ಮುದ್ದು ಕಂದನಿಗೆ ಮುಂದೆ ಹೀಗೆ ಬಾ ಎಂದು ನಟನೆ ಮಾಡಿ ತೋರಿಸಿದ ಈ ನಾಯಿ.!ವಿಡಿಯೋ ನೋಡಿ ವಾವ್ ಎಂದ ನೆಟ್ಟಿಗರು..

Entertainment

ಸ್ನೇಹಿತರೆ ನಮ್ಮ ನಿಮ್ಮ ಜೀವನದಲ್ಲಿ ನಾವು ನೀವು ಸಾಕಷ್ಟು ಬಾರಿ ನಮ್ಮ ಸುತ್ತಮುತ್ತಲಿನ ಕೆಲ ದೃಶ್ಯಗಳನ್ನು ಕಣ್ತುಂಬಿಕೊಂಡು ತುಂಬಾ ಖುಷಿಯಲ್ಲಿ ತೇಲಾಡಿರುತ್ತೇವೆ. ಹಾಗೆ ಆ ಸಮಯದಲ್ಲಿ ಸಿಕ್ಕಂತಹ ಖುಷಿಗೆ ಪಾರವೇ ಇರುವುದಿಲ್ಲ. ಅಷ್ಟು ಸಂತಸದಿಂದಲೇ ಅದನ್ನು ಕಣ್ತುಂಬಿಕೊಂಡಿರುತ್ತೆವೆ. ಅಥವಾ ಆ ದೃಶ್ಯ ನೋಡಿ ಅನುಭವಿಸುತ್ತಿರುತ್ತೆವೆ. ಹೌದು ಶ್ವಾನಗಳು ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಸಾಕಷ್ಟು ಜನರು ಶ್ವಾನಗಳನ್ನು ಅವರವರ ಮನೆಯಲ್ಲಿ ಸಾಕುತ್ತಾ ಅದನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅದೇನೋ ಒಂದು ತೀರ ಗೊತ್ತಿಲ್ಲದ ಖುಷಿ ಆ ಶ್ವಾನದಿಂದ ಇಡೀ ಮನೆಯವರಿಗೆ ಸಿಗುತ್ತಿರುತ್ತದೆ.

ಹೌದು ಶ್ವಾನವು ಕೂಡ ಅಷ್ಟೇ ಅತಿ ಚಾಣಕ್ಷತನ ಹಾಗೂ ಬುದ್ಧಿವಂತಿಕೆ ಪ್ರಾಣಿ ಆಗಿರುತ್ತದೆ. ಹಾಗೆ ನಂಬಿಕೆಯಲ್ಲಿ ಶ್ವಾನವನ್ನು ಮೀರಿಸುವ ಬೇರಾವ ಪ್ರಾಣಿ ಸಿಗುವುದು ಅತಿ ವಿರಳ ಎಂದು ಹೇಳಬಹುದು. ಒಂದು ಸಲ ಶ್ವಾನ ಎಂಬ ಪ್ರಾಣಿಯು ಮನುಷ್ಯನನ್ನು ನಂಬಿದರೆ, ಆ ಜೀವ ಹೋಗುವವರೆಗೂ ಜೀವ ಹೋದ ಮೇಲೆಯೂ ಕೂಡ ಆತನಿಗೆ ತನ್ನ ನಂಬಿಕೆ ಉಳಿಸಿಕೊಳ್ಳುವ ಕೆಲಸಗಳನ್ನೇ ಮಾಡುತ್ತದೆ. ಜೊತೆಗೆ ಪ್ರೀತಿ ಹೆಚ್ಚು ನೀಡುತ್ತದೆ. ಹೌದು ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಬಾರಿ ಶ್ವಾನದ ವಿಡಿಯೋಗಳು ಅತಿ ಹೆಚ್ಚು ವೈರಲ್ ಆಗುತ್ತವೆ.

ಇದೀಗ ಮುದ್ದಾಗಿರುವ ಒಂದು ಚಿಕ್ಕ ಶ್ವಾನವು ಈಗತಾನೆ ಹುಟ್ಟಿರುವ ಕೆಲ ತಿಂಗಳಗಳ ಕಂದಮ್ಮನ ಜೊತೆ ಆಟ ಆಡುತ್ತಿರುತ್ತದೆ. ಈ ದೃಶ್ಯದಲ್ಲಿ ನೀವು ಕಣ್ತುಂಬಿಕೊಳ್ಳಿ. ಈ ಶ್ವಾನ ಸಣ್ಣ ಪುಟ್ಟ ಕಂದನಿಗೆ ಮುಂದೆ ಸಾಗುವುದನ್ನು ಪಾಠ ಮಾಡುತ್ತಿರುತ್ತದೆ. ಮೊದಲ ಬಾರಿ ಕಂದನಿಗೆ ಈ ರೀತಿ ನಡೆಯಬೇಕು ಎಂದು ಈ ಚಿಕ್ಕ ಶ್ವಾನ ಮಗುವಿಗೆ ತಾನು ಮುಂದೆ ಹೋಗುತ್ತಿದ್ದು ಈ ರೀತಿ ಮುಂದಕ್ಕೆ ಬಾ ಎಂದು ತೋರಿಸುತ್ತದೆ. ಆದರೆ ಮಗು ಈ ಶ್ವಾನವನ್ನು ನೋಡಿ ಮುಂದೆ ಬರುವುದಕ್ಕೆ ಪ್ರಯತ್ನಪಟ್ಟರೂ ಆ ಮಗುವಿಗೆ ಮುಂದೆ ಬರಲಿಕ್ಕೆ ಆಗುವುದಿಲ್ಲ.

ನಂತರ ಮತ್ತೆ ಶ್ವಾನ ಮಗುವಿಗೆ ಈ ರೀತಿ ಹೋಗಬೇಕು ಎಂದು ಕೆನ್ನೆ ಮುಟ್ಟಿ ತೋರಿಸುತ್ತದೆ. ಈ ಸಣ್ಣ ಪಾಪು ಹಾಗೂ ಮುದ್ದು ಶ್ವಾನದ ಕ್ಯೂಟ್ ದೃಶ್ಯ ನೋಡುಗರ ಕಣ್ಣನ್ನು ಸಂತಸಮಯ ಮಾಡಿದೆ. ಟ್ವಿಟರ್ ಖಾತೆಯಲ್ಲಿ ಶೇರ್ ಆಗಿರುವ ಈ ವಿಡಿಯೋ ಇದೀಗ ಅತಿಹೆಚ್ಚು ಮರು ಟ್ವಿಟ್ ಆಗುತ್ತಿದ್ದು ಈ ನಾಯಿ ಜಾಣತನ ಮತ್ತು ಬುದ್ಧಿವಂತಿಕೆಗೆ ನೆಟ್ಟಿಗರು ಸಲಾಂ ಹೊಡೆಯುತ್ತಿದ್ದಾರೆ. ಹೌದು ನೀವು ಕೂಡ ಒಂದು ಬಾರಿ ಈ ಶ್ವಾನ ಹಾಗೂ ಮುದ್ದು ಪಾಪುವಿನ ವಿಡಿಯೋ ನೋಡಿ ಇಷ್ಟವಾದಲ್ಲಿ ತಪ್ಪದೇ ಶೇರ್ ಮಾಡಿ ಧನ್ಯವಾದಗಳು…