ಈ ವಾರ ಹುಟ್ಟಿದೋರು ತುಂಬಾ ಅದೃಷ್ಟಶಾಲಿಗಳು ! ತಂದೆ ತಾಯಿಗೆ ಸಂಕಟವಾಗ್ತಾರೆ ಈ ವಾರ ಹುಟ್ಟಿದವರು..

Astrology
Advertisements

ಜಗತ್ತು ಎಷ್ಟೇ ಮುಂದುವರಿದಿದ್ದರೂ ಜ್ಯೋತಿಷ್ಯ ಶಾಸ್ತ್ರಗಳನ್ನ ನಂಬುವವರು ಇದ್ದಾರೆ. ಇನ್ನು ಮಕ್ಕಳು ಹೇಗೆ ಇಷ್ಟಾನೋ ಹಾಗೆಯೆ ಯಾವ ವಾರ ಮಗು ಜನಿಸಿದ್ರೆ ಅದೃಷ್ಟ ಅಂತ ನಂಬುವವರೂ ಇದ್ದಾರೆ. ಅವರವರ ನಂಬಿಕೆ ಅವರಿಗೆ ಬಿಟ್ಟದ್ದು. ಇನ್ನು ಕೆಲವರು ನಮಗೆ ಮಹಾಲಕ್ಷ್ಮಿಯಂತಹ ಹೆಣ್ಣು ಮಗು ಬೇಕೆಂಬ ಆಸೆ ಇದ್ದರೆ, ಇನ್ನು ಕೆಲವರಿಗೆ ನಮಗೆ ಗಂಡು ಮಗು ಆಗಬೇಕು ಎಂಬ ಆಸೆ ಇರುತ್ತದೆ. ಇನ್ನು ಅನೇಕರು ಮಗು ಜನಿಸಿದ್ರೆ ಇದೇ ವಾರ, ರಾಶಿ, ನಕ್ಷತ್ರದಂತಹ ಸಮಯದಲ್ಲಿ ಜನಿಸಿದ್ರೆ ತುಂಬಾ ಒಳ್ಳೇದಾಗುವುದರ ಜೊತೆಗೆ ಅದೃಷ್ಟ ಬರುತ್ತದೆ ಎಂಬುದು ಕೆಲವರ ನಂಬಿಕೆ. ಇನ್ನು ಯಾವ ಸಮಯದಲ್ಲಿ ಗಂಡು ಮಕ್ಕಳು ಹುಟ್ಟಿದರೆ ಏನಾಗುತ್ತೆ ಅಂತ ನೋಡೋಣ ಬನ್ನಿ..

[widget id=”custom_html-4″]

ಇನ್ನು ಹಿಂದೂ ಧರ್ಮದಲ್ಲಿ ಮಕ್ಕಳು ಹುಟ್ಟಿದಾಗ ರಾಶಿ, ನಕ್ಷತ್ರ, ತಿಥಿಗಳನ್ನ ನೋಡಲಾಗುತ್ತದೆ. ಇನ್ನು ಶಾಸ್ತ್ರಗಳ ಪ್ರಕಾರ ಸಾಮಾನ್ಯವಾಗಿ ಹೇಳುವುದೇ ಏನೆಂದರೆ, ಭಾನುವಾರದಂದು ಗಂಡು ಮಕ್ಕಳು ಹುಟ್ಟಿದ್ರೆ ಶುಭ, ಅದೇ ಸೋಮವಾರದಂದು ಗಂಡುಮಕ್ಕಳ ಜನನವಾದ್ರೆ ಶ್ರೇಷ್ಠ, ಇವರು ದೈವಭಕ್ತಿಯುಳ್ಳವರಾಗಿದ್ದು, ಶಿವನ ಭಕ್ತರಾಗಿರುತ್ತಾರೆ. ಇನ್ನು ಮಹಾಕಿಲಾಡಿಗಳು ಆಗಿರುತ್ತಾರಂತೆ ಮಂಗಳವಾರದಂದು ಜನಿಸಿದ ಗಂಡುಮಕ್ಕಳು, ಇವರು ಯಾರ ಮಾತಿಗೂ ಬೆಲೆ ಕೊಡುವುದಿಲ್ಲ, ಇನ್ನು ಸ್ವಂತ ತಂದೆ ತಾಯಿಗಳಿಗೂ ಕೂಡ ಇವರು ವಿರೋಧವಾಗಿರುತ್ತಾರೆ ಎಂದು ಹೇಳಲಾಗಿದೆ. ಬುಧವಾರದಂದು ಹುಟ್ಟುವ ಮಕ್ಕಳು ಜ್ಞಾನ ಯೋಗ ಹೊಂದಿರುತ್ತಾರೆ. ಸೌಮ್ಯ ಲಕ್ಷಣದ ಸ್ವಭಾವ ಹೊಂದಿರುವ ಇವರು ಜೀವನದಲ್ಲಿ ಹಂತಹಂತವಾಗಿ ಬೆಳೆಯುತ್ತಾರೆ.

[widget id=”custom_html-4″]

ಇನ್ನು ಶನಿವಾರದಂದು ಹುಟ್ಟುವ ಗಂಡು ಮಕ್ಕಳು ಪ್ರಳಯಾಂತಕರು ಆಗಿರುತ್ತಾರೆ ಎಂದು ಹೇಳಲಾಗಿದೆ. ಇವರು ತಮ್ಮ ಇಷ್ಟದಂತೆ ಕೆಲಸಗಳನ್ನ ಮಾಡುತ್ತಾ ಹೋಗುತ್ತಾರೆ. ಮಂದಗತಿಯಲ್ಲಿ ಸಾಗುವ ಇವರ ಜೀವನ, ಯಾವುದೇ ರೀತಿಯಲ್ಲಿ ಅಭಿವೃದ್ದಿಯನ್ನ ಹೊಂದಲು ಸಾಧ್ಯವಿಲ್ಲ. ಇನ್ನು ಹೆಣ್ಣು ವಿಚಾರಕ್ಕೆ ಬಂದರೆ ಶುಕ್ರವಾರ ಜನಿಸುವ ಹೆಣ್ಣು ಮಕ್ಕಳು ಮಹಾ ಲಕ್ಷ್ಮಿಯ ಸ್ವರೂಪವಾಗಿರುತ್ತಾರೆ. ಮಂಗಳವಾರದಂದು ಜನಿಸುವ ಹೆಣ್ಣುಮಕ್ಕಳು ದುರ್ಗಿ ಮನೆಗೆ ಬಂದ್ಲು ಅನ್ನೋ ಮಾತು ಕೂಡ ಇದೆ. ಇನ್ನು ಪೂರ್ವಜರೇ ಮಂಗಳವಾರದಂದು ಹೆಣ್ಣು ಮಗುವಿನ ರೂಪದಲ್ಲಿ ಹುಟ್ಟುತ್ತಾರೆ ಎಂಬ ನಂಬಿಕೆ ಕೂಡ ಇದೆ. ಇನ್ನು ಹೆಣ್ಣು ಮಗು ಭಾನುವಾರದಂದು ಹುಟ್ಟಿದ್ರೆ ಸಕಲ ಐಶ್ವರ್ಯದಿಂದ ಆನಂದವಾಗಿ ಬದುಕುವ ಯೋಗ ಬರುತ್ತದೆ ಎಂದು ಹೇಳಲಾಗಿದೆ. ಏನೇ ಇದ್ದರೂ ಶಾಸ್ತ್ರಗಳನ್ನ ನಂಬುವುದು ಅವರವರಿಗೆ ಬಿಟ್ಟ ವಿಚಾರ..