ಫೇಮಸ್ ಪಾಪ್ ತಾರೆಗೆ 13ವರ್ಷಗಳಿಂದ ತಂದೆಯಿಂದಲೇ ದಿಗ್ಬಂಧನ! ಸಾವಿರಾರು ಕೋಟಿ ಆಸ್ತಿ ಒಡತಿಗೆ ಸ್ವಾತಂತ್ರ್ಯವೇ ಇಲ್ಲ!?

Entertainment

ಬೇಬಿ ಒನ್ ಮೋರ್ ಟೈಂ! ಈ ಹಾಡಿನಲ್ಲಿ ಬ್ರಿಟ್ನಿ ಸ್ಪಿಯರ್ಸ್ ಅವರು, MY LONLINESS IS SCARING ME ಅಂತಾರೆ. ಇದನ್ನು ಇವರು ಕೇವಲ ಆಲ್ಬಂಗಾಗೆ ಹಾಡಿರೋದು. ಆದ್ರೆ, ಇವರು ಇದೀಗ ಸಂಪೂರ್ಣ ಬಂ’ಧಿಯಾಗಿದ್ದಾರೆ. ಇವರು ಮಾಡುವ ಯಾವುದೆ ಕೆಲಸವೂ, ತನ್ನ ಸ್ವಇಚ್ಛೆಯಿಂದ ಮಾಡುವ ಹಾಗೆ ಇಲ್ಲ. ಅವರ ತಂದೆ, ಒಬ್ಬಳೇ ಇರು ಅಂದ್ರೆ ಇರ್ಬೇಕು, ಇಂತ ಕೆಲ್ಸ ಮಾಡು ಅಂದ್ರೆ ಮಾಡ್ಬೇಕು. ರೂಂನಲ್ಲಿ ಒಬ್ಬಳೇ, ಯಾರನ್ನು ಮಾತನಾಡಿಸಬೇಡ ಅಂದ್ರೆ ತಲೆ ಬಗ್ಗಿಸಿ ಹೇಳಿದಂತೆ ಕೇಳ್ಬೇಕು. ಈ ತರ ನಿರ್ಬಂಧಗಳನ್ನ ಸಾಮಾನ್ಯರಾದ ನಾವೇ ಕೇಳಲ್ಲ. ಆದ್ರೆ ವಿಶ್ವ ಪ್ರಸಿದ್ಧ ಬ್ರಿಟ್ನಿ ಸ್ಪಿಯರ್ಸ್ ಅವರು ಅನುಭವಿಸುತ್ತಿರುವ ಪರಿಸ್ಥಿತಿಯೇ ಇದು. ಯಾಕೀಗೆ, ಅವರ ತಂದೆ ಅಷ್ಟೊಂದು ಕ್ರೂ’ರಿನಾ ? ಹೇಳ್ತೀವಿ ನೋಡಿ. ಭಾರತ ಸೇರಿದಂತೆ, ಜಗತ್ತಿನಾದ್ಯಂತ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿರುವ ಬ್ರಿಟ್ನಿ ಸ್ಪಿಯರ್ಸ್, ಕೋಟ್ಯಾಂತರ ಆಸ್ತಿಯ ಒಡತಿ. ಪಾಪ್ ಲೋಕದಲ್ಲೇ ಹೊಸ ಹಾಡಿನ ಅಲೆ ಸೃಷ್ಟಿ ಮಾಡಿರುವ ಈಕೆ ವರ್ಲ್ಡ್ ಫೇಮಸ್ ಪಾಪ್ ತಾರೆ. ಆದರೆ ತಮ್ಮ ವೈಯುಕ್ತಿಕ ಜೀವನದಲ್ಲಿ ಇದನ್ಯಾವುದನ್ನು ಅನುಭವಿಸುವ ಹಕ್ಕೇ ಇಲ್ಲದಂತೆ ಆಗಿಹೋಗಿದೆ. ಅಷ್ಟೆ ಯಾಕೆ ತಮ್ಮ ಬದುಕಿನ ಕುರಿತಾಗಿ ಇವರು ಯಾವ ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕೆ ಇಲ್ಲ. ಹೌದು, ಇದು ವಿಚಿತ್ರವಾದರೂ ನಿಜ.

ಬ್ರಿಟ್ನಿ ಸ್ಪಿಯರ್ಸ್ ಅಕ್ಷರಸಃ ತನ್ನ ತಂದೆಯ ಕೈಕೆಳಗೆ ಬಂಧಿಯಾಗಿ ಬಿಟ್ಟಿದ್ದಾರೆ. ತನ್ನ ತಂದೆಯನ್ನು ಎದುರು ಹಾಕಿಕೊಂಡು ಹೊರಗೆ ಬರಬೇಕು ಎಂದು ಕೊಂಡರೂ, ಅದು ಬ್ರಿಟ್ನಿಯಿಂದ ಸಾಧ್ಯವಾಗುತ್ತಲೇ ಇಲ್ಲ. ಬ್ರಿಟ್ನಿ ಸ್ಪಿಯರ್ಸ್ ತನ್ನ ಸಂಪೂರ್ಣ ಸ್ವಾತಂತ್ರವನ್ನು, ತನ್ನ ತಂದೆಗೆ ಕೊಟ್ಟು 13 ವರ್ಷಗಳಾಗಿ ಹೋಗಿದೆ. ಬ್ರಿಟ್ನಿಯ ಎಲ್ಲ ಆರ್ಥಿಕ ಹಾಗೂ ನಾಗರೀಕ ಸ್ವಾತಂತ್ರದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ತನ್ನ ತಂದೆ ಜೇಮಿ ಸ್ಪಿಯರ್‌ಗೆ ಅಮೆರಿಕಾದ ಕೋರ್ಟ್ ಆದೇಶ ನೀಡಿದೆ. ಅಂದಿನಿಂದ ಇಂದಿನವರೆಗೂ ಆಕೆಗೆ ಬೇಕಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಆಗದೆ, ತನ್ನ ಸಂಪೂರ್ಣ ಹಕ್ಕನ್ನು ತನ್ನ ತಂದೆಗೆ ನೀಡಿ ಬಿಟ್ಟಿದ್ದಾಳೆ ಪಾಪ್ ತಾರೆ. ಇವಳ ಸ್ವಾತಂತ್ರ್ಯವನ್ನು ಕೇಳಿಕೊಂಡು ಕೋರ್ಟ್ ಮೆಟ್ಟಿಲೇರಿದ ಬ್ರಿಟ್ನಿಗೆ, ಅಲ್ಲೂ ಕೂಡ ಮನ್ನಣೆ ಸಿಕ್ಕಿಲ್ಲ. ನಿಮ್ಮ ಸ್ವಾತಂತ್ರ್ಯ ನಿಮ್ಮ ತಂದೆ ಕೈಯಲ್ಲಿ ಇರಲಿದೆ ಎಂದು ಹೇಳಿ ಕಳಿಸಿಬಿಟ್ಟಿದೆ. ಬ್ರಿಟ್ನಿ ಸದ್ಯ ಅಮೆರಿಕ ಕೋರ್ಟ್‌ನ ಕನ್ಸರ್ವೇಟರ್ ಶಿಪ್ ಕಾಯ್ದೆಯ ಅಡಿಯಲ್ಲಿದ್ದಾಳೆ. ಮಾ’ನಸಿಕವಾಗಿ ತೊಂದರೆಯಲ್ಲಿರುವ ರೋಗಿಗಳು, ಏನಾದರೂ ತಪ್ಪು ಮಾಡಿದರೆ ಅಂತವರನ್ನು ವೈದ್ಯರ ಸೂಚನೆ ಪಡೆದು ಈ ಕಾಯ್ದೆಯ ಅಡಿಯಲ್ಲಿ, ಅವರನ್ನು ಕಾಯುವ ಕಂಸರ್ವೇಟರ್‌ಗಳನ್ನು ಅಂದರೆ ಸಂರಕ್ಷಕರನ್ನು ಗುರುತಿಸುತ್ತಾರೆ. ಗುರುತಿಸಿದ ಸಂರಕ್ಷಕರಿಗೆ ಆ ರೋಗಿಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಲಾಗುತ್ತದೆ. ಇದರಲ್ಲಿ ನಾಗರೀಕ ಹಕ್ಕು, ಆರ್ಥಿಕ ಹಕ್ಕು ಹಾಗೂ ಸಾಮಾನ್ಯ ಮನುಷ್ಯನಿಗೆ ಇರಬೇಕಾದ ಎಲ್ಲ ಹಕ್ಕನ್ನು ತೆಗೆದುಕೊಂಡು ಅದೇ ಕಂಸರ್ವೇಟರ್‌ಗಳಿಗೆ ವಹಿಸಲಾಗುತ್ತದೆ.

ಇದೀಗ ಬ್ರಿಟ್ನಿ ಇದೆ ಕಾಯ್ದೆಯ ಅಡಿಯಲ್ಲಿ ತನ್ನ ಸಂಪೂರ್ಣ ಹಕ್ಕನ್ನು ಕಳೆದುಕೊಂಡಿರೋದು. ಹಾಗಾದ್ರೆ ಪಾಪ್ ಗಾಯಕಿ ಮಾ’ನಸಿಕವಾಗಿ ಸದೃಢವಾಗಿಲ್ವಾ? ಹೌದು! ತನ್ನ ಅದ್ಭುತ ಗಾಯನದಿಂದ ವಿಶ್ವದೆಲ್ಲೆಡೆ ಫೇಮಸ್ ಆಗಿದ್ದ ಬ್ರಿಟ್ನಿ ಮಾ’ನಸಿಕವಾಗಿ ಕುಗ್ಗಿ ಹೋಗಿದ್ದರು. ತಮ್ಮ ಮನಸ್ಸನ್ನು ಸೀಮಿತದಲ್ಲಿಡಲು ಸೋತು ಹೋಗಿದ್ದರು. ಬೀದಿ ಬೀದಿಯಲ್ಲಿ ಹೇಗೇಗೋ ಓಡಾಡಲು ಶುರು ಮಾಡಿದ್ದರು. ಇದ್ದಕ್ಕಿದಂತೆ ತನ್ನ ಕೇಶರಾಶಿಯನ್ನೆ ಸಂಪೂರ್ಣ ಬೋಳಿಸಿ ರಸ್ತೆಗೆ ಬಂದು ಬಿಟ್ಟಿದ್ದರು. ಈ ಎಲ್ಲ ಕಾರಣದಿಂದ ಆಕೆ ಮಾ’ನಸಿಕವಾಗಿ ಕುಂದಿದ್ದಾರೆ ಎನ್ನುವುದು ಗೊತ್ತಾಗುತ್ತೆ. ಆದರೆ ಈ ವರ್ತನೆಗೆ ಬ್ರಿಟ್ನಿ ತನ್ನ ಸ್ವಾತಂತ್ರ್ಯ ಕಳೆದುಕೊಂಡಿಲ್ಲ. ಬ್ರಿಟ್ನಿ ಫೇಮಸ್ ಆಗಿದ್ದೆ, ಆಕೆಯ ಈ ಪರಿಸ್ಥಿತಿಗೆ ಕಾರಣ ಎನ್ನಲಾಗುತ್ತೆ. ಅವಳು ಎಲ್ಲಿ ಹೋಗುತ್ತಾಳೋ ಅಲ್ಲಲ್ಲಿಗೆ ಫೋಟೋಗ್ರಾಫರ್ಸ್​ಗಳು ಹಿಂಬಾಲಿಸಿ ಬರ್ತಾ ಇದ್ರು. ಬೇಸತ್ತ ಗಾಯಕಿ ಒಮ್ಮೆ ತನ್ನ ಹಿಂಬಾಲಿಸಿ ಬಂದ ಫೋಟೋಗ್ರಾಫರ್ ಹಾಗೂ ಅವನ ಕಾರ್ ಮೇಲೆ ಛತ್ರಿಯಲ್ಲಿ ಹೊ’ಡೆದು ಹ’ಲ್ಲೆ ಮಾಡಿ ಬಿಟ್ಟಿದ್ದರು. ಇದರಿಂದ ಈಕೆಯ ಮೇಲೆ ಕೇಸ್ ದಾಖಲಾಗಿತ್ತು. ಅಲ್ಲದೆ ಮಾ’ದಕ ವಸ್ತುಗಳ ವ್ಯ’ಸನಿಯಾಗಿದ್ದಾರೆ ಎಂದು ಬ್ರಿಟ್ನಿಯನ್ನು ಅರೆಸ್ಟ್ ಮಾಡಿ ಎಂದು ಅಮೆರಿಕ ಕೋರ್ಟ್ ಆದೇಶ ಹೊರಡಿಸಿತ್ತು.

ಬ್ರಿಟ್ನಿ ಮಾಡಿದ ಹ’ಲ್ಲೆಗೆ ಅಮೆರಿಕ ಕೋರ್ಟ್ ಅವರನ್ನು ಬಂಧಿಸಲು ಸೂಚನೆ ಕೊಟ್ಟ ಬೆನ್ನಲ್ಲೇ ತನ್ನ ತಂದೆ, ಆಕೆ ಮಾ’ನಸಿಕವಾಗಿ ತೊಂದರೆಗೆ ಒಳಗಾಗಿದ್ದಾಳೆ. ಆಕೆಯನ್ನು ಕನ್ಸರ್ವೇಟರ್ ಶಿಪ್ ಕಾಯ್ದೆ ಅಡಿ ತನಗೆ ಒಪ್ಪಿಸಲು ಬೇಡಿಕೊಂಡಿದ್ದಾರೆ. ಇದನ್ನು ಕೋರ್ಟ್ ಒಪ್ಪಿಗೆ ಸೂಚಿಸಿ, ಆಕೆಯನ್ನು ತನ್ನ ತಂದೆ ಜವಾಬ್ದಾರಿಯೆಂದು ಘೋಷಿಸಿ ಬಿಟ್ಟಿದ್ದಾರೆ. ಬ್ರಿಟ್ನಿ ಕನ್ಸರ್ವೇಟರ್ ಶಿಪ್ ಕಾಯ್ದೆ ಅಡಿ ಆಕೆ ತಂದೆ ಕೆಳಗೆ ಬಂ’ಧಿಯಾದಾಗನಿಂದ ಆಕೆಗೆ ಈ ಎಲ್ಲ ಹಕ್ಕು ಕೈ ಚೆಲ್ಲಿದಂತಾಗಿದೆ. ತನ್ನೆರಡು ಮಕ್ಕಳನ್ನು ಮಾಜಿ ಪತಿಗೆ ಒಪ್ಪಿಸಲು ಕೋರ್ಟ್ ಸೂಚನೆ ನೀಡಿತ್ತು ಹಾಗೂ ಈಕೆಗೆ ಮತ್ತೊಂದು ಮದುವೆ ಆಗುವ ಹಕ್ಕಿಲ್ಲ ಹಾಗೂ ಇನ್ನು ಹೆಚ್ಚಿನ ಮಕ್ಕಳನ್ನು ಪಡೆಯುವ ಅವಕಾಶವಿಲ್ಲ ಎನ್ನಲಾಗುತ್ತದೆ. ಇಷ್ಟೆಲ್ಲಾ ಆಗಿ ಬರೋಬ್ಬರಿ 13 ವರ್ಷಗಳಾಗಿ ಹೋಗಿದೆ. ಆದರೂ ಈಕೆ ಇನ್ನೂ ಸ್ವತಂತ್ರಳಾಗಿಲ್ಲ. ಇಷ್ಟು ವರ್ಷಗಳ ಅವಧಿಯಲ್ಲಿ ಅವರು ತಮ್ಮ ಟೂರ್, ಆಲ್ಬಂ ಇತ್ಯಾದಿಗಳಲ್ಲಿ ಸಕ್ರಿಯರಾಗಿದ್ದರೂ, ಅದ್ಯಾವುದು ಅವರ ಕೈಯಲ್ಲಿ ಇಲ್ಲದಂತಾಗಿ ಹೋಗಿದೆ. ಇನ್ನು ಇವರ ಇಚ್ಛೆಗೆ ವಿರುದ್ಧವಾದ ಹಲವು ಕೆಲಸಗಳನ್ನು ಮಾಡಲು ಒತ್ತಾಯಿಸಲಾಗುತ್ತದೆ. ಒತ್ತಾಯ ಪೂರ್ವಕವಾಗಿ ಔಷಧಿಗಳನ್ನು ಕೊಡಲಾಗುತ್ತದೆ ಎಂದು ತನ್ನ ದೂರನ್ನು 2018ರಿಂದ ಕೋರ್ಟ್​ವರೆಗೂ ತೆಗೆದುಕೊಂಡು ಹೋಗುತ್ತಿದ್ದಾರೆ.

ಕಳೆದ ವಾರ ಕೋರ್ಟ್ ಈಕೆಯ ದೋರಣೆಗಳನ್ನು ಪರಿಗಣಿಸದೆ, ಅವಳು ತನ್ನ ಕನ್ಸರ್ವೇಟರ್ ಶಿಪ್ ಕಾಯ್ದೆ ಅಡಿಯಲ್ಲಿ ಜೀವಿಸಬೇಕು ಎನ್ನುವುದನ್ನು ಹೇಳಿ ಕಳುಹಿಸಿದೆ. ಇದರಿಂದ ಸೋಶಿಯಲ್ ಮಿಡಿಯಾದಲ್ಲಿ ಹೊಸ ಆಂದೋಲನವೇ ಶುರುವಾಗಿ ಬಿಟ್ಟಿದೆ. ಬ್ರಿಟ್ನಿಯನ್ನು ಫ್ರೀ ಮಾಡಿ ಎಂದು ಹಲವರು ಕೋರಿಕೆ ಇಡುತ್ತಿದ್ದಾರೆ. ಬ್ರಿಟ್ನಿ ಅಭಿಮಾನಿಗಳು ಹಾಗೂ ಅವಳ ಸ್ನೇಹಿತರು ಬ್ರಿಟ್ನಿಯ ಪರ ನಿಂತಿದ್ದಾರೆ. ಆದ್ರೆ ಬ್ರಿಟ್ನಿಯ ತಂದೆ ಜೇಮಿ ಸ್ಪಿಯರ್ ಮಾತ್ರ ಯಾರ ಮಾತನ್ನೂ ಕೇಳದೆ, ಕೋರ್ಟ್ ಹೇಳಿದಂತ ಸೂಚನೆಯನ್ನು ಚಾಚು ತಪ್ಪದೆ ಪಾಲಿಸಿ, ಬ್ರಿಟ್ನಿಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಹ್ಯಾಷ್ ಟ್ಯಾಗ್ ಫ್ರೀ ಬ್ರಿಟ್ನಿ ಎನ್ನುವ ಕೂಗು ವೈರಲ್ ಆಗುತ್ತಿದೆ. ಎಲ್ಲ ನಮ್ಮದೆ ಆದರೆ, ಏನು ನಮ್ಮದಲ್ಲ ಅನಿಸಿದರೆ, ಪರಿಸ್ಥಿತಿ ಹೇಗಿರುತ್ತದೆ ಅಲ್ವಾ ? ಬ್ರಿಟ್ನಿ ಸಂಪಾದಿಸಿದ ಅಷ್ಟೂ ಆಸ್ತಿಗೆ ಸದ್ಯ ಆಕೆಯ ತಂದೆಯೇ ಅಧೀಪತಿ. ಆಸ್ತಿ ಇರಲಿ, ಆಕೆಯ ನಾಗರೀಕ ಸ್ವಾತಂತ್ರಕ್ಕೆ ಈ ರೀತಿ ಕಟ್ಟುಪಾಡಾದರೆ, ಆಕೆಯ ಬದುಕಿಗೆ ನ್ಯಾಯ ಒದಗಿಸಿಕೊಡುವವರಾರು ?