ಬರೋಬ್ಬರಿ 365 ದಿನ ಸರೋವರದಲ್ಲಿ ಈಜಾಡಿದ ಬಸ್ ಡ್ರೈವರ್ ! ಆಮೇಲೆನಾಯ್ತು ಗೊತ್ತಾ?

Inspire
Advertisements

ಹೆಮ್ಮಾರಿ ಕೊರೊನಾ ವಿರುದ್ಧ ಜನರು ಕಳೆದೊಂದು ವರ್ಷದಲ್ಲಿ ಇನ್ನಿಲ್ಲದ ರೀತಿಯಲ್ಲಿ ಸಮರ ಸಾರುತ್ತಲೇ ಇದ್ದಾರೆ. ಈ ನಡುವೆ ಚಿಗಾಗೋದ ಬಸ್ ಡ್ರೈವರ್ ವೊಬ್ಬ ಹೊಸ ಸಾಹಸ ಮಾಡುವ ಮೂಲಕ ಕೊರೊನಾ ವಿರುದ್ಧ ತಮ್ಮದೇ ಶೈಲಿಯಲ್ಲಿ ಸಮರ ಸಾರಿದ್ದಾನೆ. ಆ ಹಿರಿ ಜೀವದ ಸಾಧನೆ ಎಲ್ಲರನ್ನ ಹುಬ್ಬೇರಿಸುವಂತ್ತಿದೆ. ಅಷ್ಟಕ್ಕೂ ಆ ಹಿರಿ ಜೀವ ಮಾಡಿದ್ದೇನು ಎಂಬುದನ್ನು ಹೇಳ್ತೀವಿ..ಅಮೆರಿಕದ ಚಿಕಾಗೋದ ಬಸ್ ಡ್ರೈವರ್ ಒಬ್ಬ ಕೊರೊನಾ ಕಾಲದಲ್ಲಿ ಒತ್ತಡವನ್ನು ನಿವಾರಣೆ ಮಾಡಲು ಯಾರು ಮಾಡದ ಸಾಹಸವನ್ನು ಮಾಡಿದ್ದಾರೆ. ಮಿಚಿಗನ್ ಸರೋವರ ಜಗತ್ತಿನ ಮಹಾನ್ ಸರೋವರಗಳಲ್ಲಿ ಒಂದು. ಪ್ರವಾಸಿಗರ ನೆಚ್ಚಿನ ತಾಣ. ಬೆಳ್ಳಿಯಂತೆ ಪ್ರಜ್ವಲಿಸುವ ಮರಳುಗಳು, ಬೆರಗುಗೊಳಿಸುವ ಬಿಳಿ ದಿಬ್ಬಗಳು, ಅಪ್ಪಳಿಸುವ ಅಲೆಗಳು ಎಲ್ಲವು ಸುಂದರವಾಗಿರುತ್ತೆ. ವರ್ಷಕ್ಕೆ 4 ತಿಂಗಳು ಮಂಜುಗಡ್ಡೆಯಿಂದ ಆವೃತವಾಗಿರುತ್ತದೆ. ಇದೇ ಸರೋವರದದಲ್ಲಿ ಹಿರಿಯ ವ್ಯಕ್ತಿಯೊಬ್ಬರು ಈಜಾಡಿ ಸುದ್ದಿಯಾಗಿದ್ದಾರೆ. ಚಿಕಾಗೋಗ ಸರೋವರದ ಸನಿಹದಲ್ಲಿದ್ದ ಜನರೆಲ್ಲಾ ಅದೊಬ್ಬನ ಬರುವಿಕಾಗಿ ಕ್ಯಾಮೆರಾ ಇಡ್ಕೊಂಡು ಕಾಯ್ತಿದ್ರ್ರು.

[widget id=”custom_html-4″]

Advertisements

ಸರೋವರದ ಬಳಿ ಬಂದ ಆ ಹಿರಿ ವಯಸ್ಸಿನ ವ್ಯಕ್ತಿ ನೋಡು ನೋಡುತ್ತಿದ್ದಂತೆಯೇ ಸರೋವರಕ್ಕೆ ಧುಮುಕಿದ್ದಾರೆ. ನಂತರ ಮೀನಿನಂತೆ ಸರೋವರ ತುಂಬೆಲ್ಲಾ ಈಜಾಡಿದ್ದಾರೆ. ಈಜಿ ದಡ ಸೇರಿದ ನಂತರ ಎರಡು ಕೈಗಳನ್ನ ಮೇಲೆತ್ತಿ ಸಾಧನೆಯ ಸಂಭ್ರಮಾಚರಣೆ ಮಾಡಿದ್ದಾರೆ. ಇವರು ಹೀಗೆ ಕೈ ಮೇಲೆತ್ತಿ ಸಂಭ್ರಮಿಸಲು ಪ್ರಮುಖ ಕಾರಣವೊಂದಿದೆ. ಸರೋವರದಲ್ಲಿ ಈಜಾಡಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಸರೋವರದಲ್ಲಿ ಈಜಾಡುವುದು ಕಾಮನ್ ಅಲ್ವಾ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದ್ರೆ ಇವರು ಈಜಾಡಿದ್ದು ಒಂದೆರಡು ದಿನವಲ್ಲ. ಒಂದೆರಡು ವಾರ ಕೂಡ ಅಲ್ಲ, ಒಂದೆರಡು ತಿಂಗಳು ಅಂತೂ ಅಲ್ವೇ ಅಲ್ಲ. ಇವರು ಈ ಮಿಚಿಗನ್ ಸರೋವರದಲ್ಲಿ ಈಜಾಡಿದ್ದು ಸತತ 365 ದಿನಗಳು. ಇವರೇ ನೋಡಿ ಕೊರೊನಾ ಒತ್ತಡವವನ್ನು ಕಡಿಮೆ ಮಾಡಲು ವರ್ಷದ ಎಲ್ಲಾ ದಿನವು ಸರೋವರಕ್ಕೆ ಹಾರಿದ ವ್ಯಕ್ತಿ . ಹೆಸರು ಡಾನ್ ಒ ಕಾನರ್. ವೃತ್ತಿಯಲ್ಲಿ ಬಸ್ ಚಾಲಕರಾಗಿರುವ ಇವರು ಕೊರೊನಾ ಒತ್ತಡವನ್ನು ಮಣಿಸಲು ವರ್ಷದ ಎಲ್ಲಾ ದಿನವೂ ಸರೋವರಕ್ಕೆ ಹಾರಿ ಈಜಾಡಿದ್ದಾರೆ. ವರ್ಷವಿಡೀ ಸ್ವಿಮ್ಮಿಂಗ್ ಮಾಡುವ ಮೂಲಕ ಕೊರೊನಾದ ವಿರುದ್ಧ ತನ್ನದೇ ಸ್ಟೈಲ್ ನಲ್ಲಿ ಹೋರಾಟ ನಡೆಸಿದ್ದಾರೆ.

[widget id=”custom_html-4″]

ಮಂಜಿನ ರಾಶಿಯ ಮೇಲೆ ನಿಂತು ನೀರಿಗೆ ಜಂಪ್ ಸಹ ಮಾಡ್ತಿದ್ದಾರೆ. ಯಾಕಂದ್ರೆ ಇವರದ್ದು ಬಿಸಿ ರ’ಕ್ತದ ದೇಹವಲ್ಲ. ಆದ್ರೂ ಇವರು ಮಾತ್ರ ಎದೆಗುಂದಲಿಲ್ಲ. ಮಳೆಗಾಲದ ಸಮಯದಲ್ಲೂ ಕಿಂಚಿತ್ತು ಹೆದರಲಿಲ್ಲ, ಚಳಿಗಾಳದ ಸಮಯದಲ್ಲೂ ಕಿಂಚಿತ್ತು ಜಗ್ಗಲಿಲ್ಲ. ಕೊರೆಯುವ ಚಳಿಯ ನಡುವೆಯೂ ಎದೆಗುಂದಲ್ಲಿಲ್ಲ. ಎಂತಹ ಸವಾಲುಗಳು ಎದುರಾದ್ರು ಸ್ವಿಮ್ಮಿಂಗ್ ಮಾತ್ರ ನಿಲ್ಲಿಸಲಿಲ್ಲ. ಚಳಿಗಾಲದಲ್ಲೂ ಕೂಡ ನಿತ್ಯವೂ ಇದೇ ಮಿಚಿಗನ್ ಸರೋವರದಲ್ಲಿ ಸ್ವಿಮ್ಮಿಂಗ್ ಮಾಡ್ತಿದ್ರು. ಕೊರೊನಾ ಸಮಯದಲ್ಲಿ ಒತ್ತಡ ನಿವಾರಿಸಲು ಕಳೆದ ವರ್ಷ ನಗರದ ಉತ್ತರ ಭಾಗದಲ್ಲಿರುವ ಮಾಂಟ್ರೋಸ್ ಬಂದರಿನಲ್ಲಿರುವ ಸರೋವರಕ್ಕೆ ನಿತ್ಯ ಹಾರಲು ಪ್ರಾರಂಭಿಸಿದೆ. ಚಳಿಗಾಲದಲ್ಲಿ ಹಲವು ಸಮಸ್ಯೆಗಳು ಎದುರಾದವು. ಮಂಜುಗಂಡೆಗಳ ಮೇಲೆ ಸ್ವಲ್ಪ ಹೊತ್ತು ನಡೆದು ಆ ಮೇಲೆ ಜಂಪ್ ಮಾಡಬೇಕಿತ್ತು. ಮಂಜು ಗಡ್ಡೆಯ ಮೇಲೆ ನಿಂತು ಜಂಪ್ ಮಾಡುವಾಗ ಹಲವು ಸಂದರ್ಭದಲ್ಲಿ ಜಾರುವ ಅ’ಪಾಯವು ಕೂಡ ಎದುರಾಗಿತ್ತು.

[widget id=”custom_html-4″]

ದೇಹದ 20 ಕಡೆ ಗಾ’ಯಗಳಾಗಿದ್ದವು. ಚಳಿಗಾಳದ ವೇಳೆ ಈಜುವಾಗ ಹಲವು ಸಮಸ್ಯೆಗಳು ಎದುರಾಗಿದ್ದವು. ದೇಹದಲ್ಲಿ ಸರಿಸುಮಾರು 20ಕ್ಕೂ ಅಧಿಕ ಕಡೆ ಗಾ’ಯಗಳಾಗಿದ್ದವು. ಆದ್ರೂ ಬಸ್ ಡ್ರೈವರ್ ಸಾಹಸಿ ಡಾನ್ ಒ ಕಾನರ್ ಮಾತ್ರ ಎಂದಿನಂತೆ ತನ್ನ ಸಾಹಸವನ್ನು ಮುಂದುವರೆಸಿದ್ದರು. ವರ್ಷವಿಡೀ ಸರೋವರದಲ್ಲಿ ಈಜಾಡುವ ಮೂಲಕ ಈ ವ್ಯಕ್ತಿ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಏನೇ ಆಗಲಿ, ವರ್ಷದ 365 ದಿನವೂ ಸರೋವರದಲ್ಲಿ ಈಜಾಡಿದ ಇವರ ಸಾಹಸ ಮೆಚ್ಚಲೇಬೇಕು. ಕೊರೆವ ಚಳಿಯೇ ಇರಲಿ, ಮಳೆಯೇ ಇರಲಿ, ಅವೆಲ್ಲವು ಈ ಹಿರಿ ಜೀವದ ಛಲದ ಎದುರು ಮಂಡಿವೂರಿತ್ತು. ವರ್ಷದ ಎಲ್ಲಾ ದಿನವು ಜಲ ಸಮರ ಮಾಡುವ ಮೂಲಕ ಕೊರೊನಾ ವಿರುದ್ಧ ತನ್ನ ಮಾನಸಿಕ ಆರೋಗ್ಯವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ಇವರ ಸಾಧನೆ ಯುವಕರನ್ನ ನಾಚಿಸುವಂತಿದೆ.