ಮೊದಲ ದಿನವೇ ಜುಟ್ಟು ಹಿಡಿದು ಕಿತ್ತಾಡಿಕೊಂಡ ಮಹಿಳಾ ಸ್ಪರ್ಧಿಗಳು ! ಅಸಲಿ ಕಾರಣ ಏನ್ ಗೊತ್ತಾ ?

Entertainment
Advertisements

ಮಹಾಮಾ’ರಿ ಕೊರೊನಾ ಎರಡೇ ಅಲೆಯ ಲಾಕ್ ಡೌನ್ ನಿಂದ ಅರ್ಧಕ್ಕೆ ನಿಂತು ಹೋಗಿದ್ದ ಕಲಸ್೯ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್-8 ಬುಧವಾರದಿಂದ ಶುರುವಾಗಿದೆ. ಬರೋಬ್ಬರಿ 72 ದಿನಗಳ ನಂತರ ಬಿಗ್ ಬಾಸ್ ಗೂಡಿನಲ್ಲಿದ್ದ ಸ್ಪರ್ಧಿಗಳು ಮನೆಗೆ ತೆರಳಿ ಮತ್ತೆ ವಾಪಸ್ ಬಿಗ್ ಬಾಸ್ ಗೂಡು ಸೇರಿದ್ದಾರೆ. ಬುಧವಾರದಿಂದ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಗೆ ಬಿಗ್ ಓಪನಿಂಗ್ ಸಿಕ್ಕಿದೆ. ಅದು ಎಂಥಾ ಓಪನಿಂಗ್ ಅಂದ್ರೆ, ನೋಡುಗರ ಮೈ ಜುಮ್ ಎನಿಸುತ್ತೆ. ಅದನ್ನ ಜಡೆ ಜ’ಗಳದ ಆರಂಭ ಅಂದ್ರೆ ತಪ್ಪಾಗಲಾರದು. ಮಹಿಳಾ ಸ್ಪರ್ಧಿಗಳ ನಡುವೆ ನಡೆದ ಜುಗಲ್ ಬಂಧಿ ರೋಚಕವಾಗಿತ್ತು.

[widget id=”custom_html-4″]

Advertisements

ಅದೂ, ಕ್ಯೂಟ್ ದಿವ್ಯಾ ಉರುಡುಗ ಮತ್ತು ದಿವ್ಯಾ ಸುರೇಶ್ ಮಧ್ಯೆ ಜಂಗೀ ಕುಸ್ತಿ ನಡೆಯಿತು. ಬಿಗ್ ಮನೆಯ ಸೆಕೆಂಡ್ ಇನ್ನಿಂಗ್ಸ್‌ ಆರಂಭದಲ್ಲೇ ದಿವ್ಯಾ ಉರುಡುಗ ಮತ್ತು ದಿವ್ಯಾ ಸುರೇಶ್ ಗೆ ಕಿಚ್ಚ ಸುದೀಪ್ ಒಂದು ಟಾಸ್ಕ್ ಕೊಟ್ರು. ಅದೇನು ಅಂದ್ರೆ, ಇಬ್ಬರಿಗೂ ಬಿಂದಿ ಕೊಡಲಾಗಿತ್ತು. ಯಾರು ಮೊದಲು ಹಣೆಗೆ ಬಿಂದಿ ಇಡುತ್ತಾರೋ ಅವ್ರೇ ಈ ಟಾಸ್ಕ್ ನಲ್ಲಿ ವಿನ್ನರ್ ಆಗ್ತಾರೆ ಅಂತ. ಇಬ್ಬರಿಗೂ ಬಿಗ್ ಬಾಗ್ ವೇದಿಕೆಯಿಂದ ಬೀಳ್ಕೊಡುಗೆ ಕೊಟ್ಟ ಕಿಚ್ಚ ಸುದೀಪ್ ಆಲ್ ದಿ ಬೆಸ್ಟ್ ಹೇಳಿದರು. ಆದ್ರೆ, ಬಿಗ್ ಬಾಸ್ ಮನೆಗೆ ಹೋದ ದಿವ್ಯಾದ್ವಯರು ಟಾಸ್ಕ್ ಆರಂಭಿಸಿದರು. ಈ ಟಾಸ್ಕ್ ಅನ್ನ ಇಬ್ಬರು ಸಿರೀಯಸ್ ಆಗಿ ತೆಗೆದುಕೊಂಡಿದ್ದರ ಪರಿಣಾಮ ಅಗ್ರೇಸಿವ್ ಆಗಿ ನಡೆಯಿತು. ಲೀವಿಂಗ್ ಏರಿಯಾದಲ್ಲಿ ಇಬ್ಬರು ಒಬ್ಬರ ಮೇಲೆ ಬಿದ್ದು ಹೊರಳಾಡಿ ಜಂಗೀ ಕುಸ್ತಿ ಆಡಿದರು. ಕೊನೆಗೆ ಜಂಗೀ ಕುಸ್ತಿಯಲ್ಲಿ ಗೆದ್ದವರು ದಿವ್ಯಾ ಸುರೇಶ್.

[widget id=”custom_html-4″]

ದಿವ್ಯಾ ಉರುಡುಗ ಮೊದಲ ಟಾಸ್ಕ್ ನಲ್ಲಿಯೇ ಸೋಲನ್ನಪ್ಪಿದರು. ಸದ್ಯ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಶುರುವಾಗಿದ್ದು, ಮತ್ತೆ ಕ್ಯೂಟ್ ಜೋಡಿ ಅರವಿಂದ್ ಮತ್ತು ದಿವ್ಯಾ ಉರುಡುಗ ಗುಸು ಗುಸು ಲವ್ ಸ್ಟೋರಿ. ಮಂಜ ಪಾವಗಡ ಮತ್ತು ಶುಭ ಪುಂಜಾ ತರ್ಲೆ ತರ್ಲೆ ಮಾತು, ತುಂಟಾಟಗಳು, ವೈಷ್ಣವಿ ಮತ್ತು ರಘು ಅಡುಗೆ ಕಾಂಬಿನೇಷನ್, ಪ್ರಶಾಂತವ ಸಂಬರಗಿ – ಮಂಜು ಮಾವನ ಜಗಳ ನೋಡಲು ವೀಕ್ಷಕರು ಕಾತುರದಿಂದ ಕಾಯ್ತಿದ್ದಾರೆ. ಇನ್ಮುಂದೆ ಬಿಗ್ ಬಾಸ್ ಮನೆಯಲ್ಲಿ ಹೊಸ ಹೊಸ ಟಾಸ್ಕ್ ಗಳ ನಡುಗೆ ಗುದ್ದಾಟ- ಹೊ’ಡೆದಾಟ, ನಗು ಅಳು, ಹಾಸ್ಯ, ಮನೋರಂಜನೆ ಮನೆ ಮಾಡಿರುತ್ತೆ. ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ನಿಂದ ಬಿಗ್ ಪ್ರಿಯರು ಫುಲ್ ಖುಶ್ ಆಗಿದ್ದಂತೂ ಖಂಡಿತ