ನುವುದರಿಂದ ಇದು ಸಾಧ್ಯ.

ಇನ್ನು ಸಿರಿಧಾನ್ಯಗಳಿಂದ ಇಡ್ಲಿ ದೋಸೆ, ಬಿಸಿ ಬೆಲೆ ಬಾತ್ ಸೇರಿದಂತೆ ಹಲವಾರು ರುಚಿರುಚಿಯಾದಾ ಪದಾರ್ಥಗಳನ್ನ ಮಾಡಿಕೊಂಡು ತಿನ್ನಬಹುದು. ಇದರಿಂದ ನಿಮ್ಮ ದೇಹಕ್ಕೆ ಫಾಸ್ಫರಸ್, ಮ್ಯಾಂಗನೀಸ್, ಐರನ್  ಸೇರಿದಂತೆ ಹೆಚ್ಚು ಕ್ಯಾಲ್ಶಿಯಂಗಳು ಸಿಗುತ್ತವೆ. ಇನ್ನು ಭಾರತದ ಹಿಮಾಲಯ ಪ್ರದೇಶದ ತಪ್ಪಲಿನಲ್ಲಿ ಹೆಚ್ಚು ಆರೋಗ್ಯದ ಜೊತೆಗೆ ಆಯಸ್ಸುಉಳ್ಳವರು ವಾಸ ಮಾಡುತ್ತಿದ್ದಾರೆ ಎಂದು ಕೇಳಿದ್ದೇವೆ. ಅವರನ್ನ ಹುಂಝ ಜನಾಂಗದವರು ಎಂದು ಕೂಡ ಕರೆಯಲಾಗುತ್ತೆ. ಇವರ ಆಯಸ್ಸು ಮತ್ತು ಆರೋಗ್ಯಕ್ಕೆ ಈ ಸಿರಿಧಾನ್ಯ(ಮಿಲ್ಲೆಟ್ಸ್)ಗಗಳೇ ಕಾರಣ.

ತೆಳುಬಣ್ಣದ ನವಣೆ ಅಕ್ಕಿ : ದೇಹದ ನರಗಳಿಗೆಲ್ಲಾ ಶಕ್ತಿ ಕೊಡುವ ಇದು, ಗರ್ಭಿಣಿಯರಿಗೆ ತುಂಬಾ ಒಳ್ಳೆಯದು. ದೇಹದ ಅಂಗಾಂಗಗಳ ನೋವಿನ ಜೊತೆಗೆ ಮುಷ್ಠಿ ರೋಗ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಬಾಣಂತಿಯರು ಮಾತ್ರ ಈ ನವಣೆಯನ್ನ ಒಂದು ವರ್ಷಗಳ ಕಾಲ ತಿನ್ನಬಾರದು.

ಸಾಮೆ ಅಕ್ಕಿ : ಇದು ಮಾಸಲು ಬಿಳಿಯ ಬಣ್ನವನ್ನ ಹೊಂದಿರುತ್ತದೆ. ಸಂತಾನೋತ್ಪತ್ತಿ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸುವ ಇದು ಗಂಡಸರಲ್ಲಿನ ವೀರ್ಯಾಣುಗಳ ಸಂಖೆಯನ್ನ ಹೆಚ್ಚಿಸುತ್ತದೆ. ಜೊತೆಗೆ ಹೆಣ್ಣುಮಕ್ಕಳಲ್ಲಿ ಕಂಡುಬರುವ ಅಂಡಾಶಯ ತೊಂದರೆಗಳಿಗೆ ಸಹಕಾರಿಯಾಗಿದೆ.

ಆರ್ಕ ಅಕ್ಕಿ: ನಸು ಕೆಂಪುಬಣ್ನದಲ್ಲಿರುವ ಇದು ದೇಹದಲ್ಲಿನ ರಕ್ತವನ್ನ ಶುದ್ಧಿಮಾಡಿ, ಯಾವುದೇ ರೋಗಗಳು ನಿಮ್ಮ ಶರೀರದ ಹತ್ತಿರಕೂಡ ಸುಳಿಯದಂತೆ ನೊರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ.

ಊದಲು ಅಕ್ಕಿ : ನಿಮ್ಮ ಲಿವರ್ ನ್ನ ಶುದ್ದಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸುವ ಉದಲು ಅಕ್ಕಿ ಬಿಳಿಯ ಬಣ್ನವನ್ನ ಹೊಂದಿರುತ್ತೆ. ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಆಹಾರವಾಗಿರುವ ಇದು ಪ್ರಕೃತಿ ಕೊಟ್ಟ ಉಡುಗೊರೆ ಅಂತಲೇ ಹೇಳಲೇಬಹುದು.

ಕೊರಲೆ ಅಕ್ಕಿ : ಅತೀ ಹೆಚ್ಚು ನಾರಿನ ಅಂಶ ಹೊಂದಿರುವ ಕೊರಲೆ ತಿಳಿ ಹಸಿರು ಬಣ್ಣದಲ್ಲಿ ಇರುತ್ತೆ. ಪಚನಾಂಗಗಳ ಕಾರ್ಯ ದಕ್ಷತೆಯನ್ನ ಹೆಚ್ಚಿಸುವ ಇದು, ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಷ್ಟೆಲ್ಲಾ ಉಪಯೋಗಗಳಿರೋ ಈ ಸಿರಿಧಾನ್ಯಗಳನ್ನ ವಾರಕ್ಕೆ ಹತ್ತರಿಂದ ಹದಿನೈದು ಬಾರಿಯಾದ್ರೂ ತಿನ್ನಲು ಪ್ರಯತ್ನಿಸಿ..ಸದಾ ಆರೋಗ್ಯದಿಂದಿರಿ.