10 ಜನ ಕೊರೋನಾ ಸೋಂಕಿತರ ಮೇಲೆ ಆಯುರ್ವೇದ ಚಿಕಿತ್ಸೆ ಪ್ರಯೋಗ ಮಾಡಲು ಡಾ ಕಜೆ ಅವರಿಗೆ ಅನುಮತಿ ನೀಡಿದ ಸರ್ಕಾರ..ಯಾರಿದು ಡಾ ಗಿರಿಧರ ಕಜೆ?

News
Advertisements

ಕೆಲವು ದಿನಗಳ ಹಿಂದಷ್ಟೇ ಖ್ಯಾತ ಆಯುರ್ವೇದ ತಜ್ಞರಾದ ಡಾ ಗಿರಿಧರ ಕಜೆ ಅವರು ಔಷಧದಿಂದ ಮಹಾಮಾರಿ ಕೊರೋನಾ ಸೋಂಕನ್ನ ಗುಣಪಡಿಸಬಹುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಅವರಿಗೆ ಪತ್ರ ಬರೆದಿದ್ದರು.

Advertisements

ಹೌದು, ನಾನು ಸಂಶೋಧನೆ ಮಾಡಿರುವ ಆರ್ಯುವೇದಿಕ್ ಔಷಧದಿಂದ ಗುಣಪಡಿಸಬಲ್ಲೆ ದಾಖಲೆಗಳ ಸಮೇತ ಪತ್ರ ಬರೆದಿದ್ದರು. ಈಗ ಅದನ್ನ ಪ್ರಾಯೋಗಿಕವಾಗಿ 10 ಜನ ಕೊರೋನಾ ಸೋಂಕಿತರ ಮೇಲೆ ಪ್ರಯೋಗ ಮಾಡಲು ಸರ್ಕಾರ ಅನುಮತಿ ನೀಡಿದೆ ಎಂದು ಹೇಳಲಾಗಿದೆ.

ಇನ್ನು ಡಾ ಕಜೆ ಅವರು ಯಡಿಯೂರಪ್ಪನವರು ನಡೆಸಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ. ಇನ್ನು ಆಯುರ್ವೇದ ಔಷಧ ನೀಡುವ ಬಗ್ಗೆ ಇದಕ್ಕೂ ಮೊದಲೇ ICMR ಮತ್ತು ರಾಜ್ಯಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು ಎಂದು ಹೇಳಿದ್ದಾರೆ. ಒಂದು ವೇಳೆ ಡಾ ಕಜೆ ಅವರು ಕೊಡುವ ಆಯುರ್ವೇದದ ಔಷಧದಿಂದ ಮಹಾಮಾರಿ ಕೊರೋನಾ ಗುಣವಾದರೆ ಜಗತ್ತಿನಲ್ಲೇ ಸೋಂಕಿಗೆ ಔಷಧ ಕಂಡುಹಿಡಿದ ಯಶಸ್ಸು ಕರುನಾಡಿನ ಪಾಲಾಗಲಿದೆ.

ಆಯುರ್ವೇದ ತಜ್ಞ ಡಾ ಕಜೆ ಅವರ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು..

ಆಯುರ್ವೇದದಲ್ಲಿ ಖ್ಯಾತ ವೈದ್ಯರಾಗಿರುವ ಡಾ ಕಜೆರವರು ೨೩ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಎರಡು ಲಕ್ಷಕ್ಕಿಂತ ಹೆಚ್ಚು ರೋಗಿಗಳನ್ನ ಗುಣಪಡಿಸಿದ ಅನುಭವ ಇದೆ ಎಂದು ವೈದ್ಯರೇ ಹೇಳಿದ್ದಾರೆ. ಇನ್ನು H1N1, ಡೆಂಗ್ಯೂ ಜ್ವರ, ಚಿಕನ್ ಗುನ್ಯಾ ಸೇರಿದಂತೆ ಹಲವಾರು ಕಾಯಿಲೆಗಳನ್ನ ಆಯುರ್ವೇದದಿಂದ ಗುಣಪಡಿಸಿರುವ ಬಗ್ಗೆ ಹೇಳಿದ್ದಾರೆ.