ಖ್ಯಾತ ನಿರೂಪಕಿ ರಾಧಕ್ಕ ಅವರ ಗಂಡ ಮಗ ಹೇಗಿದ್ದಾರೆ ಏನ್ ಮಾಡ್ತಿದ್ದಾರೆ ಗೊತ್ತಾ?

Entertainment
Advertisements

ಜಗತ್ತಿನ ಆಗುಹೋಗುಗಳ ಬಗ್ಗೆ ಮನೆ ಮನೆಗೂ ಸುದ್ದಿ ತಲುಪಿಸುವಲ್ಲಿ ತುಂಬಾ ಪ್ರಾಮುಖ್ಯತೆ ವಹಿಸಿರುವುದು ಇಂದಿನ ಸುದ್ದಿಮಾಧ್ಯಮಗಳು ಜೊತೆಗೆ ಸುದ್ದಿ ನಿರೂಪಕರೂ ಕೂಡ. ಎಷ್ಟರ ಮಟ್ಟಿಗೆ ಎಂದರೆ ಸುದ್ದಿ ನಿರೂಪಕರಿಗೂ ಕೂಡ ಅಭಿಮಾನಿ ಬಳಗವಿದ್ದು ಸೆಲೆಬ್ರೆಟಿಗಳಾಗಿಬಿಟ್ಟಿದ್ದಾರೆ. ಅಂತಹವರಲ್ಲಿ ಒಬ್ಬರು ಬಿಟಿವಿಯ ನಿರೂಪಕಿ ರಾಧಾ ಹಿರೇಗೌಡ. ಪತ್ರಿಕೋದ್ಯಮದಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಅಂತಲೂ ನೋಡದೆ ಖಡಕ್ ಆಗಿ ಸುದ್ದಿ ನಿರೂಪಿಸುವ ನಿರರ್ಗಳ ಮಾತನಾಡುವ ರಾಧಾ ಹಿರೇಗೌಡ ಅವರು ಪತ್ರಿಕೋದ್ಯಮದಲ್ಲಿ ಕೆಲಸ ಮಾಡಬೇಕೆನ್ನುವ ಎಷ್ಟೋ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ. ಇನ್ನು ಮೊದಲಿಗೆ ಪಬ್ಲಿಕ್ ಟಿವಿಯಲ್ಲಿ ರಂಗಣ್ಣನವರ ಜೊತೆಯಾಗಿ ಕೆಲಸ ಮಾಡಿ ಹೆಸರು ಮಾಡಿದ್ದ ರಾಧಾ ಹಿರೇಗೌಡ ಅವರು ರಾಧಾಕ್ಕ ಎಂತಲೇ ಮಾಧ್ಯಮಲೋಕದಲ್ಲಿ ಜನಪ್ರಿಯರಾದವರು.

[widget id=”custom_html-4″]

Advertisements

ಇನ್ನು ಏಪ್ರಿಲ್ 25/1985ರಲ್ಲಿ ದಾಂಡೇಲಿಯಲ್ಲಿ ಜನಿಸಿದ ರಾಧಾ ಹಿರೇಗೌಡ ಅವರು ಹುಟ್ಟೂರಿನಲ್ಲೆ ಶಾಲಾ ಮುಗಿಸಿದ ಬಳಿಕ ಬೆಂಗಳೂರಿಗೆ ಬಂದು ಖಾಸಗಿ ಕಾಲೇಜೊಂದರಲ್ಲಿ ಮಾಸ್ ಅಂಡ್ ಕಮ್ಮ್ಯುನಿಕೇಷನ್ ನಲ್ಲಿ ಪದವಿಯನ್ನ ಪೂರೈಸಿದ್ರು. ಇನ್ನು ತನ್ನ ಬಾಲ್ಯದಿಂದಲೇ ನಿರೂಪಕಿಯಾಗಬೇಕು ಎಂದು ಕಾಣದು ಕನಸು ಕಂಡಿದ್ದ ರಾಧಾ ಅವರು ಶಾಲೆಯ ದಿನಗಳಿಂದಲೇ ಪ್ರಬಂಧ, ಚರ್ಚಾ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರತಿಭಾನ್ವಿತ ಸ್ಪರ್ಧಿ ಎಂಬ ಹೆಸರು ಪಡೆದಿದ್ದರು.

[widget id=”custom_html-4″]

ಇನ್ನು ತಾವು ಕಂಡ ಕನಸಿನಂತೆ ಪತ್ರಿಕೋದ್ಯಮಕ್ಕೆ ಕಾಲಿಟ್ಟ ರಾಧಾ ಹೀರೇಗೌಡ ಅವರು ಮೊದಲಿಗೆ ಪಬ್ಲಿಕ್ ಟಿವಿಯಲ್ಲಿ ನಿರೂಪಿಕಿಯಾಗಿ ಬಳಿಕ ಬಿಟಿವಿಯಲ್ಲಿ ಚೀಪ್ ಎಡಿಟರ್ ಹಾಗೂ ಮುಖ್ಯ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ.ಇನ್ನು ಇವರ ವೈಯುಕ್ತಿಕ ಜೀವನದ ಬಗ್ಗೆ ಹೇಳುವುದಾದರೆ, ರಾಧಾ ಅವರು ನಾಗರಾಜ್ ಎಂಬುವವರನ್ನು ಮದ್ವೆಯಾಗಿದ್ದು ಇವರು ಐಟಿ ಕಂಪನಿಯೊಂದರ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಈ ದಂಪತಿಗೆ ಭುವನ್ ಎಂಬ ಮುದ್ದಾದ ಮಗನಿದ್ದಾನೆ. ಇನ್ನು ಸದ್ಯದ ಮಹಿಳಾ ನಿರೂಪಕಿಯರಲ್ಲಿ ಅತೀ ಹೆಚ್ಚಿನ ಸಂಭಾವನೆ ಪಡೆಯು ನಿರೂಪಕಿ ಎಂಬ ಖ್ಯಾತಿ ಕೂಡ ಇವರಿಗಿದೆ. ಒಟ್ಟಿನಲ್ಲಿ ಮಾಧ್ಯಮ ಲೋಕದಲ್ಲಿ ಕೆಲಸ ಮಾಡಬೇಕೆಂಬ ಹಂಬಲವಿರುವ ಅದೆಷ್ಟೋ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ ರಾಧಕ್ಕ..