ನಟರೊಬ್ಬರು ಮಹಿಳೆಯನ್ನ ನಾಯಿ ನರಿ ಕ್ರಿಮಿ ಕೀಟ ಎನ್ನುತ್ತಾರೆ ಎಂದ ಚೇತನ್..ನಟನ ಟ್ವೀಟ್ ವಿರುದ್ಧ ಕಿಡಿಕಾರಿದ ನೆಟ್ಟಿಗರು..

Cinema
Advertisements

ಆ ದಿನಗಳು ಖ್ಯಾತಿಯ ನಟ ಚೇತನ್ ರವರು ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾನಾಡಲ್ಲಿ ಸಖತ್ ವೈರಲ್ ಆಗಿದೆ. ಟ್ವೀಟ್ ನಲ್ಲಿರುವ ಮಾತನ್ನ ಚೇತನ್ ಹೇಳಿದ್ದು ಯಾರಿಗೆ ಎಂಬುದರ ಬಗ್ಗೆ ಚರ್ಚೆಗಳಾಗುತ್ತಿವೆ.

Advertisements

ಹೌದು ನಟ ಚೇತನ್ ಸ್ಯಾಂಡಲ್ವುಡ್ ನ ನಟರೊಬ್ಬರು ಮಹಿಳೆಯನ್ನ ನಾಯಿ, ನರಿ ಕ್ರಿಮಿ ಕೀಟ ಎನ್ನುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಚೇತನ್ ಈ ಟ್ವೀಟ್ ನಲ್ಲಿ ಹೇಳಿರುವ ಮಾತುಗಳು ಯಾವ ನಟನ ಕುರಿತು ಎಂಬುದರ ಬಗ್ಗೆ ಚರ್ಚೆಗಳಾಗುತ್ತಿವೆ. ಹಾಗಾದ್ರೆ ಟ್ವೀಟ್ ನಲ್ಲಿ ಚೇತನ್ ಹೇಳಿದ್ದೇನು ಎಂಬುದನ್ನ ಈ ಕೆಳಗಡೆ ಇರುವ ಚಿತ್ರದಲ್ಲಿ ನೋಡಿ..

ಇನ್ನು ಮುಂದುವರಿದು ಟ್ವೀಟ್ ಮಾಡಿರುವ ನಟ ಚೇತನ್ ನೆನ್ನೆ ತಾನೇ ಅವರು ಧಾರ್ಮಿಕತೆಯನ್ನ ವೈಭವೀಕರಿಸುವ ಮೂಲಕ ಅಂಬೇಡ್ಕರ್ ಜಯಂತಿಯ ಶುಭಾಶಯಗಳನ್ನ ಬರೆದಿದ್ದಾರೆ. ಎಂದು ಟ್ವೀಟ್ ಮಾಡಿದ್ದು, ಈ ಟ್ವೀಟ್ ಗಳು ಬಾರೀ ವೈರಲ್ ಆಗುತ್ತಿದ್ದು ಚರ್ಚೆಯಾಗುತ್ತಿವೆ.

ಇನ್ನು ಈ ಟ್ವೀಟ್ ಗಳನ್ನ ನಟ ಚೇತನ್ ಆಕ್ಷನ್ ಪ್ರಿನ್ಸ್ ನಟ ಧ್ರುವಸರ್ಜಾ ವಿರುದ್ಧವೇ ಮಾಡಿದ್ದಾರೆ ಎಂದು ಅಭಿಮಾನಿಗಳ ಪ್ರಶ್ನೆಯಾಗಿದೆ. ಯಾಕೆಂದರೆ ಧ್ರುವ ಸರ್ಜಾ ರವರು ಅಂಬೇಡ್ಕರ್ ಜಯಂತಿಯ ಕುರಿತು ಟ್ವೀಟ್ ಮಾಡಿದ್ದರು.

ಜೊತೆಗೆ ಇತ್ತೀಚೆಗಷ್ಟೇ ಧ್ರುವಸರ್ಜಾ ಅಭಿನಯದ ಪೊಗರು ಚಿತ್ರದ ಹಾಡು ಬಿಡುಗಡೆಯಾಗಿದ್ದು, ವೈರಲ್ ಆಗಿರುವ ಈ ಹಾಡಿನಲ್ಲಿ ನಟ ಧ್ರುವಸರ್ಜಾ ನಟಿಗೆ ಬೆದರಿಕೆ ಹಾಕುವ, ನಟಿಯನ್ನ ಎಳೆದಾಡುವ ದೃಶ್ಯಗಳು ಇವೆ. ಹಾಗಾಗಿ ಈ ಟ್ವೀಟ್ ಗಳನ್ನ ನಟ ಚೇತನ್ ನಟ ಧ್ರುವ ಸರ್ಜಾ ವಿರುದ್ಧವಾಗಿಯೇ ಮಾಡಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಇನ್ನು ಚೇತನ್ ಮಾಡಿರುವ ಟ್ವೀಟ್ ಕುರಿತು ಪರ ವಿರೋಧದ ಚರ್ಚೆಗಳಾಗುತ್ತಿವೆ. ಇನ್ನು ನೆಟ್ಟಿಗರು ಸಿನಿಮಾನ ಸಿನಿಮಾ ರೀತಿ ನೋಡಿ. ಸಿನಿಮಾಗೂ ನಿಜ ಜೀವನಕ್ಕೂ ಹೋಲಿಕೆ ಮಾಡಬೇಡಿ ಎಂದು ಚೇತನ್ ಮಾಡಿರುವ ಟ್ವೀಟ್ ಗಳ ವಿರುದ್ಧ ಕಿಡಿಕಾರಿದ್ದಾರೆ.