ಪುಟ್ಬಾಲ್ ಆಟಗಾರ ರೊನಾಲ್ಡೊ ಮಾಡಿದ ಈ ಒಂದೇ ಕೆಲಸಕ್ಕೆ ಪಾತಾಳಕ್ಕೆ ಬಿದ್ದ ಕೊಕಾಕೊಲಾ ಕಂಪೆನಿ !

Sports
Advertisements

ಸ್ನೇಹಿತರೇ, ಸಿನಿಮಾರಂಗದಲ್ಲಾಗಲಿ, ಕ್ರೀಡೆಯಲ್ಲಾಗಲಿ ದೊಡ್ಡ ದೊಡ್ಡ ಸೆಲೆಬ್ರೆಟಿಗಳಿದ್ದಾರೆ. ಅವರನ್ನ ಹಿಂಬಾಲಿಸುವ ಲಕ್ಷಾಂತರ ಕೋಟ್ಯಂತರ ಅಭಿಮಾನಿಗಳಿದ್ದಾರೆ. ತಮ್ಮ ನೆಚ್ಚಿನ ನಟ ಅಥ್ವಾ ಕ್ರೀಡಾಪಟು ಏನೇ ಹೇಳಿದ್ರು ಅದನ್ನೇ ತಪ್ಪದೆ ಪಾಲಿಸುವ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಹಾಗಾಗಿಯೇ ಸೆಲೆಬ್ರೆಟಿಗಳು ಮಾತನಾಡುವ ಒಂದೊಂದು ಮಾತಿಗೂ ತುಂಬಾನೇ ಮಹತ್ವವಿದೆ. ಇದ್ಕಕ್ಕೀಗ ನೈಜ ನಿದರ್ಶನ ಪುಟ್ಬಾಲ್ ಜಗತ್ತಿನ ಸರ್ವಶ್ರೇಷ್ಠ ಆಟಗಾರನಾಗಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಆಡಿದ ಆ ಒಂದು ಮಾತು, ಕೊಕಾಕೊಲಾ ಕಂಪೆನಿಯನ್ನೇ ಅಲ್ಲಾಡಿಸಿಬಿಟ್ಟಿದೆ.

[widget id=”custom_html-4″]

Advertisements

ಹೌದು, ಪೋರ್ಚುಗಲ್ ಹಾಗೂ ಹಾವೇರಿ ದೇಶದ ನಡುವೆ ಯುರೋ ಕಪ್ ನ ಪುಟ್ಬಾಲ್ ಪಂದ್ಯವಿದ್ದು ಅದರ ಹಿನ್ನಲೆಯಲ್ಲಿ ಪತ್ರಿಕಾಗೋಷ್ಠಿಯನ್ನ ಏರ್ಪಡಿಸಲಾಗಿತ್ತು. ಇನ್ನು ಪ್ರೆಸ್ ಮೀಟ್ ನಲ್ಲಿ ಪುಟ್ಬಾಲ್ ಜಗತ್ತಿನ ಸರ್ವಶ್ರೇಷ್ಠ ಆಟಗಾರನಾಗಿರುವ ಕ್ರಿಸ್ಟಿಯಾನೊ ರೊನಾಲ್ಡೊ ಭಾಗವಹಿಸಿದ್ದರು. ಇನ್ನು ಇದೆ ವೇಳೆ ಪ್ರೆಸ್ ಮೀಟ್ ನ ಟೇಬಲ್ ಮೇಲೆ ಕೊಕಾಕೊಲಾದ ಸಾಫ್ಟ್ ಡ್ರಿಂಕ್ ಬಾಟಲ್ ಗಳನ್ನ ಇಡಲಾಗಿತ್ತು. ಆದರೆ ಟೇಬಲ್ ಮೇಲೆ ಬಂದು ಕುಳಿತುಕೊಂಡ ರೊನಾಲ್ಡೊ ಟೇಬಲ್ ಮೇಲಿದ್ದ ಕೊಕಾಕೊಲಾ ಬಾಟಲ್ ಗಳನ್ನ ಪಕ್ಕಕ್ಕಿಟ್ಟು, ಅಲ್ಲೇ ಇದ್ದ ನೀರಿನ ಬಾಟಲ್ ನ್ನ ಮೇಲಕ್ಕೆ ಎತ್ತಿ ನೀರನ್ನ ಕುಡಿಯಿರಿ ಎಂದು ಜನರಿಗೆ ಕರೆ ನೀಡಿದ್ದಾರೆ.

[widget id=”custom_html-4″]

ಇನ್ನು ಯುರೋ ಕಪ್ ಪುಟ್ಬಾಲ್ ಪಂದ್ಯದ ಅಧಿಕೃತ ಪ್ರಯೋಜಕರಲ್ಲಿ ಕೊಕಾಕೊಲಾ ಕಂಪನಿ ಕೂಡ ಒಂದು. ಇನ್ನು ಕ್ರಿಸ್ಟಿಯಾನೊ ರೊನಾಲ್ಡೊ ಅವರು ಮಾಡಿದ ಚಿಕ್ಕ ಕೆಲಸದಿಂದ ಕೊಕಾಕೊಲಾ ಕಂಪನಿಗೆ 4 ಬಿಲಿಯನ್ ಯುಎಸ್ ಡಾಲರ್ ವರೆಗೂ ನಷ್ಟವಾಗಿದೆ ಎಂದು ಹೇಳಲಾಗಿದೆ. ಧಿಡೀರನೆ ಕೊಕಾಕೊಲಾ ಕಂಪನಿಯ ಷೇರು ಬೆಲೆ ಪಾತಾಳಕ್ಕೆ ಇಳಿದುಹೋಗಿದೆ. ಇನ್ನು ಯುರೋ ಕಪ್ ನ ಪ್ರಯೋಜಕರಲ್ಲಿ ಕೊಕಾಕೊಲಾ ಕಂಪನಿ ಕೂಡ ಒಂದಾಗಿರುವುದರಿಂದ ಕ್ರಿಸ್ಟಿಯಾನೊ ರೊನಾಲ್ಡೊ ಮೇಲೆ ಶಿಸ್ತು ಕ್ರಮ ಜರುಗಿಸಿವೆ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಸೆಲೆಬ್ರೆಟಿಯೊಬ್ಬರು ಮಾತನಾಡುವ ಒಂದೊಂದು ಮಾತು ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಎಂಬುದಕ್ಕೆ ಇದ್ಕಕಿಂತ ಸಾಕ್ಷಿ ಬೇಕಿಲ್ಲ.