ಹೆಣ್ಣು ಮಕ್ಕಳ ತಂದೆಯಾಗಿರೋ ಚಂದ್ರಚೂಡ್ ಬಿಗ್ ಮನೆಯಲ್ಲಿ ಇಂತಹ ಅನಿಷ್ಟ ಕೆಲಸ ಮಾಡಬಾರದಿತ್ತು !ಅಸಲಿಗೆ ಆಗಿದ್ದೇನು ಗೊತ್ತಾ?

Entertainment

ಪ್ರತೀ ವಾರದಂತೆ ಮೊನ್ನೆ ಭಾನುವಾರ ನಡೆದ ಬಿಗ್ ಬಾಸ್ 8ರ ಎರಡನೇ ಇನ್ನಿಂಗ್ಸ್ ನ ವಾರದ ಜೊತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ನಡೆದ ಎಲಿಮನೇಷನ್ ಪ್ರಕ್ರಿಯೆಯಲ್ಲಿ ಮತ್ತೊಬ್ಬ ಸ್ಪರ್ಧಿ ಎಲಿಮನೇಟ್ ಆಗಿದ್ದಾರೆ. ಇನ್ನು ಈ ಸಲದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಪ್ರಶಾಂತ್ ಸಂಬರ್ಗಿ, ಪ್ರಿಯಾಂಕಾ ತಿಮ್ಮೇಶ್, ವೈಷ್ಣವಿ, ಶುಭಾ ಪೂಂಜಾ ಸೇರಿದಂತೆ ನಾಲ್ಕು ಜನ ಸ್ಪರ್ಧಿಗಳು ಮಾತ್ರ ಎಲಿಮನೇಟ್ ಆಗಿದ್ದರು. ಇನ್ನು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ಪ್ರಿಯಾಂಕಾ ತಿಮ್ಮೇಶ್ ಅವರು ಈ ಬಾರಿ ಎಲಿಮನೇಟ್ ಆಗಬಹುದು ಎಂದು ವೀಕ್ಷಕರು ಭಾವಿಸಿದ್ದರು. ಅದರಂತಯೇ ಪ್ರಿಯಾಂಕಾ ಅವರು ಎಲಿಮನೆಟ್ ಆಗಿ ಬಿಗ್ ಮನೆಯಿಂದ ಹೊರಬಂದಿದ್ದಾರೆ. ಆದರೆ ಇಲ್ಲಿ ಪ್ರಿಯಾಂಕಾ ಅವರು ಎಲಿಮನೇಟ್ ಆಗಿದ್ರೂ ಕೂಡ ಅವರ ಬಗೆ ಚರ್ಚೆ ಆಗುತ್ತಿರುವುದೇ ಬೇರೆಯದೇ ವಿಷಯಕ್ಕೆ..

ಹೌದು, ಪ್ರತೀ ವಾರ ಬಿಗ್ ಬಾಸ್ ಮನೆಯಿಂದ ಎಲಿಮನೇಟ್ ಆಗುವ ಸ್ಪರ್ಧಿಗೆ ವಿಶೇಷವಾದ ಅಧಿಕಾರ ಸಿಗುತ್ತದೆ. ಅದರಂತೆ ಪ್ರಿಯಾಂಕಾ ತಿಮ್ಮೇಶ್ ಅವರಿಗೂ ಕೂಡ ಬಿಗ್ ಬಾಸ್ ವಿಶೇಷ ಅಧಿಕಾರವೊಂದನ್ನ ನೀಡದ್ದರು. ಪ್ರಿಯಾಂಕಾ ತಿಮ್ಮೇಶ್ ಬಿಗ್ ಮನೆಯಿಂದ ಹೊರಹೋಗುವ ಮುಂಚೆ ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ಒಬ್ಬರನ್ನ ಮುಂದಿನ ವಾರಕ್ಕೆ ನೇರ ನಾಮಿನೇಟ್ ಮಾಡುವ ಅಧಿಕಾರ ನೀಡಲಾಗಿತ್ತು. ಅದರಂತೆ ಪ್ರಿಯಾಂಕಾ ಅವರು ಮುಂದಿನ ವಾರದ ನಾಮಿನೇಟ್ ಆಗಿ ಚಕ್ರವರ್ತಿ ಚಂದ್ರಚೂಡ್ ಅವರ ಹೆಸರನ್ನ ಸೂಚಿಸಿದರು. ಇದರ ವಿಚಾರವೇ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹೌದು, ತನ್ನಣ್ಣ ನೇರ ನಾಮಿನೇಟ್ ಮಾಡಿದಕ್ಕೆ ಕೋಪಗೊಂಡ ಚಕ್ರವರ್ತಿ ಚಂದ್ರ ಚೂಡ್ ಅವರು ಪ್ರಿಯಾಂಕಾ ಅವರಿಗೆ ಅಸಹ್ಯವಾದ ಸನ್ನೆ ಮೂಲಕ ಕೈ ತೋರಿಸಿದ್ದಾರೆ.

ಚಕ್ರವರ್ತಿ ಚಂದ್ರಚೂಡ್ ಅವರು ಮಾಡಿದ ಕೈ ಸನ್ನೆ ಅಸಹ್ಯಕರವಾಗಿತ್ತು ಎಂಬುದನ್ನ ಎಲ್ಲಾ ವೀಕ್ಷಕರೇ ನೋಡಿದ್ದಾರೆ. ಹೆಣ್ಣುಮಕ್ಕಳೆಂದರೆ ನಾನು ತುಂಬಾ ಗೌರವಿಸುತ್ತೇನೆ, ಪೂಜ್ಯ ಭಾವನೆಯಿಂದ ನೋಡುತ್ತೇನೆ ಅಂತ ಪದೇ ಪದೇ ಹೇಳುವ ಚಂದ್ರ ಚೂಡ್ ಅವರು, ಮಗಳೇ ಎಂದು ಪ್ರೀತಿಯಿಂದ ಕರೆಯುತ್ತಿದ್ದ ಪ್ರಿಯಾಂಕಾ ಅವರಿಗೆ ಈ ರೀತಿಯಾಗಿ ತೋರಿಸಿದ್ದು ತಪ್ಪು, ಆಟವನ್ನ ಆಟದ ರೀತಿಯಲ್ಲೇ ಆಡಬೇಕು..ಅದು ಬಿಟ್ಟು ಇಷ್ಟು ಕೆಟ್ಟದಾಗಿ ಚಂದ್ರಚೂಡ್ ಅವರು ವರ್ತಿಸಬಾರದಿತ್ತು ಎಂಬುದು ವೀಕ್ಷಕರ ಅಭಿಪ್ರಾಯವಾಗಿದೆ. ಕುಟುಂಬವೆಲ್ಲಾ ಕುಳಿತು ನೋಡುವ ಒಂದು ಕಾರ್ಯಕ್ರಮದಲ್ಲಿ ಸ್ಪರ್ದಿಯೊಬ್ಬರು ಹೆಣ್ಣುಮಗಳೊಬ್ಬಳಿಗೆ ಈ ರೀತಿ ತೋರಿಸಿದ್ದು, ತಪ್ಪು ಹಾಗಾಗಿ ಮುಂದಿನ ವಾರದ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಇದರ ಬಗ್ಗೆ ಚರ್ಚೆ ಮಾಡುತ್ತಾರಾ ಎಂಬುದನ್ನ ಕಾದು ನೋಡಬೇಕಾಗಿದೆ..