ಕೊನೆಗೂ ನಿಂತೇ ಹೋಯ್ತು ಬಿಗ್ ಬಾಸ್ ! ವಿನ್ನರ್ ಯಾರೆಂದು ತೀರ್ಮಾನ ಮಾಡಿದ ವೀಕ್ಷಕರು..ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ?

Advertisements

ಈ ರೀತಿ ಆಗಬಹುದು ಎಂದು ಬಿಗ್ ಬಾಸ್ ವೀಕ್ಷಕರು ಕನಸಿನಲ್ಲಿಯೂ ಕೂಡ ಯೋಚನೆ ಮಾಡಿರೋದಿಲ್ಲ. ಹೌದು, ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ೮ ಕಾರ್ಯಕ್ರಮದ ವೀಕ್ಷಕರಿಗೆ ಕಹಿ ಸುದ್ದಿ ಎದುರಾಗಿದೆ. ಇನ್ನು ನಿಮಗೆಲ್ಲಾ ಗೊತ್ತಿರುವ ಹಾಗೆ ಕರ್ನಾಟಕ ಸೇರಿದಂತೆ ಇಡೀ ದೇಶದಾದ್ಯಂತ ಕೊರೋನಾ ಸೋಂಕಿನ ಎರಡನೇ ಅಲೆ ಅತೀ ತೀವ್ರವಾಗಿ ಹರಡುತ್ತಿದ್ದು ಇದರ ಪರಿಣಾಮ ಬೆಂಗಳೂರಿನಲ್ಲಿ ಈಗಾಗಲೇ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಇನ್ನು ಲಾಕ್ ಡೌನ್ ನಿಯಮಗಳಿಂದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಕಾರ್ಯಕ್ರವನ್ನ ಅರ್ಧದಲ್ಲೇ ನಿಲಿಸಲಾಗುತ್ತಿದೆ. ಇನ್ನು ಈ ರೀತಿ ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸಲ್ ೮ ಅರ್ಧದಲ್ಲೇ ನಿಲ್ಲುತ್ತಿರುವುದು ಇದೆ ಮೊದಲು..

[widget id=”custom_html-4″]

Advertisements

ಇನ್ನು ಇಲ್ಲಿಯವರೆಗೂ ಬಿಗ್ ಬಸ್ ಕಾರ್ಯಕ್ರಮ ತುಂಬಾ ಚೆನ್ನಾಗಿಯೇ ಪ್ರಸಾರವಾಗುತ್ತಿದ್ದು ಸ್ಪರ್ಧಿಗಳು ಕೂಡ ಅದ್ಭುತವಾಗಿ ಆಡುತ್ತಿದ್ದರು. ಇನ್ನು ಈಗ ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ದಿವ್ಯಾ ಸುರೇಶ್, ವೈಷ್ಣವಿ, ಪ್ರಿಯಾಂಕಾ, ಪಾವಗಡ ಮಂಜು, ಅರವಿಂದ್, ಪ್ರಶಾಂತ್ ಸಂಬರಗಿ, ಚಂದ್ರ ಚೂಡ್, ರಘು ಹಾಗು ಶಮಂತ್ ಸೇರಿದಂತೆ ೧೧ಜನ ಸ್ಪರ್ಧಿಗಳಿದ್ದಾರೆ. ಇನ್ನು ಮೊನ್ನೆಯಷ್ಟೇ ಅನಾರೋಗ್ಯದ ಕಾರಣದಿಂದಾಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ದರು. ಇನ್ನು ಬಿಗ್ ಬಸ್ ಕಾರ್ಯಕ್ರಮ ಬಂದ್ ಆಗಿರುವ ಕಾರಣ ಈಗ ಬಿಗ್ ಉಳಿದಿರುವ ೧೧ ಜನರಲ್ಲಿ ಯಾವ ಸ್ಪರ್ಧಿಯನ್ನ ಜಯಶಾಲಿ ಎಂದು ಪರಿಗಣಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಇನ್ನು ಕಾರ್ಯಕ್ರಮದ ಮಧ್ಯದಲ್ಲಿ ವೈಲ್ಡ್ ಕಾಲ್ಡ್ ಎಂಟ್ರಿಯಾಗಿ ಬಂದಿರುವ ಇಬ್ಬರು ಸ್ಪರ್ಧಿಗಳಾದ ಪ್ರಿಯಾಂಕಾ ತಿಮ್ಮೇಶ್ ಮತ್ತು ಚಂದ್ರಚೂಡ್ ಅವರನ್ನ ಬಿಟ್ಟು ಉಳಿದ ಸ್ಪರ್ಧಿಗಳಲ್ಲಿ ವಿನ್ನರ್ ಯಾರು ಎಂಬುದರ ಬಗ್ಗೆ ನೆಟ್ಟಿಗರು ಅವರಿಗೆ ಇಷ್ಟವಾದವರ ಸ್ಪರ್ಧಿಗಳ ಹೆಸರುಗಳನ್ನ ಕಾಮೆಂಟ್ ಮಾಡುತ್ತಿದ್ದಾರೆ.

[widget id=”custom_html-4″]

ಇನ್ನು ಬಹುತೇಕರು ಬೈಕರ್ ಅರವಿಂದ್ ಕೆಪಿ ಅಥ್ವಾ ಮಂಜು ಪಾವಗಡ ಈ ಶೋನ ವಿನ್ನರ್ ಎಂದು ಪರಿಗಣಿಸಬೇಕೆಂದು ಬಿಗ್ ಬಾಸ್ ವೀಕ್ಷಕರು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಇನ್ನು ನೆನ್ನೆಯಷ್ಟೇ ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಆಗಿರುವ ಪರಮೇಶ್ವರ್ ಗುಂಡ್ಕಲ್ ಅವರು ಬಿಗ್ ಬಾಸ್ ಕಾರ್ಯರ್ಕಮ ನಿಲ್ಲುತ್ತಿದೆ ಭಾವುಕರಾಗಿ ಬರೆದುಕೊಂಡು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು. ಇನ್ನು ಈ ಪೋಸ್ಟ್ ಗೆ ಕಾಮೆಂಟ್ ಮಾಡಿದ್ದ ಬಹುತೇಕರು ಈ ಸಲದ ಬಿಗ್ ಬಾಸ್ ವಿನ್ನರ್ ಪಟ್ಟಕ್ಕೆ ಅರವಿಂದ್ ಕೆಪಿ, ಮಂಜು ಪಾವಗಡ ಹಾಗೂ ಪ್ರಶಾಂತ್ ಸಂಬರಗಿ ಸ್ಪರ್ಧಿಗಳ ಹೆಸರನ್ನ ಪ್ರಸ್ತಾಪ ಮಾಡಿದ್ದಾರೆ. ಈ ಮೂರೂ ಸ್ಪರ್ಧಿಗಳು ಕೂಡ ವಿನ್ನರ್ ಪಟ್ಟಕ್ಕೆ ಸೂಕ್ತರು ಎಂದೇ ಕಾಮೆಂಟ್ ಗಳನ್ನ ಮಾಡುತ್ತಿದ್ದಾರೆ. ಆದರೆ ಬಿಗ್ ಬಾಸ್ ೮ ಕಾರ್ಯಕ್ರಮ ಮಧ್ಯದಲ್ಲೇ ನಿಂತುಹೋಗುತ್ತಿರುವುದರಿಂದ ಯಾರಿಗೂ ವಿನ್ನರ್ ಪಟ್ಟ ಸಿಗೋದಿಲ್ಲ ಎಂದು ಹೇಳಲಾಗುತ್ತಿದೆ. ಸ್ನೇಹಿತರೆ, ನಿಮ್ಮ ಪ್ರಕಾರ ಬಿಗ್ ಬಾಸ್ ವಿನ್ನರ್ ಪಟ್ಟಕ್ಕೆ ಯಾರು ಸೂಕ್ತರು ಎಂದು ಕಾಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ..