ಬಿಗ್ ಬಾಸ್ ಮನೆಯಲ್ಲಿ ಶುರುವಾಯ್ತು ಜಡೆ ಜಗಳ.. ಬೈದಾಡಿಕೊಂಡ ಮಹಿಳಾ ಸ್ಫರ್ಧಿಗಳು ! ಅಸಲಿಗೆ ನಡೆದಿದ್ದೇನು ಗೊತ್ತಾ ?

Uncategorized
Advertisements

ಬಿಗ್ ಬಾಸ್ ಸಂಚಿಕೆಗಳಲ್ಲಿ ಹೆಚ್ಚಾಗಿ ಪುರುಷ ಸ್ಪರ್ಧಿಗಳ ನಡುವೆ ಕಿರಿಕ್ ಆಗುವುದು ಸಾಮಾನ್ಯ. ಆಗಾಂತ ಮಹಿಳಾ ಸ್ಪರ್ಧಿಗಳು ಜಗಳ ಆಡುವುದಿಲ್ಲ ಅಂತಲ್ಲ. ಆದರೆ ಈಗ ನಡೆಯುತ್ತಿರುವ ಬಿಗ್ ಬಾಸ್ ಸಂಚಿಕೆಗಳಲ್ಲಿ ಮಹಿಳಾ ಮಣಿಗಳು ಜಗಳ ಆಡಿದ್ದು ತುಂಬಾ ಕಡಿಮೆ. ಆದರೆ ಈಗ ಬಿಗ್ ಮನೆಯಲ್ಲಿ ಮಹಿಳಾ ಸ್ಪರ್ಧಿಗಳ ನಡುವೆ ಗಲಾಟೆ ಸ್ಟಾರ್ಟ್ ಆಗಿದೆ. ಹೌದು, ನಟಿ ನಿಧಿ ಸುಬ್ಬಯ್ಯ ಮತ್ತು ವೈಲ್ಡ್ ಕಾರ್ಡ್ ಮೂಲಕ ಬಿಗ್ ಮನೆಗೆ ಎಂಟ್ರಿ ಕೊಟ್ಟಿರುವ ಪ್ರಿಯಾಂಕಾ ಅವರ ನಡುವೆ ಮನಸ್ತಾಪ ಏರ್ಪಟ್ಟಿದ್ದು ಜಡೆ ಜ’ಗಳ ಶುರುವಾಗಿದೆ.

[widget id=”custom_html-4″]

Advertisements

ಟಾಸ್ಕ್ ಒಂದರ ವಿಚಾರವಾಗಿ ನಿಧಿ ಸುಬ್ಬಯ್ಯ ಮತ್ತು ಪ್ರಿಯಾಂಕಾ ತಿಮ್ಮೇಶ್ ಅವರ ನಡುವೆ ಮಾತಿಗೆ ಮಾತುಬೆಳೆದು ಒಬ್ಬರಿಗೊಬ್ಬರು ಬೈ’ದಾಡಿಕೊಂಡಿದ್ದಾರೆ. ಬಿಗ್ ಬಾಸ್ ನೀಡಿದ್ದ ಹಾಸ್ಟೆಲ್ ಟಾಸ್ಕ್ ನ ವೇಳೆ ಪ್ರೇಮ ಪತ್ರ ಕೊಡುವ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಜ’ಗಳ ಶುರುವಾಗಿದ್ದು ನಟಿ ನಿಧಿ ಸುಬ್ಬಯ್ಯ ಪ್ರಿಯಾಂಕಾ ಅವರನ್ನ ಸ್ಟುಪಿಡ್ ಎಂದು ಬೈ’ದಿದ್ದಾರೆ. ಸಣ್ಣದಾಗಿ ಶುರುವಾಗಿದ್ದ ಈ ಮನಸ್ತಾಪ ಮತ್ತೊಂದು ಟಾಸ್ಕ್ ನ ವೇಳೆ ದೊಡ್ಡದಾಗಿದೆ. ಟಾಸ್ಕ್ ನಡೆಯುವ ವೇಳೆ ನಾನು ಆಡುತ್ತೇನೆ ಎಂದು ಮುಂದೆ ಬಂದಿದ್ದ ಪ್ರಿಯಾಂಕಾ ಅವರಿಗೆ ಅವಕಾಶ ನೀಡದ ನಿಧಿ ಸುಬ್ಬಯ್ಯ ಅವರು ಬೇರೆ ಸ್ಪರ್ಧಿಗೆ ಅವಕಾಶ ನೀಡಿದ್ದಾರೆ. ನಾವು ಟಾಸ್ಕ್ ಆಡುತ್ತೇವೆ ಎಂದರೆ ನಮಗ್ಯಾಕೆ ಅವಕಾಶ ನೀಡುತ್ತಿಲ್ಲ. ನಾವೇನು ಸ್ಟ್ರಾಂಗ್ ಇಲ್ವಾ..ಎಂದು ನೇರವಾಗಿಯೇ ಪ್ರಶ್ನೆ ಮಾಡಿದ್ದಾರೆ ಪ್ರಿಯಾಂಕಾ.

[widget id=”custom_html-4″]

ಟಾಸ್ಕ್ ಆಡಿಲ್ಲ ಎಂದರೆ ಆಸಕ್ತಿ ಇಲ್ಲ ಅಂತಾರೆ. ಆಡೋಕೆ ಬಂದ್ರೆ ಅವಕಾಶ ನೀಡೋದಿಲ್ಲ. ನೀವುಗಳೇ ಟಾಸ್ಕ್ ಗಳಲ್ಲಿ ಆಡೋದಾದ್ರೆ ನಾವು ಬಂದಿರೋದಾದ್ರೂ ಏತಕ್ಕೆ ಎಂದು ಪ್ರಿಯಾಂಕಾ ಅವರು ಚಂದ್ರಚೂಡ್ ಅವರೊಂದಿಗೆ ಹೇಳಿದ್ದಾರೆ. ಇನ್ನು ಈ ಪ್ರಿಯಾಂಕಾ ಬಗ್ಗೆ ದಿವ್ಯ ಉರುಡುಗ ಅವರ ಜೊತೆ ಮಾತನಾಡಿರುವ ನಿಧಿ ಸುಬ್ಬಯ್ಯ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದವರಿಗೆ ಬೇರೆಯದೇ ಉದ್ದೇಶ ಇರುತ್ತದೆ. ಇವರು ವೈಲ್ಡ್ ಕಾಲ್ಡ್ ಎಂಟ್ರಿ ಪಡೆದು ಬರೋದೇ ನಮ್ಮ ಜೊತೆ ಬೇಕು ಬೇಕಂತಲೇ ಗ’ಲಾಟೆ ಮಾಡೋಕೆ ಎಂದು ನಿಧಿ ಸುಬ್ಬಯ್ಯ ಹೇಳಿದ್ದಾರೆ. ಇನ್ನು ಈ ಜಡೆ ಜಗಳ ಮುಂದಿನ ಟಾಸ್ಕ್ ಗಳ ವೇಳೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.