ಗಾರೆ ಕೆಲಸ ಮಾಡುತಿದ್ದ ನಟ ಚಿಕ್ಕಣ್ಣನ ಜೀವನದ ಕಣ್ಣೀರಿನ ಕಥೆ

Kannada News - Cinema

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟರಲ್ಲಿ ಚಿಕ್ಕಣ್ಣ ಕೂಡ ಒಬ್ಬರು. ಹೌದು, ಒಂದು ಕುಗ್ರಾಮದಿಂದ ಬಂದ ನಟ ಚಿಕ್ಕಣ್ಣ ಇವತ್ತಿಗೆ ಸ್ಯಾಂಡಲ್ವುಡ್ ನಲ್ಲಿ ಈ ಮಟ್ಟಕ್ಕೆ ಬಬೆಳೆದಿದ್ದಾರೆಂದರೆ, ಅದರ ಹಿಂದೆ ಹಲವಾರು ಕಷ್ಟ, ನೋವು ಸೇರಿದಂತೆ ಕಹಿ ಘಟನೆಗಳಿವೆ. ಹೌದು, ಚಿಕ್ಕಣ್ಣ ಹೂ ಮಾರೋದ್ರಿಂದ ಹಿಡಿದು, ಕಡಲೆಕಾಯಿ ಬೋಂಡಾ ಮಾರೋದ್ರಿಂದ ಹಿಡಿದು ಗಾರೆ ಕೆಲಸ ಕೂಡ ಮಾಡಿ ಇವತ್ತು ಈ ಮಟ್ಟಕ್ಕೆ ಬೆಳೆದಿದ್ದಾರೆ.

ಮೈಸೂರಿನ ಗೊಲ್ಲಹಳ್ಳಿಯಲ್ಲಿ ಬೈರೇಗೌಡ ನಿಂಗವ್ವ ದಂಪತಿಗಳ ಮಗನಾಗಿ ೨೨ ಜೂನ್ ೧೯೮೪ರಲ್ಲಿ ಚಿಕ್ಕಣ್ಣ ಹುಟ್ಟಿದ್ದು. ಆರು ಜನ ಮಕ್ಕಳಿರುವ ಬಡ ಕುಟುಂಬದಲ್ಲಿ ೫ನೇವನಾಗಿ ಹುಟ್ಟಿದ್ದು ಚಿಕ್ಕಣ್ಣ. ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಬಾಲ್ಯದಿಂದಲೂ ಕಷ್ಟಗಳನ್ನೇ ಎದುರಿಸುತ್ತಾ ಬೆಳೆಯುತ್ತಾರೆ. ತಮ್ಮ ಊರಿನ ಶಾಲೆಯಲ್ಲಿ ಓದುತ್ತಿದ್ದ ಸಮಯದಲ್ಲೇ ಆರ್ಥಿಕ ಪರಿಸ್ಥಿತಿಯ ಕಾರಣ ರಜಾ ದಿನಗಳಲ್ಲಿ ಗಾರೆ ಕೆಲಸ ಕೂಡಾ ಮಾಡುತ್ತಾರೆ.ಇನ್ನು ತಮ್ಮ ಗೆಳೆಯರ ಜೊತೆ ಸೇರಿ ಮೊದಲ ಬಾರಿಗೆ ನಾಟಕ ಮಾಡುವ ಚಿಕ್ಕಣ್ಣ, ಮಾಡಿದ ಮೊದಲ ಪಾತ್ರ ಚಾರ್ಲಿ ಚಾಪ್ಲಿನ್. ಇನ್ನು ಮನೆಯಲ್ಲಿದ್ದ ಸಂಕಷ್ಟದಿಂದ ಎಷ್ಟೋ ದಿವಸ ದಿನಪತ್ರಿಕೆಗಳನ್ನ ಮಾರಿ ಕಡ್ಲೆ ಪುರಿಯನ್ನ ತಿಂದು ತಮ್ಮ ಹಸಿವನ್ನ ನೀಗಿಸಿಕೊಂಡಿದ್ದಾರೆ. ಇನ್ನು ಬಡತನದ ಕಾರಣ ಹತ್ತನೇ ತರಗತಿವರಿಗೆ ಓದಿ ತಮ್ಮ ವಿದ್ಯಾಭ್ಯಾಸ ನಿಲ್ಲಿಸಿ, ಗಾರೆ ಕೆಲಸದಲ್ಲಿ ತೊಡಗುತ್ತಾರೆ.ಇನ್ನು ಕೆಲಸದ ನಡುವೆ ನಾಟಕ ಮಾಡುತ್ತಿದ್ದದ್ದು ಚಿಕ್ಕಣ್ಣನ ತಂದೆಗೆ ಕೋಪ ಇತ್ತು. ಹೆದರಿಸಿದ್ದರು ಕೂಡ. ಆದರೆ ಛಲ ಬಿಡದ ಚಿಕ್ಕಣ್ಣ ಕೆಲಸ ಮಾಡುತ್ತಲೇ ಮೈಸೂರು ದೃಶ್ಯಕಲಾವಿದ ನಾಟಕ ಮಂಡಳಿಯನ್ನ ಸೇರುತ್ತಾರೆ.ಇನ್ನು ದಿನವಿಡೀ ಕೆಲಸ ಮಾಡುತ್ತಿದ್ದ ಚಿಕ್ಕಣ್ಣ ರಾತ್ರಿ ವೇಳೆ ನಾಟಕದ ತರಭೇತಿ ಪಡೆದು ಅಭಿನಯ ಮಾಡುತ್ತಿದ್ದರು. ನಾಟಕಗಳು ಮಾತ್ರವಲ್ಲದೆ ಖಾಸಗಿ ಕನ್ನಡ ವಾಹಿನಿ ಸುವರ್ಣದಲ್ಲಿ ಮೂಡಿಬರುತ್ತಿದ್ದ ಕ್ಲಾಸ್ ಮೇಟ್ಸ್ ಅನ್ನೋ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಮತ್ತಷ್ಟು ಮಾಹಿತಿಗಾಗಿ ಈ ವಿಡಿಯೋ ನೋಡಿ..