ಟ್ರಾಫಿಕ್ ದಂಡ 200ರೂ ಕಟ್ಟದೆ ಕೇಸ್ ಹಾಕಿ 10 ಸಾವಿರ ಖರ್ಚು ಮಾಡಿದ ಭೂಪ ! ಕೊನೆಗೆ ಆಗಿದ್ದೇ ಬೇರೆ ?

Kannada News

ಸ್ನೇಹಿತರೇ, ಸಂಚಾರಿ ನಿಯಮಗಳನ್ನ ಪಾಲನೆ ಮಾಡದೆ ಇದ್ದಾಗ ಟ್ರಾಫಿಕ್ ಪೊಲೀಸರು ದಂಡ ಹಾಕುವುದು ಸಾಮಾನ್ಯ. ಇನ್ನು ಕೆಲವರು ನಮಗ್ಯಾಕಪ್ಪ ಈ ಪೋಲೀಸರ ಉಸಾಬರಿ ಎಂದು ದಂಡ ಕಟ್ಟಿ ಹೋದ್ರೆ, ಮತ್ತೆ ಕೆಲವರು ಪೋಲೀಸರ ಜೊತೆ ವಾಗ್ವಾದಕ್ಕೆ ಇಳಿಯುತ್ತಾರೆ. ಇದೆ ರೀತಿ ಇಲ್ಲೊಬ್ಬ ವ್ಯಕ್ತಿಗೆ ಟ್ರಾಫಿಕ್ ಪೊಲೀಸರು 200ರೂ ದಂಡ ಹಾಕಿದ್ದು, ನನ್ನದು ಯಾವುದೇ ತಪ್ಪಿಲ್ಲ ಎಂದು ಸಾಬೀತು ಮಾಡುವ ಸಲುವಾಗಿ ಬರೋಬ್ಬರಿ ೧೦ ಸಾವಿರ ಖರ್ಚು ಮಾಡಿ ಸಖತ್ ಸುದ್ದಿಯಾಗಿದ್ದಾರೆ ಈ ವ್ಯಕ್ತಿ.

ಹೌದು, ಈ ವಿಚಿತ್ರ ಘಟನೆ ನಡೆದಿರುವುದು ಪುಣೆಯಲ್ಲಿ. ಇಲ್ಲಿಯ ಉದ್ಯಮಿಯಾಗಿರುವ ೪೫ ವರ್ಷದ ಬಿನೋಯ್ ಗೋಪಾಲನ್ ಎಂಬ ವ್ಯಕ್ತಿ ನೋ ಪಾರ್ಕಿಂಗ್ ಜಾಗದಲ್ಲಿ ಬೈಕ್ ನಿಲ್ಲಿಸಿದ್ದ ಕಾರಣ ಟ್ರಾಫಿಕ್ ಪೊಲೀಸರು ೨೦೦ರೂಗಳ ದಂಡ ಹಾಕಿದ್ದರು. ಆದರೆ ನಾನು ದಂಡ ಕಟ್ಟುವುದಿಲ್ಲ ಎಂದು ಪೋಲೀಸರ ಜೊತೆ ವಾಗ್ವಾದಕ್ಕೆ ಇಳಿದಿದ್ದ ಗೋಪಾಲನ್ ಅವರು ಇಲ್ಲಿ ಹಾಕಿರುವ ನೋ ಪಾರ್ಕಿಂಗ್ ಬೋರ್ಡ್ ಸರಿಯಾಗಿ ಕಾಣಿಸುತ್ತಿಲ್ಲ. ಆ ಬೋರ್ಡ್ ನ್ನ ನೋಡಿದ್ರೆ ಇಲ್ಲಿ ಪಾರ್ಕಿಂಗ್ ಮಾಡಬಹುದು ಎಂಬಂತಿದೆ. ನೋ ಪಾರ್ಕಿಂಗ್ ಬೋರ್ಡ್ ಸರಿಯಾಗಿ ಇಲ್ಲದೆ ಇರುವುದು ನನ್ನ ತಪ್ಪಲ್ಲ. ನಾನು ದಂಡ ಏಕೆ ಕಟ್ಟಬೇಕು ಎಂದು ಪೋಲೀಸರ ಜೊತೆ ಜ’ಗಳಕ್ಕಿಳಿದಿದ್ದಾರೆ.

ಅದರೆ ಇದಕ್ಕೆ ಪೊಲೀಸರು ಕೊಟ್ಟ ಉತ್ತರ ನೋಡಿ, ಅವರಿಗೆ ತಕ್ಕ ಉತ್ತರ ನೀಡಲೇಬೇಕೆಂದು ನಿರ್ಧಾರ ಮಾಡಿದ ಗೋಪಾಲನ್, ಬೇಕಾದ ಎಲ್ಲಾ ದಾಖಲೆಗಳನ್ನ ಸಂಗ್ರಹಿಸಿಕೊಂಡು ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಕೇಸ್ ನಲ್ಲಿ ಗೆಲ್ಲಲೇಬೇಕೆಂದು ವಕೀಲರೊಬ್ಬರನ್ನ ನೇಮಿಸಿ, ಪೊಲೀಸರು ವಿಧಿಸಿರುವ ದಂಡವನ್ನ ರದ್ದು ಮಾಡಬೇಕೆಂದು ಎರಡು ತಿಂಗಳುಗಳ ಕಾಲ ಕೇಸ್ ನಡೆಸಿದ್ದಾರೆ. ಇನ್ನು ವಾದ ಪ್ರತಿವಾದಗಳ ಬಳಿಕ ನ್ಯಾಯಾಲಯ ಇದರಲ್ಲಿ ಗೋಪಾಲನ್ ಅವರದ್ದು ಏನು ತಪ್ಪಿಲ್ಲ ಎಂದು ದಂಡವನ್ನ ರದ್ದು ಮಾಡಬೇಕೆಂದು ಪೊಲೀಸರಿಗೆ ಆದೇಶ ನೀಡಿದೆ.

ಇನ್ನು ತೀರ್ಪು ತನ್ನ ಪರವಾಗಿ ಬಂದ ಬಳಿಕ ಮಾನಾಡಿರುವ ಗೋಪಾಲನ್ ಅವರು ನಾನು ೨೦೦ರೂ ದಂಡವನ್ನ ಕಟ್ಟಿ ಸುಮ್ಮನಾಗಿಬಿಡುಬಹುದಿತ್ತು. ಆದರೆ ಪೊಲೀಸ್ರು ನನ್ನೊಂದಿಗೆ ನಡೆದುಕೊಂಡ ರೀತಿ ನನಗೆ ಬೇಸರವನ್ನುಂಟು ಮಾಡಿತ್ತು. ಹಾಗಾಗಿ ನನ್ನದೇನು ತಪ್ಪಿಲ್ಲ ಎಂದು ಸಾಬೀತು ಪಡಿಸಲು ಖರ್ಚಾಗುವ ಹಣದ ಬಗ್ಗೆ ಯೋಚನೆ ಮಾಡದೆ ಈ ಪ್ರ’ಕರಣವನ್ನ ಗೆದ್ದಿದ್ದೇನೆ ಎಂದು ಗೋಪಾಲನ್ ಅವರು ಹೇಳಿದ್ದಾರೆ.