TV ಬೈಕ್ ಫ್ರಿಡ್ಜ್ ಇದ್ರೆ BPL ಕಾರ್ಡ್ ಕ್ಯಾನ್ಸಲ್ ಆಗುತ್ತಾ?ಅಸಲಿಗೆ ಸರ್ಕಾರ ಹೇಳಿದ್ದೇನು?

Kannada News

ಸ್ನೇಹಿತರೇ, ಸಾಮಾಜಿಕ ಜಾಲತಾಣಗಳಲ್ಲಿ ಬುಲೆಟ್ ಟ್ರೈನ್ ವೇಗದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿಬಿಡುತ್ತವೆ. ಅದು ನಿಜಾನಾ ಸತ್ಯನಾ ಅನ್ನೋ ಯೋಚನೆ ಕೂಡ ಮಾಡದೆ ಶೇರ್ ಆಗುತ್ತಲೇ ಇರುತ್ತದೆ. ಅದರಲ್ಲೂ ಈ ವಿಚಾರ ಬಡಜನರು ಹಾಗು ಮಧ್ಯಮವರ್ಗದ ಜನರ ಆತಂಕಕ್ಕೆ ಕರಣವಾಗಿದ್ದಂತೂ ಸುಳ್ಳಲ್ಲ. ಹೌದು, ಸರ್ಕಾರ ಆದೇಶ ಮಾಡಿದೆ ಎನ್ನಲಾದ ಬಿಪಿಎಲ್ ಪಡಿತರ ಕುರಿತಾದ ಈ ವಿಚಾರ ತುಂಬಾ ಬೇಗನೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಅಂದ ಹಾಗೆ ಆ ವಿಚಾರ ಏನೆಂದರೆ, ಮನೆಯಲ್ಲಿ ಬೈಕ್, ಟಿವಿ, ಫ್ರಿಡ್ಜ್ ಇರುವ ಕುಟುಂಬಗಳ ಬಿಪಿಎಲ್ ಕಾರ್ಡ್ ರದ್ದು ಮಾಡುವುದಾಗಿ ಸರ್ಕಾರ ಆದೇಶ ನೀಡಿದೆ ಎನ್ನಲಾಗಿತ್ತು..

ಆದರೆ, ಹೀಗೆ ವೈರಲ್ ಆಗಿರುವ ವಿಚಾರ ಅಪ್ಪಟ ಸುಳ್ಳು ಎಂದು ಹೇಳಲಾಗಿದ್ದು ರಾಜ್ಯದ ಆಹಾರ ಮತ್ತು ನಾಗರೀಕ ಇಲಾಖೆ ಬಿಪಿಎಲ್ ಕುರಿತಂತೆ ಸ್ಪಷ್ಟನೆಯೊಂದನ್ನ ಕೊಟ್ಟಿದ್ದು ಬಡವರು ಹಾಗೂ ಮಧ್ಯಮ ವರ್ಗದ ಜನರು ನಿರಾಳವಾಗುವಂತೆ ಮಾಡಿದೆ. ಹೌದು, ಟಿವಿ, ಬೈಕ್ ಹಾಗೂ ಫ್ರಿಡ್ಜ್ ಹೊಂದಿರುವ ಕುಟುಂಬಗಳ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತೇವೆ ಎಂಬುವ ವಿಚಾರವಾಗಿ ಸ್ಪಷ್ಟನೆ ಕೊಟ್ಟಿರುವ ಸರ್ಕಾರದ ಆಹಾರ ಮತ್ತು ನಾಗರೀಕ ಇಲಾಖೆ ಇದು ಸುಳ್ಳಾಗಿದ್ದು ಈ ರೀತಿಯ ಯಾವುದೇ ಆದೇಶ ಸರ್ಕಾರದಿಂದ ಹೊರಡಿಸಿಲ್ಲ ಎಂದು ಹೇಳಲಾಗಿದೆ. ಮನೆಯಲ್ಲಿ ಟಿವಿ ಇರಲಿ, ಬೈಕ್ ಹಾಗೂ ಫ್ರಿಡ್ಜ್ ಕೂಡ ಇರಲಿ ಅವರು ಪಡಿತರ ಪಡೆಯಲು ಅರ್ಹರಾಗಿದ್ದಾರೆ ಎಂದು ಆಹಾರ ಮತ್ತು ನಾಗರೀಕ ಇಲಾಖೆ ಹೇಳಿದೆ.

ಆದರೆ ಯಾವುದೇ ಕುಟುಂಬದ ವಾರ್ಷಿಕ ಆದಾಯ ಒಂದು ಲಕ್ಷ ಇಪ್ಪತ್ತು ಸಾವಿರಕ್ಕಿಂತ ಹೆಚ್ಚಿದ್ದು ಅವರು ಮೂರೂ ಎಕರೆಗಳಿಂತ ಹೆಚ್ಚು ಜಮೀನನ್ನ ಉಳ್ಳವರಾಗಿದ್ದು ಅವರ ಕುಟುಂಬದ ಸ್ಥಿತಿಗತಿಗಳು ಉತ್ತಮವಾಗಿದ್ದಲ್ಲಿ ಅಂತಹವರ ಬಿಪಿಎಲ್ ಕಾರ್ಡ್ ಗಳನ್ನ ಎಪಿಲ್ ಕಾರ್ಡ್ ಗಳಿಗೆ ವರ್ಗಾವಣೆ ಮಾಡುವ ಸಲುವಾಗಿ ಆದೇಶ ಹೊರಡಿಸಲಾಗಿದೆ ಎಂದು ಆಹಾರ ಮತ್ತು ನಾಗರೀಕ ಇಲಾಖೆ ಹೇಳಿದೆ. ಸ್ನೇಹಿತರೇ, ನೀವೇ ಯೋಚನೆ ಮಾಡಿ, ಒಂದು ವೇಳೆ ಬೈಕ್, ಫ್ರಿಡ್ಜ್, ಟಿವಿ ಹೊಂದಿರುವ ಬಿಪಿಎಲ್ ಕಾರ್ಡ್ ಗಳನ್ನ ರದ್ದು ಮಾಡಲಾಗುವುದು ಎಂಬ ಆದೇಶ ಬಂದರೆ, ರಾಜ್ಯದ ೯೦ರಷ್ಟು ಭಾಗ ಬಿಪಿಎಲ್ ಕಾರ್ಡ್ ಗಳನ್ನ ರದ್ದು ಮಾಡಬೇಕಾಗಿ ಬರುವುದು..ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂಬುದನ್ನ ತಿಳಿಸಿ..