ಮದ್ವೆ ಆಗೋದಿಲ್ಲ ಅಂದ ಮೇಲೆ ಅಂದು ನನ್ನ ಬಳಿ ಏಕೆ ಬಂದೆ ನೀನು.?ನಿನ್ನ ನಂಬಿ ದೊಡ್ಡ ತಪ್ಪು ಮಾಡಿದೆ ಎಂದು ಕಣ್ಣೀರಿಟ್ಟ ಚೈತ್ರಾ ಕೊಟ್ಟೂರ್..

Kannada News Uncategorized

ಇತ್ತೀಚೆಗಷ್ಟೇ ಮದ್ವೆಯಾಗಿ ವಿವಾದ ಮಾಡಿಕೊಂಡಿದ್ದ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರ್ ಅವರು, ನೆನ್ನೆ ಮೇ ೨೮ರಂದು ಕೋಲಾರದ ಕುರುಬರಪೇಟೆಯಲ್ಲಿರುವ ತಮ್ಮ ಮನೆಯಲ್ಲಿ ಫೆ’ನಾಯಿಲ್ ಕುಡಿದು ಆ-ತ್ಮಹ’ತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಕಳೆದ ಮಾರ್ಚ್ ೨೮ರಂದು ಮಂಡ್ಯ ಮೂಲದ ನಾಗಾರ್ಜುನ್ ಎಂಬುವವರ ಜೊತೆ ಮದ್ವೆ ಮಾಡಿಕೊಂಡಿದ್ದು, ಅಂದೇ ಸಂಜೆಯ ಹೊತ್ತಿಗೆ ನಾಗಾರ್ಜುನ್ ಅವರು ಚೈತ್ರಾ ನನ್ನನ್ನ ಬಂ’ಧನದಲ್ಲಿಟ್ಟು ತಾಳಿ ಕಟ್ಟಿಸಿಕೊಂಡಿದ್ದರು ಎಂದು ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇನ್ನು ದೂರು ದಾಖಲಾದ ಸಂದರ್ಭದಲ್ಲಿ ಎರಡು ಕುಟುಂಬಗಳು ಮಾತುಕತೆಯಲ್ಲಿ ಇದನ್ನ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದ್ದರು. ಆದರೆ ಇದರ ಬಳಿಕ ನಾಗಾರ್ಜುನ್ ಆಗಲಿ ಅವರ ಮನೆಯವರಾಗಲಿ ಮಾತುಕತೆಗೆ ಬರಲಿಲ್ಲ. ಇನ್ನು ಚೈತ್ರಾ ಅವರು ಮನಸಾರೆ ಪ್ರೀತಿಸುತ್ತಿದ್ದ ನಾಗಾರ್ಜುನ್ ದೂರವಾಗಿದ್ದರು. ಇದೆ ಕಾರಣಕ್ಕೆ ಚೈತ್ರಾ ಕೊಟ್ಟೂರ್ ಅವರು ತಮ್ಮ ಪ್ರಾ’ಣವನ್ನೇ ಕಳೆದುಕೊಳ್ಳುವ ಕೆ’ಟ್ಟ ನಿರ್ಧಾರ ಮಾಡಿದ್ದರುಎಂದು ಹೇಳಲಾಗಿದೆ.ಇನ್ನು ಆ-ತ್ಮಹ’ತ್ಯೆ ಪ್ರಯತ್ನಕ್ಕೆ ಮುಂಚೆ ವಿಡಿಯೋ ಮಾಡಿ ಕಣ್ಣೀರಿಟ್ಟಿರುವ ಚೈತ್ರಾ ಕೊಟ್ಟೂರ್ ಅವರು ಹೀಗೆ ತಮ್ಮ ನೋವನ್ನ ತೋಡಿಕೊಂಡಿದ್ದಾರೆ..

ಅರ್ಜುನ್..ನಿನ್ನನ್ನ ನಾನು ಪ್ರೀತಿಸಿದ್ದೆ ತಪ್ಪಾ..ನಿಂಗೆ ನನ್ನ ಮೇಲೆ ಪ್ರೀತಿ ಇಲ್ಲ ಅಂದಿದ್ರೆ ನನ್ನ ಬಳಿ ಏಕೆ ಬರ್ತಿದ್ದೆ..ನನಗೆ ನಿನ್ನ ಮೇಲೆ ತುಂಬಾ ನಂಬಿಕೆ ಇಟ್ಟಿದ್ದೆ. ನಮ್ಮಿಬ್ಬರ ಮದ್ವೆ ಬಗ್ಗೆ ಕೂಡ ನಾನು ನಿನ್ನ ಬಳಿ ಸೀರಿಯಸ್ ಆಗಿಯೇ ಮಾತನಾಡಿದ್ದೀನಿ. ಒಂದು ವೇಳೆ ನನ್ನನ್ನ ಮದ್ವೆ ಆಗೋ ಉದ್ದೇಶ ನಿನಗಿಲ್ಲ ಅಂದಿದ್ರೆ ಅಂದೇ ಅಲ್ಲಿಂದ ಹೊರಟು ಹೋಗಬೇಕಿತ್ತು. ಮತ್ತೆ ಮತ್ತೆ ನನ್ನ ಬಳಿ ಏಕೆ ಬಂದೆ. ನನ್ನ ಜೀವನದ ಜೊತೆ ಏಕೆ ಆತ ಆಡಿಬಿಟ್ಟೆ. ನೀನಿಲ್ಲದೆ ನಾನು ಹೇಗೆ ಬದುಕಲಿ ಅರ್ಜುನ್..ನಾನು ಮಡಿದ ತಪ್ಪಾದರೂ ಏನು ಎಂದು ವಿಡಿಯೋದಲ್ಲಿ ಹೇಳುತ್ತಾ ಚೈತ್ರಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇನ್ನು ನಾಗಾರ್ಜುನ್ ಅವರು ರಿಯಲ್ ಎಸ್ಟೇಟ್ ಮತ್ತು ಕನ್ಸ್ಟ್ರಕ್ಷನ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.