ಯಾವ ಸ್ಟಾರ್ ನಟನಿಗಿಂತಲೂ ಕಡಿಮೆಯಿಲ್ಲ ಈ ನಟನ ಸಂಭಾವನೆ ! ಇವರ ಆಸ್ತಿ ಎಷ್ಟು ಗೊತ್ತಾ.?

Cinema

ನಮಸ್ತೇ ಸ್ನೇಹಿತರೇ, ಈ ನಟ ತೆರೆ ಮೇಲೆ ಬಂದರೆ ಸಾಕು ಸ್ಟಾರ್ ನಟರಿಗೂ ಕಡಿಮೆ ಇಲ್ಲ ಎನ್ನುವಂತೆ ಸಿಳ್ಳೆಗಳು ಬೀಳುತ್ತವೆ. ತನ್ನ ವಿಭಿನ್ನ ಹಾಸ್ಯ ಅಭಿನಯದಿಂದ ಕೋಟ್ಯಂತರ ಜನರನ್ನ ನಕ್ಕು ನಲಿಸಿದವರು. ಇವರು ಮಾಡಿರುವ ಪಾತ್ರಗಳಿಗೆ ಲೆಕ್ಕವೇ ಇಲ್ಲ. ಹಾಗಾಗಿಯೇ ಅವರಿಗೆ ಗಿನ್ನಿಸ್ ಅವಾರ್ಡ್ ಕೂಡ ಸಿಕ್ಕಿದೆ. ಅವರೇ ಟಾಲಿವುಡ್ ನ ಹಾಸ್ಯ ಬ್ರಹ್ಮ ಎಂದೇ ಖ್ಯಾತರಾಗಿರುವ ಹಾಸ್ಯ ನಟ ಬ್ರಹ್ಮಾನಂದಂ ಅವರು. ಇನ್ನು ಕನ್ನಡ ಸೇರಿದಂತೆ ತಮಿಳಿನ ಕೆಲ ಚಿತ್ರಗಳಲ್ಲೂ ಬ್ರಹ್ಮಾನಂದಂ ನಟಿಸಿದ್ದಾರೆ. ಇಷ್ಟು ವಯಸ್ಸಾದರೂ ಕೂಡ ಇನ್ನು ತೆಲುಗು ಚಿತ್ರರಂಗದಲ್ಲಿ ಬ್ರಹ್ಮಾನಂದಂ ಅವರು ಬೇಡಿಕೆಯ ನಟ ಎಂದೆನಿಸಿಕೊಂಡಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ಹಾಸ್ಯಕ್ಕೆ ಮತ್ತೊಂದು ಹೆದರು ಅದು ಬ್ರಹ್ಮಾನಂದಂ ಅವರು. ೮೦ರ ದಶಕದ ಸ್ಟಾರ್ ನಟರಿಂದ ಹಿಡಿದು ಈಗಿನ ತೆಲುಗಿನ ಯುವ ನಟರ ಚಿತ್ರಗಳಲ್ಲಿ ಹಾಸ್ಯ ನಟನಾಗಿ ನಟಿಸಿ ನಕ್ಕು ನಲಿಸಿದ ಬ್ರಹ್ಮಾನಂದಂ ಅವರು ತಮ್ಮ ನಟನೆಗಾಗಿ ಪ್ರತಿಷ್ಠಿತ ಪದ್ಮಶ್ರೀ ಸೇರಿದಂತೆ ಅನೇಕ ಪ್ರಶಸ್ತಿಗಳನ್ನ ಪಡೆದುಕೊಂಡ ದಿಗ್ಗಜ ನಟ. ಇನ್ನು ಈ ಹಿರಿಯ ನಟನ ಸಂಭಾವನೆ ಬಗ್ಗೆ ಕೇಳಿದ್ರೆ ಅಚ್ಚರಿಯಾಗ್ತೀರಾ..ಹೌದು, ಇಲ್ಲಿವರೆಗೂ ಒಂದು ಸಾವಿರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಬ್ರಹ್ಮಾನಂದಂ ಅವರು ಕೆಲ ನಾಯಕ ನಟರು ಪಡೆಯುವ ಸಂಭಾವನೆಗಿಂತಲೂ ಅಧಿಕ ಸಂಭಾವನೆ ಪಡೆಯುತ್ತಾರೆ.

ಇನ್ನು ಇಷ್ಟೊಂದು ಚಿತ್ರಗಳಲ್ಲಿ ನಟಿಸಿರುವ ಅಧಿಕ ಸಂಭಾವನೆ ಪಡೆಯುವ ಬ್ರಹ್ಮಾನಂದಂ ಅವರ ಆಸ್ತಿ ಎಷ್ಟಿರಬಹುದು ಬಗ್ಗೆ ಯಾರಿಗೆ ತಾನೇ ಕುತೂಹಲ ಇರಲ್ಲ ಹೇಳಿ..ತಮ್ಮ ಪಾತ್ರ ಮತ್ತು ಚಿತ್ರೀಕರಣದ ಅವಧಿಗೆ ತಕ್ಕಂತೆ ಸಂಭಾವನೆ ಪಡೆಯುವ ಬ್ರಹ್ಮಾನಂದಂ ಅವರು ಮಾಹಿತಿಗಳ ಪ್ರಕಾರ ಎರಡು ಕೋಟಿಗಳವರೆಗೆ ಸಂಭಾವನೆ ಪಡೆಯುತ್ತಾರೆ. ಹಾಗೂ ಕೆಲವೊಂದು ಪಾತ್ರಗಳಿಗೆ ಒಂದು ಕೋಟಿ ಪಡೆಯುತ್ತಾರೆ ಎನ್ನಲಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬ್ರಹ್ಮಾನಂದಂ ಅವರು ಸಿನಿಮಾಗಳಲ್ಲಿ ನಟಿಸಿವುದು ಕಡಿಮೆಯಾಗಿದ್ದು, ೨೦೧೭ರ ವರ್ಷದ ಲೆಕ್ಕಾಚಾರದಂತೆ ಇವರ ಆಸ್ತಿ ಮೌಲ್ಯ 315ಕೋಟಿಗಿಂತ ಅಧಿಕ ಎನ್ನಲಾಗಿದೆ. ಇನ್ನು ಈಗ ಬ್ರಹ್ಮಾನಂದಂ ಅವರ ಆಸ್ತಿಯ ಮೌಲ್ಯ ಸುಮಾರು ೪೫೦ ಕೋಟಿಗಿಂತ ಅಧಿಕ ಎಂದು ಹೇಳಲಾಗಿದೆ.

ಟಾಲಿವುಡ್ ನ ಸಿರಿವಂತ ನಟರಲ್ಲಿ ಒಬ್ಬರೆನಿಸಿಕೊಂಡಿರುವ ಬ್ರಹ್ಮಾನಂದಂ ಅವರು ಹಲವು ಕಡೆ ಕೃಷಿ ಭೂಮಿ ಹೊಂದಿದ್ದು ಇದರ ಜೊತೆಗೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತಮ್ಮ ಹಣ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಅಭಿಮಾನಿಗಳ ಸಿಂಹಾಸನದಲ್ಲಿ ವಿರಾಜಮಾನರಾಗಿರುವ ತೆಲುಗಿನ ಹಾಸ್ಯ ಬ್ರಹ್ಮ ನಟ ಬ್ರಹ್ಮಾನಂದಂ ಅವರು ಮತ್ತಷ್ಟು ಚಿತ್ರಗಳಲ್ಲಿ ನಟಿಸಿ ಜನರನ್ನ ರಂಜಿಸಿಲಿ ಎಂಬುದೇ ನಮ್ಮ ಆಶಯ.