ಕನ್ನಡದ ಖಾಸಾಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಅವನು ಮತ್ತೆ ಶ್ರಾವಣಿ’ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಮನೆಮಂದಿಯೆಲ್ಲಾ ಕುಳಿತು ನೋಡುತ್ತಿದ್ದ ಸೀರಿಯಲ್. ಇನ್ನು ಈ ಧಾರಾವಾಹಿಯ ಪ್ರಮುಖ ಆಕರ್ಷಣೆ, ಶ್ರಾವಣಿ ಪಾತ್ರದಲ್ಲಿ ನಟಿಸುತ್ತಿದ್ದ ನಟಿಚೈತ್ರಾ ರೆಡ್ಡಿ.

ಇನ್ನು ಮೂಲತಃ ಆಂಧ್ರಪ್ರದೇಶದವರಾದ ಚೈತ್ರಾ ರೆಡ್ಡಿ ನಟಿ ಕಾಮ್ ಮಾಡೆಲ್ ಕೂಡ. ಇನ್ನು ಅವನು ಮತ್ತು ಶ್ರಾವಣಿ ಧಾರಾವಾಹಿ ಮೂಲಕ ಮೊದಲಿಗೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಚೈತ್ರಾ ರೆಡ್ಡಿ ತೆಲುಗು ಹಾಗೂ ತಮಿಳು ಧಾರಾವಾಹಿಗಳಲ್ಲೂ ನಟಿಸುತ್ತಿದ್ದಾರೆ.

ಇನ್ನು ಸೀರಿಯಲ್ ಮಾತ್ರವಲ್ಲದೆ ನಟ ವಿನೋದ್ ಪ್ರಭಾಕರ್ ಅವರ ಜೊತೆ ರಗಡ್ ಚಿತ್ರದಲ್ಲಿ ನಾಯಕಿ ನಟಿಯಾಗಿ ನಟಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಆಕ್ಟಿವ್ ಆಗಿರುವ ಇವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ವರೆ ಲಕ್ಷಕ್ಕಿಂತ ಅಧಿಕ ಫಾಲೋವರ್ಸ್ ಹೊಂದಿದ್ದಾರೆ.

ಇನ್ನು ನಾನ್ ವೆಜ್ ಊಟವನ್ನ ತುಂಬಾ ಇಷ್ಟಪ್ಪಡುವ ನಟಿ ಚೈತ್ರಾ ರೆಡ್ಡಿ, ಸದ್ಯಕ್ಕೆ ತಮಿಳಿನ ಯಾರೀಡಿ ನೀ ಮೋಹಿನಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.