ಪ್ರೀತಿಸುತ್ತಿದ್ದ ಹುಡುಗನ ಜೊತೆ ಸಪ್ತಪದಿ ತುಳಿದ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರ್..ಇವರೇ ನೋಡಿ ಹುಡುಗ..

Entertainment
Advertisements

ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು, ಬರಹಗಾರ್ತಿ ಹಾಗೂ ನಿರ್ದೇಶಕಿ ಕೂಡ ಆಗಿರುವ ಚೈತ್ರಾ ಬಿಗ್ ಬಾಸ್ ಸೀಸನ್ ಏಳರಲ್ಲಿ ಗಾಸಿಪ್ ಗಳ ಜೊತೆಗೆ ಸಾಕಷ್ಟು ಹೆಸರು ಕೂಡ ಮಾಡಿದ್ದರು. ಪತ್ರಕರ್ತರಾಗಿದ್ದ ರವಿಬೆಳೆಗೆರೆ, ಕುರಿಪ್ರತಾಪ್ ಸೇರಿದಂತೆ ಹಲವು ಸ್ಪರ್ಧಿಗಳಿಂದ ಬಿಗ್ ಬಾಸ್ 7 ವಿಶೇಷವಾಗಿತ್ತು. ತಮ್ಮ ವಿಭಿನ್ನ ಮಾತಿನ ಮೂಲಕವೇ ಬಿಗ್ ಮನೆಯಲ್ಲಿ ಎಲ್ಲರ ಗಮನ ಸೆಳೆದಿದ್ದ ಚೈತ್ರಾ ಕೊಟ್ಟೂರ್ ಅವರು ಎರಡು ಬರಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡುವ ಅವಕಾಶ ಪಡೆದಿದ್ದವರು.

[widget id=”custom_html-4″]

Advertisements

ತಮ್ಮ ಮಾತುಗಳಿಂದಲೇ ಸಿಕ್ಕಾಪಟ್ಟೆ ಗಾಸಿಪ್ ಮಾಡಿಕೊಂಡಿದ್ದ ಚೈತ್ರಾ ಅವರು ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದರು. ಹೊರಗಡೆ ಹೋದ ಮೇಲೆ ನಿರ್ದೇಶನ ಮಾಡುವೆ ಎಂದು ಹೇಳಿದ್ದ ಚೈತ್ರಾ ಅವರು ಬಿಗ್ ಮನೆಯಿಂದ ಬಂಡ ಬಳಿಕ ಕಿರುತೆರೆಯ ಧಾರಾವಾಹಿಯೊಂದರಲ್ಲಿ ಕಾಣಿಸಿಕೊಂಡಿದ್ದರು. ಇದೆಲ್ಲದರ ನಡುವೆ ಈಗ ಚೈತ್ರಾ ಕೊಟ್ಟೂರ್ ಅವರು ತಾವು ಪ್ರೇಮಿಸುತ್ತಿದ್ದ ಹುಡುಗನ ಜೊತೆ ಇಂದು ಸಪ್ತಪದಿ ತುಳಿದಿದ್ದಾರೆ.

[widget id=”custom_html-4″]

ತಾವು ಕೆಲ ವರ್ಷಗಳಿಂದ ಪ್ರೀತಿ ಮಾಡುತಿದ್ದ ನಾಗಾರ್ಜುನ್ ಎಂಬುವವರ ಜೊತೆ ಇಂದು ಹೊಸ ಜೀವನ ಪ್ರಾರಂಭ ಮಾಡಿರುವ ಚೈತ್ರಾ ಕೊಟ್ಟೂರ್ ಅವರು ಬೆಂಗಳೂರಿನ ದೇವಾಲಯ ಓದ್ನರಲ್ಲಿ ತುಂಬಾ ಸಿಂಪಲ್ ಆಗಿ ಮದುವೆ ಮಾಡಿಕೊಂಡಿದ್ದಾರೆ. ಇನ್ನು ಹುಡುಗ ನಾಗಾರ್ಜುನ್ ಅವರು ಕೂಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನು ಚೈತ್ರಾ ಕೊಟ್ಟೂರು ನಾಗಾರ್ಜುನ್ ಅವರ ವಿವಾಹದಲ್ಲಿ ಕೇವಲ ಆಪ್ತರು ಹಾಗೂ ಕುಟುಂಬದವರು ಮಾತ್ರ ಭಾಗಿಯಾಗಿದ್ದು, ನವ ವಧು ವರರಿಗೆ ಶುಭಾಶಯಗಳನ್ನ ಹೇಳಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಕೂಡ ನೂತನ ದಂಪತಿಗಳಿಗೆ ಶುಭಾಶಯಗಳು ಹರಿದುಬಂದಿವೆ.