ರಾಜ್ಯಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್.! ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಹಣ??

News
Advertisements

ಲಾಕ್ ಡೌನ್ ನಿಂದಾಗಿ ಸಾಮಾನ್ಯ ಜನರ ಸಂಕಷ್ಟ ಹೇಳತೀರದಂತಾಗಿದೆ. ಈಗ ಜನರ ಸಂಕಷ್ಟಕ್ಕೆ ನೆರವಾಗಲು ಮುಂದಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಬಜೆಟ್ ಮಾದರಿಯಲ್ಲಿ ಪರಿಹಾರವನ್ನ ಘೋಷಣೆ ಮಾಡಿದೆ.

Advertisements

ಹೌದು, ಈಗ ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ನೇಕಾರರಿಗೆ ನೆರವಾಗುವ ಸಲುವಾಗಿ ಸಿಎಂ ಯಡಿಯೂರಪ್ಪನವರು ರೈತ ಸಮ್ಮಾನ್ ಮಾದರಿಯಲ್ಲೇ ನೇಕಾರ ಸಮ್ಮಾನ್ ಎಂಬ ಯೋಜನೆಯನ್ನ ಘೋಷಣೆ ಮಾಡಿದ್ದಾರೆ. ಇನ್ನು ರಾಜ್ಯದಲ್ಲಿ 54 ಸಾವಿರ ನೇಕಾರರಿದ್ದು, ಅವರ ಸಾಲ ಮನ್ನಾ ಮಾಡುವ ಸಲುವಾಗಿ ೧೦೯ ಕೋಟಿ ರೂಗಳನ್ನ ಬಿಡುಗಡೆ ಮಾಡಲಾಗುವುದು ಬಿ.ಎಸ್.ಯಡಿಯೂರಪ್ಪನವರು ಹೇಳಿದ್ದಾರೆ. ಇನ್ನು ಸರ್ಕಾರದಾ ವಿವಿಧ ಇಲಾಖೆಗಳಿಗೆ ಬೇಕಾಗಿರುವ ಸೀರೆ ಬಟ್ಟೆಗಳನ್ನ ರಾಜ್ಯದ ನೇಕಾರರಿಂದಲೇ ಉತ್ಪಾದನೆ ಮಾಡಿಸಿ, ಸರ್ಕಾರವೇ ನೇರವಾಗಿ ಖರೀದಿ ಮಾಡುವುದಾಗಿ ಹೇಳಿದೆ.

ಇದರ ಜೊತೆಗೆ ಪ್ರತಿಯೊಬ್ಬ ನೇಕಾರನಿಗೂ ಪ್ರತಿವರ್ಷ ಎರಡು ಸಾವಿರ ರೂಪಾಯಿಗಳನ್ನ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.ಇನ್ನು ೨೦೧೯-೨೦ನೇ ಸಾಲಿನಲ್ಲಿ ನೇಕಾರರಿಗೆ ೨೯ಕೋಟಿರೂಗಳನ್ನ ಬಿಡುಗಡೆ ಮಾಡಲಾಗಿದ್ದು, ಈಗ ತಕ್ಷಣವೇ ಉಳಿದಿರುವ ೮೦ ಕೋಟಿ ರೂಪಾಯಿಗಳನ್ನ ಬಿಡುಗಡೆ ಮಾಡುತ್ತೇವೆ ಎಂದು ಸರ್ಕಾರ ಹೇಳಿದೆ. ಕಳೆದ ವರ್ಷ ೨೦೧೯ ಜನವರಿ ಒಂದರಿಂದ ಮಾರ್ಚ್ ೩೧ರವರೆಗೆ ಸರ್ಕಾರಕ್ಕೆ ಸಾಲ ಕಟ್ಟಿದವರಿಗೆ ಮರು ಸಾಲಾ ನೀಡಲಾಗುವುದು ಎಂದು ಮುಖ್ಯಾಮಂತ್ರಿಗಳು ಹೇಳಿದ್ದು, ಇದರ ಜೊತೆಗೆ ನೇಕಾರರಿಗೆ ಹೊಸದಾದ ಸಾಲ ನೀಡಲಾಗುವುದು ಎಂದು ಹೇಳಿದ್ದಾರೆ.