ಫಿಕ್ಸ್ ಆಯ್ತು ಲವ್ ಮಾಕ್ಟೇಲ್ ಜೋಡಿಯ ಮದುವೆ ದಿನಾಂಕ ? ವಿಶೇಷ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ರೊಮ್ಯಾಂಟಿಕ್ ಜೋಡಿ..

Advertisements

[widget id=”custom_html-4″]

ನಮಸ್ತೇ ಸ್ನೇಹಿತರೇ, ಲವ್ ಮಾಕ್ಟೇಲ್ ಚಿತ್ರದಲ್ಲಿ ಆದಿ ನಿಧಿಮಾ ಪಾತ್ರಗಳ ಮೂಲಕ ಅಭಿಮಾನಿಗಳ ಮನಗೆದ್ದಿದ್ದ ಸ್ಯಾಂಡಲ್ವುಡ್ ನ ರೊಮ್ಯಾಂಟಿಕ್ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಒಬ್ಬರೊನೊಬ್ಬರು ಪ್ರೀತಿಸುತ್ತಿರುವ ವಿಚಾರ ಈಗಾಗಲೇ ಎಲ್ಲರಿಗೂ ಗೊತ್ತಿರುವುದೇ. ಲವ್ ಮಾಕ್ಟೇಲ್ ಚಿತ್ರ ಬಿಡುಗಡೆಯಾದ ಬಳಿಕವೇ ಇವರ ಪ್ರೀತಿಯ ವಿಚಾರ ಬಹಿರಂಗವಾಗಿದ್ದು. ಇನ್ನು ಈ ಸೂಪರ್ ಜೋಡಿಯ ಪ್ರೀತಿ ಪ್ರೇಮದ ವಿಚಾರ ಗೊತ್ತಾದ ಕೂಡಲೇ ಅಭಿಮಾನಿಗಳು ಸುಮನಿರುತ್ತಾರೆಯೇ..ಅಂದಿನಿಂದಲೇ ಮದುವೆ ಯಾವಾಗ ಎನ್ನುವ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಲೇ ಇತ್ತು.

[widget id=”custom_html-4″]

Advertisements

ಈಗ ಇದಲ್ಲೆಕ್ಕೂ ಬ್ರೇಕ್ ಹಾಕಿರುವ ಈ ಜೋಡಿ ತಮ್ಮ ಮದುವೆ ಯಾವಾಗ ಎನ್ನುವ ವಿಚಾರವನ್ನ ಬಹಿರಂಗ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಮದುವೆ ದಿನಾಂಕವನ್ನ ಸ್ವತಃ ಡಾರ್ಲಿಂಗ್ ಕೃಷ್ಣ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದ್ದಾರೆ. ನಾವು ಮದುವೆಯಾಗುತ್ತಿರುವ ವಿಚಾರವನ್ನ ತಿಳಿಸಲು ಸಂತೋಷವಾಗುತ್ತಿದೆ. ಪ್ರೇಮಿಗಳ ದಿನವಾದ ಫೆಬ್ರುವರಿ ೧೪, ೨೦೨೧ರಂದು ಮದುವೆ ನೆರವೇರಲಿದೆ. ನಮ್ಮ ಜೋಡಿಯನ್ನ ಆಶೀರ್ವದಿಸಿ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

[widget id=”custom_html-4″]

‘ನಮ್ ದುನಿಯಾ ನಮ್ ಸ್ಟೈಲ್’ ಚಿತ್ರದಲ್ಲಿ ಪ್ರಥಮ ಬಾರಿಗೆ ನಟ ಕೃಷ್ಣ ಮತ್ತು ಮಿಲನಾ ನಾಗರಾಜ್ ಒಟ್ಟಿಗೆ ನಟಿಸಿದ್ದರು. ಇದರ ಜೊತೆಗೆ ಲವ್ ಮಾಕ್ಟೇಲ್ ಸೇರಿದಂತೆ ಚಂದ್ರಲೇಖ ರಿಟರ್ನ್, ಚಾರ್ಲಿ ಚಿತ್ರಗಳಲ್ಲೂ ಇಬ್ಬರೂ ಒಟ್ಟಿಗೆ ಅಭಿನಯಿಸಿದ್ದಾರೆ. ಇನ್ನು ಸ್ನೇಹದಿಂದ ಶುರುವಾದ ಇವರಿಬ್ಬರ ಸಂಬಂಧ ಪ್ರೀತಿಯಾಗಿದ್ದು, ಆರು ವರ್ಷಗಳ ಪ್ರೀತಿಯ ಬಳಿಕ ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಈ ಜೋಡಿ ಸಜ್ಜಾಗಿದೆ.