ಅಬ್ಬಬ್ಬಾ..ಇದಪ್ಪಾ ಡಿ ಬಾಸ್ ದರ್ಶನ್ ಫ್ಯಾನ್ಸ್ ಕ್ರೇಜ್ ಅಂದ್ರೆ ! ಅಭಿಮಾನಿಯ ಅಭಿಮಾನಕ್ಕೆ ಭಾವುಕರಾದ ದಚ್ಚು..

Cinema
Advertisements

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಇಂಡಸ್ಟ್ರಿಯ ನಂಬರ್ 1 ಹೀರೋ. ಬಾಕ್ಸ್ ಆಫೀಸ್ ಸುಲ್ತಾನ, ದಾಖಲೆಗಳ ವೀರ, ಗಂಡು ಮಕ್ಕಳ ಆರಾಧ್ಯ ದೈವ, ಹೆಣ್ಣು ಮಕ್ಕಳ ಕ್ರಶ್, ಬೇಡಿ ಬಂದವರಿಗೆ ಕೊಡುಗೈ ದಾನಿ, ಪ್ರೀತಿಸಿದವರ ಹೃದಯ ಸಿಂಹಾಸನದಲ್ಲಿರುವ ದಾಸ ಈ ಯಜಮಾನ. ಸ್ನೇಹಿತರ ಪಾಲಿನ ಮಾತೃ ಹೃದಯಿ, ಕೆಟ್ಟವರಿಗೆ ಕರಿಯಾ ಹೀಗೆ ನಮ್ಮ ಈ ಕುರುಕ್ಷೇತ್ರದ ಸುಯ್ಯೋಧನನ ಬಗ್ಗೆ ಎಷ್ಟು ಹೇಳಿದರೂ ಕಡಿಮೆನೇ. ನಟ ದರ್ಶನ್ ಅನ್ನೋ 6 ಅಡಿ ಕಟೌಟಿನ, ಕಂಚಿನ ಕಂಠದ ಯೋಧನಿಗೆ ಸ್ಯಾಂಡಲ್ ವುಡ್ ನಲ್ಲಿ ಬೇರೆ ಲೆವೆಲ್ಲಲ್ಲೇ ಹೆಸರಿದೆ. ಅಭಿಮಾನಿಗಳ ಪಾಲಿಗಂತೂ ಈ ದಾಸ ಪ್ರೀತಿಯ ಡಿ ಬಾಸ್. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಫ್ಯಾನ್ಸ್ ಫಾಲೋವರ್ಸ್ ಹೊಂದಿರುವ ಒಡೆಯ ಅಂದ್ರೆ ಅದು ಒನ್ ಆ್ಯಂಡ್ ಒನ್ಲಿ ಬಾಸ್ ಕಾ ಬಾಪ್ ಚಾಲೆಂಜಿಂಗ್ ಸ್ಟಾರ್ ಮಾತ್ರ. ಕರ್ನಾಟಕದ ಮೂಲೆ ಮೂಲೆಯಲ್ಲೂ ನಟ ದರ್ಶನ್ ಗೆ ಅಸಂಖ್ಯಾತ ಅಭಿಮಾನಿ ಬಳಗವಿದೆ.

[widget id=”custom_html-4″]

Advertisements

ಮೆಜೆಸ್ಟಿಕ್ ನಿಂದ ರಾಬರ್ಟ್ ಚಿತ್ರದ ವರೆಗೆ ಕ್ಲಾಸ್ ಹಾಗೂ ಮಾಸ್ ಸ್ಟೈಲ್ ನಲ್ಲಿ ಅಭಿನಯಿಸಿ ನೇಮು ಫೇಮು ಸಂಪಾದಿಸಿರುವ ದಾಸನಿಗೆ ಅಭಿಮಾನಿಗಳೇ ಸೆಲೆಬ್ರಿಟಿಗಳು. ಎಲ್ಲರಿಗೂ ಅವರು ಕೊಡೋ ಗೌರವ, ಪ್ರೀತಿ ಅಭಿಮಾನಿಗಳಿಗೆ ಅಚ್ಚು ಮೆಚ್ಚು. ಹಾಗಾಗಿಯೇ ಅವರ ಸಿನಿಮಾವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಬೇಕು ಅಂತ ಹಾತೋರಿಯುತ್ತಿರುತ್ತಾರೆ. ಒಂದು ರೀತಿಯಲ್ಲಿ ನಟ ದರ್ಶನ್ ಚಿತ್ರ ಅಂದ್ರೆ ಕನ್ನಡಿಗರಿಗೆ ಹಬ್ಬವಿದ್ದಂತೆ. ಬಿಗ್ ಸ್ಕ್ರೀನ್ ನಲ್ಲಿ ಬಾಸ್ ಹೊಡೆಯೋ ಕೌಂಟರ್ ಡೈಲಾಗ್ಸ್, ಮಾಸ್ ಪೈಟಿಂಗ್, ಯಾರಿಗೂ ಕೇರ್ ಮಾಡದ ಖದರ್ ಲುಕ್ ಸಿನಿಮಾ ಮಂದಿರದಲ್ಲಿ ತುಂಬಿರುವ ಫ್ಯಾನ್ಸ್ ಸಿಳ್ಳೆ ಹಾಕಿ, ಚಪ್ಪಾಳೆ ತಟ್ಟಿ ಕುಣಿದು ಕುಪ್ಪಳಿಸುವಂತೆ ಮಾಡುತ್ತೆ. ಇನ್ನು ಸೋಶಿಯಲ್ ಮಿಡಿಯಾದಲ್ಲಂತೂ ಸಾರಥಿಯ ಸಿನಿಮಾ ಡೈಲಾಗ್ಸ್, ಸಾಂಗ್ ಗಳ ಹಾವಳಿನೇ ಹೆಚ್ಚು. ನಟ ದರ್ಶನ್ ಮೇಲಿನ ಕ್ರೇಜ್ ಎಷ್ಟಿದೆ ಅಂದ್ರೆ ಎದೆ, ಕೈ ಮೇಲೆ ಹಚ್ಚೆಗಳು, ವಾಹನಗಳ ಮೇಲೆ ಪೋಸ್ಟರ್ ಗಳು, ಪ್ಯಾಸೆಂಜರ್ ಆಟೋ, ಬಸ್ ಗಳಲ್ಲಿ ಬಾಸ್ ಹಾಡುಗಳ ಅಬ್ಬರವೇ.

[widget id=”custom_html-4″]

ವಿಶೇಷವೇಂದ್ರೆ ಉತ್ತರ ಕರ್ನಾಟಕದ ರೈತರೊಬ್ಬರು ತಮ್ಮ ಜೋಡೆತ್ತು ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪೊಲೀಸ್ ಮತ್ತು ಮಾಸ್ ಆ್ಯಂಡ್ ಖಡಕ್ ಚಿತ್ರಗಳನ್ನ ಬರೆಸಿ ಅಭಿಮಾನ ಮೆರೆದಿದ್ದಾರೆ. ಪ್ರಾಣಿ ಪ್ರಿಯ ದರ್ಶನ್ ಕೂಡ ಅಭಿಮಾನಿಯ ಅಭಿಮಾನಕ್ಕೆ ಭಾವಪರವಶರಾಗಿದ್ದು, ಕೃತಜ್ಞತೆ ಸಲ್ಲಿಸಿದಾರೆ. ಮುಖ್ಯವಾದ ವಿಷ್ಯ ಅಂದ್ರೆ ದಚ್ಚು ಅಭಿನಯಿಸಿದ್ದ ರಾಬರ್ಟ್ ಸಹ ಗಲ್ಲ ಪೆಟ್ಟಿಗೆ ಧೂಳ್ ಎಬ್ಬಿಸಿದೆ. ಒಟಿಟಿಯಲ್ಲೂ ಚಿತ್ರಕ್ಕೆ ಸಕತ್ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರದ ಹಾಡುಗಳು ಫ್ಯಾನ್ಸ್ ಬಾಯಿಯಲ್ಲಿ ಗುನುಗುತ್ತಿದ್ದು, ಕಣ್ಣು ಹೊಡೀಯಾಕ ಸಾಂಗ್ ಅಂತು ಯೂಟೂಬ್ ನಲ್ಲಿ ಭಾರೀ ಸೌಂಡ್ ಮಾಡ್ತಿದೆ. ದಾಸ ದರ್ಶನ್ ಡಿಫರೆಂಟ್ ಸ್ಟೈಲ್ ಗೆ ಮಾರು ಹೋಗಿರುವ ಡೈ ಹಾರ್ಡ್ ಫ್ಯಾನ್ಸ್.. ಬಾಸ್ ಬಾಸ್ ಡಿ ಬಾಸ್.. ಎಂದೆಂದಿಗೂ ನೀವೂ ಸೂಪರ್ ಬಾಸ್ ಅಂತಿದಾರೆ.