ಡಿ ಬಾಸ್ ದರ್ಶನ್ ಅವರ ಕುಟುಂಬದ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳೋ ಈ ಸುಂದರ ಚೆಲುವೆ ಯಾರು ಗೊತ್ತಾ ?

Cinema Uncategorized

ಸ್ನೇಹಿತರೇ, ತಮ್ಮ ಸೀದಾ ಸಾದಾ ಸರಳ ವ್ಯಕ್ತಿತ್ವ ಹಾಗೂ ನೇರ ನಡೆ ನುಡಿಗಳಿಂದಲೇ ಲಕ್ಷಾಂತರ ಅಭಿಮಾನಿಗಳ ಹೃದಯ ಸಾಮ್ರಾಜ್ಯದಲ್ಲಿ ಸಿಂಹಾಸನಾಧೀಶರಾಗಿರುವ, ಪ್ರೀತಿಯ ಅಭಿಮಾನಿಗಳಿಂದ ಡಿ ಬಾಸ್ ಎಂದೇ ಕರೆಸಿಕೊಳ್ಳುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಚಿತ್ರ ನೂರು ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಸ್ಯಾಂಡಲ್ವುಡ್ ನಲ್ಲಿ ಇತಿಹಾಸವನ್ನೇ ಸೃಷ್ಟಿ ಮಾಡಿದೆ. ಇನ್ನು ಯಾವುದೇ ನಟರ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನ ವೈಯುಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ತುಂಬಾ ಕಾತುರರಾಗಿರುತ್ತಾರೆ.

ಇನ್ನು ದರ್ಶನ್ ಅವರ ಜೊತೆ ಇರೋ ಕನ್ನಡ ಚಿತ್ರರಂಗದ ಮಾಡೆಲ್ ಕಮ್ ನಟಿ ಕೂಡ ಆಗಿರುವ ಇವರು ಹೆಚ್ಚಾಗಿ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ದರ್ಶನ್ ಅವರ ಜೊತೆ ಹಾಗೂ ದರ್ಶನ್ ಅವರ ಕುಟುಂಬದ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇನ್ನು ಇದುವೇ ದರ್ಶನ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿರುವುದು. ಹಾಗಾದ್ರೆ ಯಾರಿದು ದರ್ಶನ್ ಅವರ ಜೊತೆ ಕಾಣಿಸಿಕೊಳ್ಳುವ ಸುಂದರ ಚೆಲುವೆ..ಇವರಿಗೂ ದರ್ಶನ್ ಅವರಿಗೂ ಇರೋ ಸಂಬಂಧ ಏನು? ಈ ಸುಂದರಿ ತುಂಬಾ ಹೆಚ್ಚಾಗಿ ಡಿ ಬಾಸ್ ಅವರ ಕುಟುಂಬದ ಜೊತೆ ಕಾಣಿಸಿಕೊಳ್ಳುತ್ತಿರುವುದೇಕೆ ಎಂಬ ಪ್ರಶ್ನೆಗಳು ಅವರ ಅಭಿಮಾನಿಗಳಲ್ಲಿ ತುಂಬಾ ಕುತೂಹಲಕ್ಕೆ ಕಾರಣವಾಗಿದೆ.

ಸ್ಯಾಂಡಲ್ವುಡ್ ನ ನಟಿಯೂ ಹಾಗೂ ಮಾಡೆಲ್ ಕೂಡ ಆಗಿರುವ ಈಕೆಯ ಹೆಸರು ಪವಿತ್ರಗೌಡ. ಇನ್ನು ಈ ನಟಿ ಛತ್ರಿಗಳು ಸಾರ್ ಛತ್ರಿಗಳು, ಪ್ರೀತಿಯ ಕಿತಾಬು, ಸಾಗುವ ದಾರಿ ಸೇರಿದಂತೆ ಅಗಮ್ಯಾ ಅನ್ನೋ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ನಟಿ ಪವಿತ್ರ ಗೌಡರವರಿಗೆ ಖುಷಿ ಹೆಸರಿನ ಮುದ್ದಾದ ಹೆಣ್ಣುಮಗಳಿದ್ದಾಳೆ. ಡಿ ಬಾಸ್ ಜೊತೆ ಜೊತೆ ಇರೋ ಫೋಟೋ ಶೇರ್ ಮಾಡಿಕೊಂಡಿರುವ ಇವರು ದಾಸ ದರ್ಶನ್ ಅವರ ತಾಯಿ ಅಕ್ಕನ ಜೊತೆ ಫೋಟೋ ಹಿಡಿಸಿಕೊಂಡಿದ್ದಾರೆ.