ಲಾಕ್ ಡೌನ್ ನಡುವೆಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತುಕಾಲಿ ಸ್ಟಾರ್ ಸಂತು ಖ್ಯಾತಿಯ ಕಾಮಿಡಿ ಕಿಲಾಡಿ..ಈ ಫೋಟೋಸ್ ನೋಡಿ..

Entertainment

ದೇಶದಾದ್ಯಂತವೂ ಲಾಕ್ ಡೌನ್ ಆಗಿರುವುದರಿಂದ ಅದ್ದೂರಿಯಾಗಿ ಯಾವುದೇ ಸಭೆ ಸಮಾರಂಭಗಳನ್ನ ಮಾಡುವಂತಿಲ್ಲ. ಇನ್ನು ಅದ್ದೂರಿಯಾಗಿ ಮದುವೆಯನ್ನಂತೂ ಮಾಡುವ ಹಾಗೆ ಇಲ್ಲ. ಹಾಗಾಗಿಯೇ ಈಗಾಗಲೇ ಫಿಕ್ಸ್ ಆಗಿದ್ದ ಎಷ್ಟೋ ಮದುವೆಗಳನ್ನ ಕ್ಯಾನ್ಸೆಲ್ ಮಾಡಿ ಡೇಟ್ ಮುಂದಕ್ಕೆ ಹಾಕಿದ್ದಾರೆ.

ಇನ್ನು ಹಲವರು ಹೆಚ್ಚು ಜನರನ್ನ ಕರೆಯದೆ ತಮ್ಮ ಕುಟುಂಬಸ್ಥರು, ಸಂಬಂದಿಕರ ಸಮ್ಮುಖದಲ್ಲಿ ತುಂಬಾ ಸರಳವಾಗಿ ಮದುವೆಯಾಗುತ್ತಿದ್ದಾರೆ. ಈಗ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಸಂಚಿಕೆ ೩ರ ರನ್ನರ್ ಆಪ್ ತುಕಾಲಿ ಸ್ಟಾರ್ ಸಂತು ಖ್ಯಾತಿಯ ಸಂತೋಷ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇನ್ನು ಈ ಮದುವೆಯಲ್ಲಿ ಕಾಮಿಡಿ ಕಿಲಾಡಿಗಳಲ್ಲಿ ನಟಿಸಿದ್ದ ಸಹ ನಟರು ಈ ಸರಳ ವಿವಾಹ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಇನ್ನು ಈ ಮದುವೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.

ಇನ್ನು ಸಂತೋಷ್ ರವರ ಮದುವೆ ಏಪ್ರಿಲ್ ೧೦ಕ್ಕೆ ಫಿಕ್ಸ್ ಆಗಿತ್ತು. ಮದುವೆಯ ಎಲ್ಲಾ ಸಿದ್ಧತೆಗಳನ್ನ ಕೂಡ ಮಾಡಿಕೊಳ್ಳಲಾಗಿತ್ತು.ಆದರೆ ಲಾಕ್ ಡೌನ್ ಆದ ಕಾರಣ ಸಂಭ್ರಮದ ಮದುವೆ ಮಾಡುವ ಆಗಿರಲಿಲ್ಲ. ಹಾಗಾಗಿ ಸಂತೋಷ್ ಪರ್ಮಿಷನ್ ಪಡೆದು ಸರಳವಾಗಿ ಮದುವೆಯಾಗಿದ್ದಾರೆ. ಇನ್ನುಇವರ ಮದುವೆಯಲ್ಲಿ ಕಾಮಿಡಿ ಕಿಲಾಡಿಗಳು ಸೀಸನ್ ೨ ವಿನ್ನರ್ ಮಡೇನೂರು ಮನು ಭಾಗವಹಿಸಿದ್ದು ಕೇವಲ ೨೦ ಜನರ ಸಮ್ಮುಖದಲ್ಲಿ ಸಂತೋಷ್ ವಿವಾಹವಾಗಿದ್ದಾರೆ.

ಇನ್ನು ಸಂತೋಷ್ ವಿವಾಹದಲ್ಲಿ ಭಾಗವಹಿಸಿದ್ದ ಮಡೆನೂರು ಮನು ಮದುವೆಯ ಸಂಭ್ರಮದ ಕ್ಷಣಗಳ ಟಿಕ್ ಟಾಕ್ ವಿಡಿಯೊಗಳನ್ನಮಾಡಿದ್ದು, ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿವೆ.