ಲಾಕ್ ಡೌನ್ ವೇಳೆ ನಟಿ ಕವಿತಾ ಗೌಡ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟ ಚಂದನ್ ಕಿರುತೆರೆಯ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಹೌದು, ಖಾಸಗಿ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಅಡುಗೆ ಕಾರ್ಯಕ್ರಮವಾದ ಕುಕ್ಕು ವಿತ್ ಕಿರಿಕ್ ಕಾರ್ಯುಕ್ರಮದಲ್ಲಿ ಪತ್ನಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಈಗ ಚಂದನ್ ಮತ್ತೊಂದು ಸೀರಿಯಲ್ ಒಂದರಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಚಂದನ್ ತಮ್ಮ ಪೊಲೀಸ್ ಪಾತ್ರಕ್ಕಾಗಿ ತಮ್ಮ ತೂಕವನ್ನ ಇಳಿಸಿಕೊಂಡಿದ್ದು ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಇದ್ರಲ್ಲಿ ಅಚ್ಚರಿಗೊಳ್ಳುವ ವಿಚಾರ ಒಂದಿದೆ.
[widget id=”custom_html-4″]

ಹೌದು, ಸ್ಟಾರ್ ಸುವರ್ಣ ಕಿರುತೆರೆ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮರಳಿ ಮನಸ್ಸಾಗಿ ಎಂಬ ಸೀರಿಯಲ್ ಚಂದನ್ ನಟಿಸುತ್ತಿದ್ದು, ಎಸ್ಪಿ ವಿಕ್ರಾಂತ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ. ಇನ್ನು ಮದುವೆ ಹಾಗೂ ಲಾಕ್ ಡೌನ್ ಇದ್ದ ಕಾರಣ ದಪ್ಪಗಾಗಿದ್ದ ಚಂದನ್ ಕೇವಲ ೭ದಿನಗಳಲ್ಲಿ ೫ ಕೆಜಿ ತೂಕವನ್ನ ಇಳಿಸಿಕೊಂಡು ಅಚ್ಚರಿಗೊಳಿಸಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರ ಎಂದ ಮೇಲೆ ಫಿಟ್ ಆಗಿರಬೇಕಲ್ವಾ..ಅದಕ್ಕಾಗಿ ತಾನು ತೂಕ ಇಳಿಸಿಕೊಂಡು ಫಿಟ್ ಆಗಬೇಕೆಂದು ಕೇವಲ ಏಳು ದಿನಗಳಲ್ಲಿ ಬರೋಬ್ಬರಿ ನೂರು ಕಿಮೀ ಓಡುವ ಮೂಲಕ 5 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ತುಂಬಾ ಬೇಗ ತೂಕ ಇಳಿಸಿಕೊಳ್ಳಬೇಕೆಂದರೆ ಕಿಮೀಗಟ್ಟಲೆ ಓಡುವುದು..ಆದ್ರೆ ಅದು ಅಷ್ಟು ಸುಲಭದ ಮಾತಲ್ಲ ಎಂದು ಚಂದನ್ ಬರೆದುಕೊಂಡಿದ್ದಾರೆ.
[widget id=”custom_html-4″]
ಇನ್ನು ತಾನು ನಿರ್ವಹಿಸುತ್ತಿರುವ ಎಸ್ಪಿ ವಿಕ್ರಾಂತ್ ಪಾತ್ರ ಮಾಡುವುದು ಪ್ರತೀ ಕಲಾವಿದನ ಕನಸಿನ ಪಾತ್ರವಾಗಿರುತ್ತದೆ ಎಂದು ಚಂದನ್ ಹೇಳಿದ್ದಾರೆ. ಇನ್ನು ಚಂದನ್ ಕೇವಲ 7ದಿನಗಳಲ್ಲಿ ೫ಕೆಜಿ ತೂಕ ಇಳಿಸಿಕೊಂಡಿರುವುದಕ್ಕೆ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಗಳನ್ನ ಮಾಡಿ ಚಂದನ್ ಕಳೆಯುವ ಕೆಲಸ ಮಾಡಿದ್ದಾರೆ..ಚಂದನ್ ತೂಕ ಹೆಚ್ಚಾಗಿರೋದಕ್ಕೆ ಕಾರಣ ಲಾಕ್ ಡೌನ್ ಅಲ್ಲ ಮ್ಯಾರೇಜ್ ಎಫೆಕ್ಟ್ ಎಂದು ಕೆಲವರು ಕಾಲೆಳೆದ್ರೆ, ಮತ್ತೆ ಕೆಲವರು ಕಡಿಮೆ ಸಮಯದಲ್ಲಿ ಇಷ್ಟು ತೂಕ ಇಳಿಸಿಕೊಂಡಿರುವುದು ಸಾಧನೆಯೇ ಸರಿ ಎಂದು ಕೆಲವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ..ಇದ್ರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂಬುದನ್ನ ತಿಳಿಸಿ..