ಕನ್ನಡದ ಖ್ಯಾತ ನಟ ಚರಣ್ ರಾಜ್ ಅವರ ಮಗ ಈಗ ಹೇಗಿದ್ದಾರೆ ಗೊತ್ತಾ ? ಈಗೇನು ಮಾಡ್ತಿದ್ದಾರೆ ನೋಡಿ..

Cinema
Advertisements

ಸ್ನೇಹಿತರೇ, ಸ್ಯಾಂಡಲ್ವುಡ್ ನಲ್ಲಿ ಖಳನಟನಿಂದ ಹಿಡಿದು, ನಾಯಕ ನಟ ಸೇರಿದಂತೆ ಪೋಷಕ ಪಾತ್ರಗಳಲ್ಲೂ ಸಹ ಅಭಿನಯಿಸಿರುವ ನಟ ಚರಣ್ ರಾಜ್ ಅವರು ಕನ್ನಡಿಗರಿಗೆ ಚಿರಪರಿಚಿತರೆ. ೬೩ ವರ್ಷ ವಯಸ್ಸಾಗಿದ್ದರೂ ಸಹ ನೋಡಲು ಈಗಲೂ ಚಿರಯುವಕನಂತೆ ಕಾಣಿಸುತ್ತಾರೆ. ಚರಣ್ ರಾಜ್ ನಟರು ಮಾತ್ರವಲ್ಲದೆ ನಿರ್ದೇಶಕರಾಗಿ, ನಿರ್ಮಾಪಕರಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಕರ್ನಾಟಕದ ಬೆಳಗಾಂ ನಲ್ಲಿ ಹುಟ್ಟಿ ಇಡೀ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಬೆಳೆದ ಚರಣ್ ರಾಜ್ ಅವರು ೧೯೮೨ರಲ್ಲಿ ಬಿಡುಗಡೆಗೊಂಡ ಸಿದ್ದಲಿಂಗಯ್ಯ ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಒಡಿಯಾ ಭಾಷೆಗಳಲ್ಲೂ ನಟಿಸಿದ್ದಾರೆ. ಇನ್ನು ಈಗಿನ ಕನ್ನಡ ಚಿತ್ರಗಳಲ್ಲಿ ಪೋಷಕ ಪಾತ್ರಗಳಲಿ ನಟಿಸುತ್ತಿದ್ದಾರೆ ಚರಣ್ ರಾಜ್.

[widget id=”custom_html-4″]

Advertisements

ಇನ್ನು ೧೯೮೩ರಲ್ಲಿ ತೆರೆಗೆ ಬಂದ ಆಶಾ ಚಿತ್ರ ಸೇರಿದಂತೆ ಗಂಧದ ಗುಡಿ ಪಾರ್ಟ್ ೨, ಅಣ್ಣಾವ್ರ ಮಕ್ಕಳು, ಸೂರಪ್ಪನಾಯಕ, ಆಫ್ರಿಕಾದಲ್ಲಿ ಶೀಲಾ ಸೇರಿದಂತೆ ಇತ್ತೀಚಿನ ರಾಜಾಹುಲಿ, ರಥಾವರ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಚರಣ್ ರಾಜ್ ಅವರ ಮಗನ ಹೆಸರು ತೇಜ್ ರಾಜ್ ಎಂದು. ಸಿನಿಮಾ ರಂಗದಲ್ಲಿ ನಟ ನಟಿಯರ ಮಕ್ಕಳು ಕೂಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವುದು ಹೊಸತೇನು ಅಲ್ಲ. ಹೌದು, ಚರಣ್ ರಾಜ್ ಅವರ ಪತ್ನಿಯ ಹೆಸರು ಕಲ್ಪನಾ ಚರಣ್ ರಾಜ್ ಎಂದು. ಈ ದಂಪತಿಯ ಏಕೈಕ ಪುತ್ರ ತೇಜ್ ರಾಜ್, ಕೂಡ ತಮಿಳಿನ ೯೦ಎಂಎಲ್ ಎಂಬ ಚಿತ್ರದ ಮೂಲಕ ನಾಯಕ ನಟನಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

[widget id=”custom_html-4″]

ಇನ್ನು ಬಹುತೇಕರಿಗೆ ಗೊತ್ತಿಲ್ಲದ ವಿಚಾರ ಏನೆಂದರೆ ಕನ್ನಡದ ಭಾರತ ಬಾಹುಬಲಿ ಎಂಬ ಚಿತ್ರದಲ್ಲೂ ಸಹ ತೇಜ್ ರಾಜ್ ನಟಿಸಿದ್ದಾರೆ. ಈ ಮೂಲಕ ಕನ್ನಡದ ನಟನು ಆಗಿದ್ದಾರೆ ಚರಣ್ ರಾಜ್ ಅವರ ಪುತ್ರ. ಇನ್ನು ತೇಜ್ ರಾಜ್ ನೇರವಾಗಿ ಏನೂ ಸಿನಿಮಾ ರಂಗಕ್ಕೆ ಕಾಲಿಟ್ಟಿಲ್ಲ. ಬಲು ಮಹೇಂದರ್ ಅವರ ಫಿಲಂ ಮೇಕಿಂಗ್ ತರಭೇತಿಯಲ್ಲಿ ಸಿನಿಮಾ ನಟನೆಯ ಬಗ್ಗೆ ಕಲಿತು ಎಲ್ಲಾ ರೀತಿಯ ತಯಾರಿಯನ್ನ ಮಾಡಿಕೊಂಡೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ತಂದೆ ಚರಣ್ ರಾಜ್ ರವರಂತೆ ತೇಜ್ ರಾಜ್ ಕೂಡ ದಕ್ಷಿಣ ಭಾರತೀಯ ಸಿನಿಮಾ ರಂಗದಲ್ಲಿ ಖ್ಯಾತ ನಟನಾಗಿ ಗುರುತಿಸಿಕೊಳ್ಳುತ್ತಾರಾ ಎಂಬುದನ್ನ ಕಾದು ನೋಡಬೇಕಾಗಿದೆ..