ಹೀಗೆ ಮಾಡಿ ಕೊರೋನಾದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ..

Advertisements

ಕೊರೋನಾ ಸದ್ಯ ಇಡೀ ಜಗತನ್ನೇ ಹಿಂಡಿ ಹಿಪ್ಪೆಕಾಯಿ ಮಾಡುತ್ತಿರುವ ಮಹಾ ಕಾಯಿಲೆ. ಮನು ಕುಲವನ್ನೇ ಕಾಡಿ ಕೊಲ್ಲುತ್ತಿರುವ ಅನಿಷ್ಟ. ಚೀನಾದಿಂದ ಉಗಮವಾದ ಈ ರೋಗದಿಂದ ನಾವೆಲ್ಲ ಭಾರತದ ಜನರು ರೋಸಿ ಹೋಗಿದ್ದೇವೆ. ಬೆಳಗ್ಗೆ ಎದ್ದಾಗಿನಿಂದ ಮಲಗುವ ವರೆಗೆ ಕೊರೋನಾದೆ ಚಿಂತೆ. ಮನೆಯಲ್ಲೇ ಕೈದಿಗಳಾಗಿರುವ ನಾವು ಈ ರೋಗ ನಮಗೆ ಬಾರದೆ ಇದ್ದರೆ ಸಾಕು , ಇದರಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂದು ಯೋಚಿಸುತ್ತೇವೆ. ಕಾರಣ ಈ ಕಾಯಿಲೆಗೆ ಮದ್ದಿಲ್ಲ.

Advertisements

ಕೊರೋನಾದಿಂದ ತಪ್ಪಿಸಿಕೊಳ್ಳಲು ಕೆಲವು ಉಪಾಯಗಳಿವೆ

ಮೊದಲನೆಯದು, ಸರ್ಕಾರಗಳು ಆಜ್ಞಾಪಿಸಿರುವಂತೆ, ವೈದ್ಯರು ಸಲಹೆ ನೀಡಿರುವಂತೆ ಈ ಕಾಯಿಲೆ ಹರಡದಂತೆ ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು. ದಿನವೂ ಮಾಧ್ಯಮದಲ್ಲಿ ಸಾವಿರ ಬಾರಿ ಹೇಳುವಂತೆ ಕೈಗಳನ್ನು ಆಗಾಗ ತೊಳೆದುಕೊಳ್ಳುವುದು, ಹೊರಗಿನಿಂದತಂದ ತರಕಾರಿ , ಹಾಲು ಸೇರಿದಂತೆ ಎಲ್ಲಾ ವಸ್ತುಗಳನ್ನು ತೊಳೆದು ನಂತರ ಕೈಗಳನ್ನು ತೊಳೆದುಕೊಂಡು ಒಳಗೆ ತರುವುದು, ಮನೆಯಲ್ಲೇ ಇರುವುದು…ಹೀಗೆ ಸೋಂಕಿನಿಂದ ದೂರ ಒಲಿಯುವ ವಿಧಾನ ನಿಮಗೆಲ್ಲ ತಿಳಿದಿದೆ ..

ಮತ್ತೊಂದು ಉಪಾಯ ಎಂದರೆ ಅದು ನಮ್ಮ ದೇಹದ ರೋನಿರೋಧಕ ಶಕ್ತಿ ವೃದ್ಧಿಸಿ ಕೊಳ್ಳುವುದು. ಕೊರೋನಾ ಶ್ವಾಸ ಕೋಶ ಸಂಬಂಧಿಸಿದ ಕಾಯಿಲೆ. ಯಾರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆಯೋ ಅಂತವರಲ್ಲಿ ಬೇಗ ತನ್ನ ಪರಿಣಾಮ ಬೀರುತ್ತದೆ. ಅಂದರೆ ವಯಸ್ಸಾದವರು ಮತ್ತು ಮಕ್ಕಳು ಹೆಚ್ಚು ಕೊರೋನಾಗೆ ಬಲಿಯಾಗುತ್ತಾರೆ. ಅವರಿಗೆ ಬಹು ಬೇಗ ಸೋಂಕು ಹರಡುತ್ತದೆ. ದೇಹದ ಪತಿರೋಧಕ ಶಕ್ತಿ ಜಾಸ್ತಿ ಇದ್ದರೆ ಕೊರೋನಾ ವಿರುದ್ಧ ದೇಹ ಹೋರಾಡುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಲು ಮನೆ ಮದ್ದು : *ಒಂದು ಲೋಟ ಕಾಯಿಸಿದ ಹಾಲಿನಲ್ಲಿ ಒಂದು ಚಮಚ ಹರಿಷಿನದ ಪುಡಿ ಬೆರಸಿ ಕುಡಿಯುವುದು.

*ತುಳಸಿ , ದಾಲ್ಚಿನ್ನಿ, ಒಣದ್ರಾಕ್ಷಿ ಒಣ ಶುಂಠಿ, ಮೆಣಸು ಹಾಕಿ ತಯಾರಿಸಿದ ಕಷಾಯ ಕುಡಿಯುವುದು.

ಇದರ ಜೊತೆಗೆ.. *ಪ್ರತೀ ದಿನ ಐದು ನಿಮಿಷಗಳ ಕಾಲ ಪ್ರಾಣಾಯಾಮ ಮಾಡುವುದು.

*ಯೋಗ ತಿಳಿದಿದ್ದರೆ ಪ್ರತೀ ಈದಿನ ಕೆಲ ನಿಮಿಷಗಳ ಕಾಲ ಯೋಗಾಸನ ಮಾಡಿ

ಎಲ್ಲದಕ್ಕಿಂತ ಹೆಚ್ಚಾಗಿ ಇಂತಹ ಸಮಯದಲ್ಲಿ ನಂಬಿಕೆ ಆತ್ಮ ಸ್ಥೈರ್ಯ ಬಹಳ ಮುಖ್ಯ. ನಮಗೆ ಏನು ಆಗುವುದಿಲ್ಲ ಎಂಬ ನಂಬಿಕೆ ಇರಲಿ. ದೇವರ ಮೇಲೆ ನಂಬಿಕೆ ಇರಲಿ. ಆದರೆ ನಿರ್ಲಕ್ಷ ಅಸಡ್ಡೆ ಬೇಡ. ಒಂದು ವೇಳೆ ಕಾಯಿಲೆ ಬಂದರೂ ಹೋರಾಡಿ ಗೆಲ್ಲುತ್ತೇನೆ ಎಂಬ ದೈರ್ಯ ಇರಬೇಕು. ಇಲ್ಲವಾದರೆ ಭಯ ಮತ್ತು ಋಣಾತ್ಮಕ ಚಿಂತನೆಗಳು ನಿಮ್ಮ ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.

ಈಗಾಗಲೇ ಬೇರೆ ಕಾಯಿಲೆ ಇದ್ದರೆ ಅಂತವರ ಮೇಲೆ ಕರೋನಾದ ಪರಿಣಾಮ ಜಾಸ್ತಿ ಇರುತ್ತದೆ. ಇಂತವರು ಆದಷ್ಟೂ ಎಚ್ಚರಿಕೆಯಿಂದ ಇರಬೇಕು. ಬೇಸಿಗೆಯ ಈ ಸಮಯದಲ್ಲಿ ಏನೇನೋ ತಿಂದು ಬೇಡದ ರೋಗಗಳನ್ನು ತನಿತ್ತುಕೊಳ್ಳುವ ಬದಲು ಹಿತ ಮಿತವಾದ ಆಹಾರ ಸೇವಿಸಿ.

ದಿನವೂ ಒಂದು ಲೋಟ ಹಾಲು ಕುಡಿಯಿರಿ. ಯಾವುದೇ ಕಾರಣ ಕ್ಕೂ ಅನವಶ್ಯಕವಾಗಿ ಮನೆಯಿಂದ ಆಚೆ ಬರ ಬೇಡಿ. ನಮ್ಮ ಸರ್ಕಾರಗಳು ಹೇಳಿರುವ ನಿಯಮಗಳನ್ನು ಪಾಲಿಸೋಣ. ಜೊತೆಗೆ ನಿಮ್ಮ ಅಕ್ಕ ಪಕ್ಕದಲ್ಲಿ ಹಸಿವಿನಿಂದ ಬಳುತ್ತಿರುವವರಿಗೆ ಸಹಾಯ ಮಾಡಿ. ಮತ್ತು ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ನಿಮ್ಮ ಕೈಲಾದ ಸಹಾಯ ಮಾಡಿ