ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯೋದ್ರಿಂದ ಇಷ್ಟೆಲ್ಲಾ ಲಾಭ ಇದೆಯಾ ! ಗೊತ್ತಾದ್ರೆ ಈಗ್ಲೇ ಶುರು ಹಚ್ಕೊಳ್ತೀರಾ..

Health
Advertisements

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ಕೆಲವರು ಬೆಳ್ಳಂಬೆಳಗ್ಗೆ ಟೀ ಕಾಫಿ ಕುಡಿಯುವ ಹವ್ಯಾಸ ಇಟ್ಟುಕೊಂಡಿರುತ್ತಾರೆ. ಅದರ ಬದಲು ಬಿಸಿ ನೀರು ಕುಡಿದರೆ ಏನೇನು ಪ್ರಯೋಜ ಆಗಬಹುದು ಎಂಬುದನ್ನು ಈಗ ತಿಳಿಯೋಣ. ಮುಂಜಾನೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಮಲಬದ್ಧತೆ ಹೊಟ್ಟೆ ನೋವಿನಂತಹ ಸಮಸ್ಯೆಗಳು ದೂರಾಗುತ್ತವೆ. ಮಲಬದ್ಧತೆಯ ಮೂಲವ್ಯಾಧಿಗೆ ಪ್ರಮುಖ ಕಾರಣ. ಹಾಗಾಗಿ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಪರೋಕ್ಷವಾಗಿ ಮೂಲವ್ಯಾಧಿಯಂತಹ ಸಮಸ್ಯೆಗಳನ್ನು ತಪ್ಪಿಸುತ್ತದೆ.

[widget id=”custom_html-4″]

ಬೆಳಗ್ಗೆ ಬಿಸಿ ನೀರು ಕುಡಿಯುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಿ ಕೊಬ್ಬು ಕರಗುತ್ತವೆ. ಇದರಿಂದ ದೇಹದ ತೂಕ ಕಡಿಮೆಯಾಗಲು ಸಹಕಾರಿಯಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ರಕ್ತ ಶುದ್ಧಿ ಯಾಗುತ್ತದೆ. ಹೃದಯ ಸಂಬಂಧಿ ಸಮಸ್ಯೆಗಳು ಸುಧಾರಿಸುತ್ತದೆ. ಅಲ್ಲದೆ ಗಾಸ್ಟ್ರಿಕ್ ನಂತಹ ಸಮಸ್ಯೆಗಳೂ ಕೂಡ ಕಡಿಮೆಯಾಗುತ್ತವೆ. ಊಟದ ನಂತರ ಬಿಸಿ ನೀರು ಕುಡಿಯುವುದರಿಂದ ಜೀರ್ಣ ಕ್ರಿಯೆ ಚೆನ್ನಾಗಿ ನಡೆಯುತ್ತದೆ. ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ದೇಹದಲ್ಲಿನ ವಿ’ಷಪೂರಕ ಅಂಶಗಳು ಹೊರಬರುತ್ತದೆ.

[widget id=”custom_html-4″]

Advertisements

ಚರ್ಮ ದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಗುಣವಾಗಲು ಇದು ಪ್ರಯೋಜನಕಾರಿ. ಬೆಳಗ್ಗೆ ಬಿಸಿ ನೀರು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕೀಲು ನೋವು ಕಡಿಮೆಯಾಗುತ್ತದೆ. ರಕ್ತದ ಶುದ್ಧಿಯಾಗುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ವಿಪರೀತ ತಲೆ ನೋವು ಬರುವುದು ಗುಣವಾಗುತ್ತದೆ. ಇದಕ್ಕಾಗಿ ಪ್ರತೀ ದಿನ ಮುಂಜಾನೆ ಕಾಲಿ ಹೊಟ್ಟೆಯಲ್ಲಿ ಕುದಿಸಿ ಆರಿಸಿದ ಬೆಚ್ಚಗಿನ ಅಥವಾ ಸ್ವಲ್ಪ ಬಿಸಿಯಾಗಿಯೆ ಇರುವ ನೀರು ಕುಡಿಯಬೇಕು.

ಬೆಳಗಿನ ಜಾವ ಬಿಸಿ ಬಿಸಿ ನೀರು ಕುಡಿಯುವುದರಿಂದ ಶೀತ ನೆಗಡಿ, ಕೆಮ್ಮು ಮುಂತಾದ ಶೀತ ಸಮಸ್ಯೆಗಳು ದೂರಾಗುತ್ತದೆ. ಶ್ವಾಸ ಕೋಶದ ನಾಳಗಳು ಶುದ್ಧಗೊಂಡು ಉಸಿರಾಟದ ಸಮಸ್ಯೆಯೂ ದೂರವಾಗುತ್ತದೆ. ಬೆಳಗಿನ ಜಾವ ತಣ್ಣೀರಿನ ಬದಲು ಬಿಸಿ ನೀರು ಕುಡಿಯುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ. ಮತ್ತೇಕೆ ತಡ ಇಂದಿನಿಂದಲೇ ಬಿಸಿನೀರು ಕುಡಿಯುವುದನ್ನ ಶುರು ಮಾಡ್ಕೊಳ್ಳಿ..ಸದಾ ಆರೋಗ್ಯವಾಗಿರಿ..