4ನೇ ವಾರಕ್ಕೆ ಬಿಗ್ ಮನೆಯಿಂದ ಹೊರಬಂದ ಚಂದ್ರಕಲಾ ಅವರಿಗೆ ಸಿಕ್ಕ ಒಟ್ಟು ಹಣ ಎಷ್ಟು ಗೊತ್ತಾ ?

Entertainment
Advertisements

ಬಿಗ್ ಬಾಸ್ 8ರ ನಾಲ್ಕನೇ ವಾರದಲ್ಲಿ ಖ್ಯಾತ ಕಿರುತೆರೆ ಕಲಾವಿದೆ ಚಂದ್ರಕಲಾ ಮೋಹನ್‌ ಅವರು ಎಲಿಮನೇಟ್ ಆಗಿದ್ದು ಬಿಗ್ ಮನೆಯಿಂದ ಹೊರಬಂದಿದ್ದಾರೆ. ಇನ್ನು ನಾಲ್ಕನೇ ವಾರದ ಎಲಿಮನೇಶನ್ ಪ್ರಕ್ರಿಯೆಯಲ್ಲಿ ಚಂದ್ರಕಲಾ ಅವರ ಜೊತೆಗೆ ಹಿರಿಯ ನಟ ಶಂಕರ್ ಅಶ್ವಥ್ ಅವರು ಕೂಡ ನಾಮಿನೇಟ್ ಆಗಿದ್ದು ಬಹುಶಃ ಶಂಕರ್ ಅಶ್ವಥ್ ಅವರೇ ಈ ಬಾರೀ ಮನೆಯಿಂದ ಹೊರಹೋಗಬಹುದು ಎನ್ನಲಾಗಿತ್ತು.

[widget id=”custom_html-4″]

ಆದರೆ ಇದೇ ನಾಲ್ಕನೇ ವಾರದಲ್ಲಿ ಬಿಗ್ ಬಾಸ್ ನೀಡಿದ್ದ ಟಾಸ್ಕ್ ನಲ್ಲಿ ಸ್ಪರ್ಧಿಗಳು ತಾವು ಯಾರಿಗೂ ಹೇಳದೇ ಇರುವ ವಿಚಾರವನ್ನು ಹಂಚಿಕೊಳ್ಳಲು ಅವಕಾಶ ನೀಡಲಾಗಿತ್ತು. ಇನ್ನು ನಟಿ ಚಂದ್ರಕಲಾ ಅವರು ತಾವು ಚಿಕ್ಕವಯಸ್ಸಿನಲ್ಲಿದ್ದಾಗ ತನ್ನ ತಂದೆ ನನ್ನ ಜೊತೆ ಕೆ’ಟ್ಟದಾಗಿ ನಡೆದುಕೊಂಡಿದ್ದರು ಎಂಬ ವಿಷಯವನ್ನ ಬಹಿರಂಗ ಮಾಡಿ ಕಣ್ಣೀರಿಟ್ಟಿದ್ದರು. ಆದರೆ ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪರ ವಿರೋಧದ ಚರ್ಚೆಗಳು ಉಂಟಾಗಿದ್ದು ಬಹುತೇಕರು ಹೆತ್ತ ತಂದೆಯ ಕುರಿತಾದ ಈ ರೀತಿಯ ವಿಷಯಗಳನ್ನು ವಾಹಿನಿಯಲ್ಲಿ ಹೇಳಿಕೊಳ್ಳುವ ಅವಶ್ಯಕತೆ ಇರಲಿಲ್ಲ‌ಎಂದು ಬೇಸರ ವ್ಯಕ್ತಪಡಿಸಿದ್ದರು.

[widget id=”custom_html-4″]

Advertisements

ಇನ್ನು ಪರ ವಿರೋಧದ ಈ ಚರ್ಚೆಗಳೇ‌ ಚಂದ್ರಕಲಾ ಅವರು ಬಿಗ್ ಮನೆಯಿಂದ ನಾಮಿನೇಟ್ ಆಗಲು ಕಾರಣವಾಯಿತಾ ಎನ್ನಲಾಗಿದೆ. ಇನ್ನು 4 ವಾರಗಳ ಕಾಲ‌ ಬಿಗ್ ಬಾಸ್ ಮನೆಯಲ್ಲಿದ್ದ ಚಂದ್ರಕಲಾ ಅವರಿಗೆ ಸಿಕ್ಕ ಸಂಭಾವನೆ ಬಗ್ಗೆ ಹೇಳುವುದಾದರೆ ವಾರಕ್ಕೆ ೪೦ ಸಾವಿರ, ಅಂದರೆ ಒಟ್ಟು 1 ಲಕ್ಷ 60 ಸಾವಿರ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.