ಮತ್ತೆ ಆಸ್ಪತ್ರೆಗೆ ದಾಖಲಾದ ಸ್ಯಾಂಡಲ್ವುಡ್ ಖ್ಯಾತ ಹಾಸ್ಯ ನಟ..

Cinema
Advertisements

ತಮ್ಮ ವಿಭಿನ್ನ ಶೈಲಿಯ ಕಾಮಿಡಿ ನಟನೆಯಿಂದಲೇ ಖ್ಯಾತರಾದವರು ಸ್ಯಾಂಡಲ್ವುಡ್ ಕಾಮಿಡಿ ನಟ ಬುಲೆಟ್ ಪ್ರಕಾಶ್. ಆದರೆ ಏಕೋ ಏನೋ ಇತ್ತೀಚೆಗೆ ಸಿನಿಮಾಗಳಲ್ಲಿ ಸರಿಯಾಗಿ ಅವಕಾಶಗಳು ಸಿಗುತ್ತಿಲ್ಲ. ಇನ್ನು ಆಗಾಗ ಅನಾರೋಗ್ಯಕ್ಕೆ ತುತ್ತಾಗುತ್ತಿರುತ್ತಿದ್ದಾರೆ.

Advertisements

ಹೌದು, ಈಗ ಮತ್ತೆ ಬುಲೆಟ್ ಪ್ರಕಾಶ್ ರವರ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಇದರ ಬಗ್ಗೆ ಸ್ವತಃ ಪ್ರಕಾಶ್ ಅವರ ಮಗ ರಕ್ಷಕ್ ಮಾಹಿತಿ ನೀಡಿದ್ದು, ಅಪ್ಪ ಕೆಲವು ದಿನಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಿದ್ದಾರೆ.

ಆದರೆ ಆಗಾಗ ಒಳಗಾಗುವ ನಟ ಬುಲೆಟ್ ಪ್ರಕಾಶ್ ಕೆಲವು ವರ್ಷಗಳ ಹಿಂದಷ್ಟೇ ತಮ್ಮ ತೂಕವನ್ನ ಇಳಿಸಿಕೊಳ್ಳಲು ಹೋಗಿ ಅವರ ಆರೋಗ್ಯದಲ್ಲಿ ಏರು ಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆನಂತರ ಅವರಿಗೆ ಸಿನಿಮಾದಲ್ಲಿ ಹೆಚ್ಚು ಅವಕಾಶಗಳು ಸಿಕ್ಕಿರಲಿಲ್ಲ. ಇನ್ನು ಕೆಲವೊಂದು ವೇದಿಕೆಗಳಲ್ಲಿ ತಮ್ಮ ಕಷ್ಟದ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದ್ದರು ಬುಲೆಟ್ ಪ್ರಕಾಶ್.