ಗಂಭೀರ ಪರಿಸ್ಥಿತಿಯಲ್ಲಿ ಹಾಸ್ಯನಟ ಬುಲೆಟ್ ಪ್ರಕಾಶ್.?

Cinema

ಸ್ಯಾಂಡಲ್ವುಡ್ ನ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್, ನೂರಾರು ಚಿತ್ರಗಲ್ಲಿ ನಟಿಸಿರುವ ಇವರು ತಮ್ಮ ವಿಭಿನ್ನ ಹಾಸ್ಯದಿಂದಲೇ ಕರ್ನಾಟಕದ ಜನರಿಗೆ ಮನರಂಜನೆ ನೀಡಿದವರು. ಇನ್ನು ಕೆಲವು ದಿನಗಳ ಹಿಂದಷ್ಟೇ ಅನಾರೋಗ್ಯಕ್ಕೆ ಒಳಗಾಗಿದ್ದು, ಆಸ್ಪತ್ರೆ ಸೇರಿದ್ದರು.

ಇನ್ನು ಕೆಲವುವರ್ಷಗಳ ಹಿಂದಷ್ಟೇ ತಮ್ಮ ತೂಕವನ್ನ ಹಿಳಿಸಿಕೊಳ್ಳಲು ಹೋಗಿ ಆರೋಗ್ಯದಲ್ಲಿ ಏರುಪೇರಾಗಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಇನ್ನು ಈಗ ಮತ್ತೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಪೋರ್ಟಿಸ್ ಆಸ್ಪತ್ರೆ ಸೇರಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಆರೋಗ್ಯದಲ್ಲಿ ಏರು ಪೇರು ಕಾಣಿಸಿಕೊಳ್ಳುತ್ತಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ.

ಇನ್ನು ಹಾಸ್ಯ ನಟ ಬುಲೆಟ್ ಪ್ರಕಾಶ್ ರವರಿಗೆ ಕಿಡ್ನಿ ವೈಪಲ್ಯವಾದ ಕಾರಣ ವೆಂಟಿಲೇಟರ್ ಮೂಲಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿದ್ದು, ಅವರ ಆರೋಗ್ಯ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಒಟ್ಟಿನಲ್ಲಿ ಹಾಸ್ಯನಟ ಬುಲೆಟ್ ಪ್ರಕಾಶ್ ರವರು ಬೇಗನೆ ಗುಣಮುಖರಾಗಿ ಮತ್ತೆ ಚಿತ್ರಗಳಲ್ಲಿ ನಟಿಸುವಂತಾಗಲಿ.