ಕೊನೆಗೂ ಮೌನ ಮುರಿದ ಅಪ್ಪು ರತ್ನನ್ ಪ್ರಪಂಚದ ಬಗ್ಗೆ ಹೇಳಿದ್ದೇನು ಗೊತ್ತಾ.?

Cinema

ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಕನ್ನಡದ ಖ್ಯಾತ ನಟ ಡಾಲಿ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಎಂಬ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾ ಥಿಯೇಟರಲ್ಲಿ ಬಿಡುಗಡೆಯಾಗಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು ಎಂದು ಈಗಾಗಲೇ ಸಿನಿಮಾ ನೋಡಿದ ಪ್ರತಿಯೊಬ್ಬರು ಕೂಡ ಹೇಳುತ್ತಿದ್ದಾರೆ. ಅಮೆಜಾನ್ ಪ್ರೈಮ್ ನಲ್ಲಿ ಈಗ ಧನಂಜಯ್ ಅಭಿನಯಿಸಿದ ರತ್ನನ್ ಪ್ರಪಂಚ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹಾಗೆ ಚಿತ್ರಕ್ಕೆ ಒಳ್ಳೆಯ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ರತ್ನನ್ ಪ್ರಪಂಚ ಚಿತ್ರ ನೋಡಿದ ಪ್ರತಿಯೊಬ್ಬರೂ ಸಹ ಕಣ್ಣೀರು ತರಿಸುವಂತ ಚಿತ್ರ ಇದಾಗಿದೆ ಎಂದು ಹೇಳುತ್ತಿದ್ದಾರೆ.

ತಾಯಿಯ ಬಗ್ಗೆ ಚೆನ್ನಾಗಿ ತೋರಿಸಿದ್ದಾರೆ, ಹಾಗೂ ತಾಯಿ ಮೇಲೆ ಪ್ರೀತಿ ಇರುವ ಪ್ರತಿಯೊಬ್ಬರು ಕೂಡ ತಪ್ಪದೇ ಈ ಸಿನಿಮಾವನ್ನ ನೋಡಲೇಬೇಕು, ಕಣ್ತುಂಬಿಕೊಳ್ಳಲೆಬೇಕು ಎನ್ನುತ್ತಿದ್ದಾರೆ. ಹಾಗೆ ಉತ್ತರ ಕರ್ನಾಟಕದ ಭಾಷೆಯಲ್ಲಿ ಪ್ರಮೋದ್ ಅವರ ಅಭಿನಯ ಚೆನ್ನಾಗಿ ಮೂಡಿ ಬಂದಿದೆ. ಪ್ರಮೋದ್ ಅವರ ಅಭಿನಯ ಯಾರು ಮರೆಯಲಿಕ್ಕೆ ಆಗದು ಆ ರೀತಿ ಮೂಡಿಬಂದಿದೆ ಎನ್ನುತ್ತಿದ್ದಾರೆ. ಹಾಗೆ ಕೊನೆಯ ಹತ್ತು ನಿಮಿಷ ಸಿನಿಮಾ ಭಾರವಾದ ಮನಸ್ಸು ಗಟ್ಟಿಯಾಗಿ ಕಣ್ಣೀರು ಹಾಕುವಂತೆ ಮಾಡುತ್ತದೆ. ಈ ಸಿನಿಮಾ ಅತ್ಯದ್ಭುತ ಕತೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

ಇದೀಗ ಸಿನಿಮಾ ನೋಡಿದ ಎಲ್ಲಾ ಸ್ಟಾರ್ ನಟರು ಕೂಡ ರತ್ನನ್ ಪ್ರಪಂಚ ಸಿನಿಮಾಕ್ಕೆ ಒಳ್ಳೆಯದಾಗಲಿ ಎಂದು ಆಶಿಸುತ್ತಿದ್ದಾರೆ. ಇದರ ಜೊತೆ ನಟ ಪುನೀತ್ ಕೂಡ ನಟ ಧನಂಜಯ್ ಅವರ ರತ್ನನ್ ಪ್ರಪಂಚ ಸಿನಿಮಾ ನೋಡಿ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೂ ಟ್ವೀಟ್ ಮೂಲಕ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಅಷ್ಟಕ್ಕೂ ನಟ ಪುನೀತ್ ಹೇಳಿದ್ದೇನು ಗೊತ್ತಾ ಮುಂದೆ ಓದಿ. ‘ ರತ್ನನ್ ಪ್ರಪಂಚ ಸಿನೆಮಾವನ್ನು ನೋಡಿದೆ. ಅದ್ಭುತವಾದ ಪ್ರದರ್ಶನ, ಖುಷಿ ಆಯಿತು. ಧನಂಜಯ, ರೆಬಾ ಮೊನಿಕಾ, ಪ್ರಮೋದ್ ಮಂಜು, ಉಮಾಶ್ರೀ ಅವರು, ರವಿಶಂಕರ್, ಶ್ರುತಿ ಮೇಡಂ, ಅನುಪ್ರಭಾಕರ್, ಅಚ್ಯುತ್ ಎಲ್ಲರೂ ತುಂಬಾ ಚೆನ್ನಾಗಿ ಅಭಿನಯವನ್ನು ಮಾಡಿದ್ದಾರೆ. ಹಾಗೆ ಅದ್ಭುತವಾದ ಸಂಭಾಷಣೆ, ಮತ್ತು ಛಾಯಾಗ್ರಹಣ ಮತ್ತು ಸಂಗೀತ ಸಹ ಚೆನ್ನಾಗಿದೆ. ಹಾಗೆ ಇಡೀ ಚಿತ್ರತಂಡಕ್ಕೆ ಒಳ್ಳೆದಾಗಲಿ” ಎಂದು ಹೇಳಿದ್ದಾರೆ.

ರತ್ನನ್ ಪ್ರಪಂಚ ಚಿತ್ರದಲ್ಲಿ ನಟ ಡಾಲಿ ಧನಂಜಯ್​ ಅವರು, ರತ್ನಾಕರನಾಗಿ ಅಭಿನಯ ಮಾಡಿ, ಮಧ್ಯಮ ವರ್ಗದ ಕುಟುಂಬದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ಉಮಾಶ್ರೀಯವರು ಧನಂಜಯ ಅವರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆ ದಯವಿಟ್ಟು ಗಮನಿಸಿ ಎಂಬ ಚಿತ್ರದ ಮೂಲಕ ನಿರ್ದೇಶಕರಾಗಿದ್ದ ರೋಹಿತ್ ಪದಕಿಯವರು ಈ ರತ್ನನ್ ಪ್ರಪಂಚ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಾರ್ತಿಕ್​ ಯೋಗಿ ಜಿ. ರಾಜ್​ ಅವರು ಈ ಸಿನಿಮಾವನ್ನು ನಿರ್ಮಿಸಿದ್ದು ಅಜನೀಶ್​ ಲೋಕನಾಥ್​ ಎಂಬುವರು ಸಂಗೀತ ನೀಡಿದ್ದಾರೆ. ನಟ ಧನಂಜಯ್​ ಅವರಿಗೆ ನಾಯಕಿ ಆಗಿ ನಟಿ ರೆಬಾ ಜಾನ್ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ರತ್ನನ್ ಪ್ರಪಂಚ ಸಿನಿಮಾವನ್ನು ಈಗಾಗ್ಲೇ ನೀವು ನೋಡಿದ್ದರೆ ಹೇಗಿದೆ ಎಂದು ಕಾಮೆಂಟ್ ಮಾಡಿ. ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು..