ಗಂಡಸರೇ ಸುಮ್ಮನಿದ್ದಾಗ 19ವರ್ಷದ ಈ ಹುಡುಗಿ ನೀರಿಗಾಗಿ ಮಾಡಿದ್ದೇನು ಗೊತ್ತಾ ?

Inspire

ಹೆಣ್ಣುಮಕ್ಕಳು ಮನಸ್ಸು ಮಾಡಿದ್ರೆ ಏನು ಬೇಕಾದ್ರು ಮಾಡಬಹುದು ಎಂಬುದಕ್ಕೆ ೧೯ ವರ್ಷದ ಈ ಯುವತಿಯೇ ನೈಜ ನಿದರ್ಶನವಾಗಿದ್ದಾರೆ ಹಾಗೂ ಸ್ಫೂರ್ತಿಯಾಗಿದ್ದಾರೆ. ಮಧ್ಯಪ್ರದೇಶದಲ್ಲಿ ಅಗ್ರೋಥ್ ಅನ್ನೋ ಗ್ರಾಮವೊಂದಿದೆ. ಸುಮಾರು ೧೪೦೦ಕ್ಕಿಂತ ಹೆಚ್ಚಿನ ಜನ ವಾಸ ಮಾಡುವ ಹಳ್ಳಿಯಾಗಿದೆ ಇದು. ಇನ್ನು ಈ ಊರಿನ ಸುತ್ತ ಮುತ್ತ ಕೆರೆಯ ಜೊತೆಗೆ ಬಾವಿಗಳು ಸಹ ಇವೆ. ಹಾಗಾಗಿ ಮಳೆಗಾಲದಲ್ಲಿ ಈ ಊರಿನ ಜನರಿಗೆ ವ್ಯವಸಾಯ ಮಾಡುವುದಕ್ಕಾಗಲಿ ಕುಡಿಯುವುದಕ್ಕಾಗಲಿ ನೀರಿಗೆ ಬರವೇನು ಇಲ್ಲ.

ಆದರೆ ಬೇಸಿಗೆ ಬಂತೆಂದರೆ ಸಾಕು ಕೆರೆ ಬಾವಿಗಳಲ್ಲಿರುವ ನೀರೆಲ್ಲಾ ಬತ್ತಿ ಹೋಗಿ ಕುಡಿಯುವುದಕ್ಕಾಗಲಿ, ಕೃಷಿ ಮಾಡುವುದಕ್ಕಾಗಲಿ ನೀರು ಸಿಗದೇ ಸಂಕಷ್ಟ ಅನುಭವಿಸುತ್ತಾರೆ ಈ ಊರಿನ ಜನ. ಇದೆಲ್ಲದರ ನಡುವೆಯೂ ಊರಿನ ಸುತ್ತಲೂ ಇರುವ ಬೆಟ್ಟಗಳಿಂದ ವರ್ಷವಿಡೀ ಹರಿಯುವ ನೀರು ಬೆಟ್ಟಗಳ ತಪ್ಪಲಿನ ಆಚೆ ಇರುವ ನದಿಗೆ ಹೋಗಿ ಸೇರುತ್ತದೆ. ಇನ್ನು ಬೆಟ್ಟಗಳಿಂದ ಹರಿದು ಬರುವ ನೀರನ್ನ ಈ ಊರಿನ ಕೆರೆಗೆ ಬರುವುಂತೆ ಮಾಡಿದಲ್ಲಿ ಊರಿನವರಿಗೆ ನೀರಿನ ಸಮಸ್ಯೆಯೇ ಇಲ್ಲದಂತಾಗುತ್ತದೆ. ಆದರೆ ಇಲ್ಲೊಂದು ಸಮಸ್ಯೆ ಇದೆ.

ಏನೆಂದರೆ ಬೆಟ್ಟಗಳಿಂದ ಹರಿದು ಬೇರೆ ಕಡೆ ಇರುವ ನದಿಗೆ ಹರಿಯುವ ನೀರನ್ನ ಹಳ್ಳಿಯ ಕೆರೆಗೆ ಹರಿದು ಬರುವಂತೆ ಮಾಡುವುದು ಅಷ್ಟೊಂದು ಸುಲಭದ ಮಾತಲ್ಲ. ಬೆಟ್ಟವೊಂದು ಅಡ್ಡ ಇರುವ ಕಾರಣ ಬೆಟ್ಟವನ್ನ ಕ’ಡಿದು ಊರಿನ ಕೆರೆಗೆ ನೀರು ತರುವುದು ಬೆಟ್ಟದಷ್ಟೆ ಕಷ್ಟ. ಒಂದು ವೇಳೆ ನೀರಿಗಾಗಿ ಊರಿನ ಜನ ಪ್ರಯತ್ನ ಪಟ್ಟರೂ ಅದಕ್ಕಾಗಿ ಅರಣ್ಯ ಇಲಾಖೆಯವರಿಂದ ಪರ್ಮಿಷನ್ ಅವಶ್ಯಕತೆ ಇತ್ತು. ಹೀಗಾಗಿ ಊರಿನವರು ಸುಮ್ಮನಾಗಿಬಿಟ್ಟಿದ್ರು.

ಆದ್ರೆ ಅದೇ ಊರಿನ ಭವಿತಾ ಎನ್ನುವ ೧೯ ವರ್ಷದ ಯುವತಿ ಅರಣ್ಯ ಇಲಾಖೆಯವರ ಹತ್ತಿರ ಪಟ್ಟು ಬಿಡದೇ ಓಡಾಡಿ ನೀರಿಗಾಗಿ ತಮ್ಮ ಊರಿನವರು ಅನುಭವಿಸುತ್ತಿರುವ ಕಷ್ಟವನ್ನ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟು ಕೊನೆಗೂ ಪರ್ಮಿಷನ್ ಸಿಗುವಂತೆ ಮಾಡಿದ್ಲು. ಆದರೆ ಮೊದಲು ಪರ್ಮಿಷನ್ ಸಿಗಲಿ ಎನ್ನುತ್ತಿದ್ದ ಆ ಗ್ರಾಮದ ಗಂಡಸರು ಸುಮ್ಮನಾಗಿಬಿಟ್ಟಿದ್ದರು. ಆದರೆ ಛಲಗಾತಿ ಭವಿತಾ ತನ್ನ ಹನ್ನೆರಡು ಜನ ಸ್ನೇಹಿತೆಯರ ಜೊತೆ ಒಟ್ಟುಗೂಡಿ ಬೆಟ್ಟವನ್ನ ಕ’ಡಿಯಲು ಶುರುವಚ್ಚಿಕೊಂಡ್ರು. ಹೀಗೆ ಸಾಗುತ್ತಿದ್ದಂತೆ ಅದೇ ಊರಿನ ೨೫೦ ಕ್ಕಿಂತ ಹೆಚ್ಚು ಮಹಿಳೆಯರು ಬಂದು ಸಹಾಯಕ್ಕೆ ನಿಂತರು.

ತಮ್ಮ ಪ್ರತೀದಿನದ ಎಲ್ಲಾ ಕೆಲಸಗಳ ನಡುವೆಯೂ ಸುಮಾರು ಒಂದೂವರೆ ವರ್ಷಗಳ ಕಾಲ ಕಷ್ಟಪಟ್ಟ ಮಹಿಳೆಯರು ಅರ್ಧ ಕಿಮೀಗಿಂತ ಹೆಚ್ಚು ಉದ್ದದ ಬೆಟ್ಟವನ್ನ ಕ’ಡಿದು ನದಿಗೆ ಸೇರಿ ಪೋಲಾಗುತ್ತಿದ್ದ ನೀರನ್ನ ಊರಿನ ಕೆರೆಗೆ ತರುವಲ್ಲಿ ಯಶಸ್ವಿಯಾದ್ರು. ಇನ್ನು ಈ ಸಾಧನೆ ಸಲ್ಲಬೇಕಾದದ್ದು ಯುವತಿ ಭವಿತಾ ಅವರಿಗೆ. ಊರಿನ ಉಸಾಬರಿ ನನಗೇತಕ್ಕೆ ಎಂದು ಆಕೆ ಸುಮನಿದ್ದುಬಿಟ್ಟಿದ್ದರೆ, ಧೈರ್ಯ ಮಾಡಿರದಿದ್ದರೆ ಊರಿಗೆ ನೀರು ಬರುತ್ತಿರಲಿಲ್ಲ. ಒಟ್ಟಿನಲ್ಲಿ ಭವಿತಾ ಅವರ ಈ ಸ್ಟೋರಿ ಜೀವನದಲ್ಲಿ ಕಷ್ಟ ಎನ್ನುವವರಿಗೆ ಸ್ಪರ್ತಿಯಾಗುವದಂತೂ ಖಚಿತ.