ಮಳೆ ಬಂತು ಮಳೆ..ಜೊತೆಯಲ್ಲೇ ಹೆಚ್ಚಾಯ್ತು ಕೊರೋನಾ ಭೀತಿ.?

Advertisements

ಈಗಾಗಲೇ ಇಡೀ ದೇಶದಾದ್ಯಂತ ಮಹಾಮಾರಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಭಾರತ ಸರ್ಕಾರ ಸೇರಿದಂತೆ ರಾಜ್ಯ ಸರ್ಕಾರಗಳು ಕೂಡ ಮುನ್ನೆಚ್ಚರಿಕೆಯ ಕ್ರಮಗಳನ್ನ ತೆಗೆದುಕೊಳ್ಳುತ್ತಿವೆ. ಇನ್ನು ಕರ್ನಾಟಕದಲ್ಲಿಯೂ ಕೂಡ ಮಾರ್ಚ್ ೩೧ರವರೆಗೆ ಕೊರೋನಾ ಸೋಂಕಿನ ಕಾರಣ ಚಿತ್ರಮಂದಿರ, ಮಾಲ್ ಗಳು ಸೇರಿದಂತೆ ಎಲ್ಲವನ್ನ ಬಂದ್ ಮಾಡಲಾಗಿದೆ.

Advertisements

ಆದರೆ ಈಗ ಇದ್ದಕಿದ್ದಂತೆ ಕೆಲವು ಕಡೆಗಳಲ್ಲಿ ಮಳೆ ಆಗುತ್ತಿದ್ದು, ಹೆಬ್ಬಾಳ, ಜೆಸಿ ನಗರ, ಶಾಂತಿ ನಗರ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಮಳೆಯಾಗುತ್ತಿದೆ. ಆದರೆ ಇದೆ ರೀತಿ ಮಳೆ ಮುಂದುವರಿದಲ್ಲಿ ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಅಪಾಯ ಜಾಸ್ತಿಯಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳುತ್ತಿದ್ದಾರೆ.

ಇನ್ನು ಈ ಮಳೆಯಿಂದ ಕೊರೋನಾ ವೈರಸ್ ಭೂಮಿಯಲ್ಲಿಯೇ ಉಳಿದುಕೊಳ್ಳುವ ಸಾಧ್ಯತೆಗಳಿದ್ದು, ಮಳೆಯಿಂದ ಕೊರೋನಾ ವೈರಸ್ ಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಇನ್ನು ನೀರಿನಲ್ಲಿ ಈ ವೈರಸ್ ಸೇರಿಕೊಳ್ಳುವುದರಿಂದ, ಕುಡಿಯುವ ನೀರಿನ ಮೇಲೆಯೂ ಸಹ ಪರಿಣಾಮ ಬಿರುವುದರಿಂದ ಕೊರೋನಾ ಹರಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಸಾಮಾನ್ಯವಾಗಿ ಮಳೆ ಬಂದಾಗ ಇಡೀ ವಾತಾವರಣ ತಂಪಾಗುತ್ತದೆ. ಇದರಿಂದ ಕೊರೋನಾ ಸೋಂಕು ಹೆಚ್ಚಾಗಿ ಹರಡುವುದಲ್ಲದೆ, ಕುಡಿಯುವ ನೀರಿನಲ್ಲಿ ಸೇರಿಕೊಂಡು ದೇಹ ಸೇರುವ ಸಾಧ್ಯತೆಗಳಿವೆ ಎಂಬ ಶಾಕಿಂಗ್ ವರದಿಯೆಂದು ಬಹಿರಂಗವಾಗಿದೆ.