ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ ಮತ್ತೆ ಶುರು ! ಯಾವಾಗ ಯಾರೆಲ್ಲಾ ಸ್ಪರ್ಧಿಗಳು ಇರ್ತಾರೆ ನೋಡಿ..

Entertainment
Advertisements

ಕನ್ನಡ ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸಲ್ 8ರ ಕಾರ್ಯಕ್ರಮ ಕೊರೋನಾ ಸೋಂಕಿನ ಎರಡನೇ ಅಲೆಯಿಂದಾಗಿ ಲಾಕ್ ಡೌನ್ ಆದ ಪರಿಣಾಮ ಅರ್ಧಕ್ಕೆ ನಿಂತಿದ್ದು ಸ್ಫರ್ಧಿಗಳು ತಮ್ಮ ತಮ್ಮ ಮನೆಗಳಿಗೆ ಬಂದಿದ್ದರು. ಅಂದೇ ಮತ್ತೆ ಬಿಗ್ ಬಾಸ್ ಮತ್ತೆ ಪ್ರಾರಂಭವಾಗಲಿದೆ ಎಂಬ ಸುಳಿವು ಆಯೋಜಕರಿಂದ ಸಿಕ್ಕಿತ್ತು. 72ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಸ್ಫರ್ಧಿಗಳು ಕೂಡ ಶೋ ಅರ್ಧಕ್ಕೆ ನಿಂತ ಕಾರಣ ತಮ್ಮ ಬೇಸರವನ್ನ ಹೊರಹಾಕಿದ್ದರು. ಅರವಿಂದ್ ಕೆಪಿ, ಮಂಜು ಪಾವಗಡ, ಪ್ರಶಾಂತ್ ಸಂಬರ್ಗಿ,ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ವೈಷ್ಣವಿ, ದಿವ್ಯಾ ಸುರೇಶ್, ರಘುಗೌಡ ಶಮಂತ್ ಹಾಗೂ ವೈಲ್ಡ್ ಕಾರ್ಡ್ ನಿಂದ ಬಂದಿದ್ದ ಮತ್ತಿಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಅರ್ಧಕ್ಕೆ ನಿಂತ ಸಂದರ್ಭದಲ್ಲಿ ಬಿಗ್ ಮನೆಯಲ್ಲಿ ಉಳಿದುಕೊಂಡಿದ್ದವರು.

[widget id=”custom_html-4″]

Advertisements

ಇನ್ನು ಬಿಗ್ ಬಾಸ್ ೮ರಲ್ಲಿ ಗೆಲ್ಲುವ ಸ್ಪರ್ಧಿಗಳು ಎನಿಸಿದ್ದವರು ಮಂಜು ಪಾವಗಡ ಮತ್ತು ಅರವಿಂದ್ ಕೆಪಿ. ಅದರಲ್ಲೂ ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾದದಿಂದ ಆಡುತ್ತಿದ್ದ ಮಂಜು ಪಾವಗಡ ಅವರಂತೂ ಬಿಗ್ ಬಾಸ್ ಅರ್ಧಕ್ಕೆ ನಿಂತ ಕಾರಣ ತುಂಬಾ ಬೇಸರಗೊಂಡು ತಮ್ಮ ನೋವನ್ನ ಹೊರಹಾಕಿದ್ದರು. ಇನ್ನು ಬಿಗ್ ಬಾಸ್ ರದ್ದಾದ ಬಳಿಕ ಹೊರಬಂದ ಸ್ಫರ್ಧಿಗಳು ಮಾಧ್ಯಮ ವಾಹಿನಿಗಳಲ್ಲಿ ಕಾಣಿಸಿಕೊಂಡು ಸಂದರ್ಶನದ ನೀಡಿದ್ದು ಬಿಗ್ ಬಾಸ್ ಬಗೆಗೆ ಮಾಹಿತಿಯನ್ನ ಹಂಚಿಕೊಂಡಿದ್ದರು. ಇನ್ನು ಸ್ಪರ್ಧಿಗಳು ಸಹ ಮತ್ತೆ ಯಾವಾಗ ಬಿಗ್ ಬಾಸ್ ಶುರುವಾಗಲಿದೆ ಎಂಬುದರ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದರು ಎನಿಸುತ್ತೆ..

[widget id=”custom_html-4″]

ಈಗ ಬಿಗ್ ಬಾಸ್ ಸೀಸನ್ ೮ರ ಆಯೋಜಕರು ಬಿಗ್ ಬಾಸ್ ಸ್ಪರ್ಧಿಗಳೂ ಹಾಗೂ ವೀಕ್ಷಕರಿಗೆ ಸಿಹಿಸುದ್ದಿಯೊಂದನ್ನ ನೀಡಿದ್ದಾರೆ. ಬಿಗ್ ಬಾಸ್ ಸೀಸನ್ 8 ಮತ್ತೆ ಆರಂಭವಾಗಲಿದೆ ಎಂಬುವುದರ ಬಗ್ಗೆ ಸುಳಿವು ನೀಡಿದ್ದಾರೆ. ಹೌದು, ಮಾಹಿತಿಗಳ ಪ್ರಕಾರ ಇದೆ ಜೂನ್ ಕೊನೆಯ ವಾರ ಅಥ್ವಾ ಮುಂದಿನ ತಿಂಗಳು ಜುಲೈನ ಮೊದಲ ವಾರವೇ ಅರ್ಧಕ್ಕೆ ನಿಂತ ಬಿಗ್ ಬಾಸ್ ೮ ಮತ್ತೆ ಶುರುವಾಗುವ ಸಾಧ್ಯತೆಗಳು ಹೆಚ್ಚಿವೆ ಹೇಳಲಾಗಿದೆ. ಹಾಗಾಗಿ ಬಿಗ್ ಬಾಸ್ ಅರ್ಧಕ್ಕೆ ನಿಂತ ಸಮಯದಲ್ಲಿದ್ದ ಸ್ಪರ್ಧಿಗಳು ಯಾರೂ ಕೂಡ ಮನೆ ಬಿಟ್ಟು ಆಚೆ ಹೋಗಬಾರದು ಎಂದು ಬಿಗ್ ಬಾಸ್ ಆಯೋಜಕರು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಇಷ್ಟೆಲ್ಲಾ ಮಾಹಿತಿ ಸಿಕ್ಕಿದ ಮೇಲೆ ಬಿಗ್ ಬಸ್ ಸೀಸನ್ ೮ಬ ಮತ್ತೆ ಶುರುವಾಗುವುದು ಖಚಿತ ಎಂದು ಹೇಳಲಾಗುತ್ತಿದೆ. ಸ್ನೇಹಿತರೇ, ಅರ್ಧಕ್ಕೆ ನಿಂತಿರುವ ಬಿಗ್ ಬಾಸ್ ಸೀಸನ್ 8 ಕಾರ್ಯಕ್ರಮ ಮತ್ತೆ ಶುರುವಾಗಬೇಕೋ ಭೇಡವೋ ನಿಮ್ಮ ಅಭಿಪ್ರಾಯ ತಿಳಿಸಿ..