ಎಲ್ಲರನ್ನೂ ಗುಗ್ಗು ಮಾಡಿಬಿಟ್ಟನಾ ಡ್ರೋನ್ ಪ್ರತಾಪ್ !ಇಷ್ಟು ದಿನ ಈ ಯುವ ವಿಜ್ಞಾನಿ ಹೇಳಿದ್ದೆಲ್ಲಾ ಬರೀ ಬುರಡೆನಾ ?

News
Advertisements

ಎರಡು ವರ್ಷಗಳ ನಾವು ನೀವು ಸೇರಿ ಫೇಮಸ್ ಮಾಡಿದ ವ್ಯಕ್ತಿ ಯುವ ವಿಜ್ಞಾನಿ ಎಂದು ಹೇಳಿಕೊಂಡು ಬಂದಿದ್ದ ಡ್ರೋನ್ ಪ್ರತಾಪ್. ಜೀ ಕನ್ನಡ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಗೆಸ್ಟ್ ಆಗಿ ಬಂದು ಹೋದ ಬಳಿಕ ತುಂಬಾ ಫೇಮಸ್ ಆದ ಯುವಕ. ಅಂದಿನಿಂದ ಇಂದಿನವರೆಗೂ ಸೋಷಿಯಲ್ ಮೀಡಿಯಾಗಳಲ್ಲಿ ಸಂಚಲನ ಮೂಡಿಸಿದ ಯುವಕ ಈ ಪ್ರತಾಪ್. ನಟ ಜಗ್ಗೇಶ್ ರವರಿಂದ ಹಿಡಿದು ಸಿಎಂ ಸೇರಿದಂತೆ ಮಠದ ಸ್ವಾಮೀಜಿಗಳಿಂದಲೂ ಪುರಸ್ಕಾರ ಪಡೆದುಕೊಂಡಿದ್ದ ಯುವಕ ಹೇಳಿರುವುದೆಲ್ಲಾ ಸುಳ್ಳು ಅವರು ಎಲ್ಲರನ್ನ ಗುಗ್ಗುಗಳನ್ನಾಗಿ ಮಾಡಿದ್ದಾರೆ ಎಂದು ರಾಷ್ಟೀಯ ಮಟ್ಟದ OPIndia ಎನ್ನುವ ಮಾಧ್ಯಮವೊಂದು ಬಹಿರಂಗ ಮಾಡಿದೆ.

Advertisements

ಇದೇ ಡ್ರೋನ್ ಪ್ರತಾಪ್ ನಾನು ನನ್ನ ತಾಯಿಯ ತಾಳಿಯನ್ನ ಅಡವಿಟ್ಟು ಡ್ರೋನ್ ತಯಾರಿಸಿ ವಿದೇಶಗಳ ಸೆಮಿನಾರ್ ಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಿರುವುದಾಗಿ ಹಾಗೆ ಹೀಗೆ ಎನ್ನುವ ಅನೇಕ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ರಾಷ್ಟೀಯ ಮಟ್ಟದ OPIndia ಎನ್ನುವ ಮಾಧ್ಯಮ ಫ್ಯಾಕ್ಟ್ ಚೆಕ್ ಮೂಲಕ ಸತ್ಯದ ಜಾಲವನ್ನ ಶೋಧಿಸುತ್ತಾ ಹೊರಟಾಗ ಇದೆಲ್ಲಾ ಸುಳ್ಳು..ಎಲ್ಲರನ್ನು ಮೆಚ್ಚಿಸಿ ಗುಗ್ಗು ಮಾಡಿದ್ದಾರೆ ಎಂಬ ವರದಿಯನ್ನ ಪ್ರಕಟಿಸಿದ್ದಾರೆ. ಹಾಗಾದ್ರೆ OPIndia ಪ್ರಕಟಿಸಿದ ವರದಿಯಲ್ಲಿ ಏನಿದೆ ಎಂಬುದನ್ನ ನೋಡೋಣಾ ಬನ್ನಿ..

ಪ್ರತಾಪ್ ತಾನು ೬೦೦ ಡ್ರೋನ್ ಗಳನ್ನ ತಯಾರಿಸಿರುವುದಾಗಿ ಹೇಳಿಕೊಂಡಿದ್ದರು. ಆದರೆ ಇದಕ್ಕೆ ಸಂಬಂಧ ಪಟ್ಟ ಹಾಗೆ ಯಾವುದೇ ಫೋಟೋ ವಿಡಿಯೋಗಳು ಇಲ್ಲ. ಪ್ರಧಾನಿ ಮೋದಿಯರು DRDO ದಲ್ಲಿ ಕೆಲಸದ ಆಫರ್ ನೀಡಿದ್ದಾರೆ, ೮೪ ದೇಶಗಳಲ್ಲಿ ಕೆಲಸದ ಆಫರ್ ಗಳು ಹುಡುಕೊಂಡು ಬಂದಿವೆ, ಇಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದ ಡ್ರೋನ್ ಎಕ್ಸ್ಪೋ ದಲ್ಲಿ ಚಿನ್ನದ ಪದಕ ಗೆದ್ದಿರುವುದಾಗಿ ಇನ್ನು ಜಪಾನ್ ನಲ್ಲಿ ನಡೆದಿದ್ದ ಅಂತರಾಷ್ಟ್ರೀಯ ರೋಬೋಟಿಕ್ ಎಕ್ಸಿಬ್ಯುಷನ್ ಗೋಲ್ಡ್ ಮೆಡಲ್ ಗೆದ್ದಿರುವುದಾಗಿ ಹೇಳಿದ್ದು ಇದೆಲ್ಲವೂ ಸುಳ್ಳೇ ಸುಳ್ಳು ಎಂದು OPIndia ದವರು ತಮ್ಮ ವರದಿಯಲ್ಲಿ ಬಹಿರಂಗ ಮಾಡಿದ್ದಾರೆ.

ಇನ್ನು ಪ್ರತಾಪ್ ಹೇಳುವ ಹಾಗೆ ಡ್ರೋನ್ ಗೆ ಸಂಬಂಧಪಟ್ಟ ಹಾಗೆ ಅನೇಕ ಪದಕಗಳನ್ನ ಪಡೆದಿರುವ ಬಗ್ಗೆ ಹೇಳಿಕೊಂಡಿದ್ದರು ಅದಕ್ಕೆ ಸಂಬಂಧಪಟ್ಟ ಯಾವುದೇ ವೀಡಿಯೋಗಳಿಲ್ಲ.ಇನ್ನು ಮೆಡಲ್ ಗಳನ್ನ ಪಡೆಯುವ ಸಮಯದ ಯಾವುದೇ ಫೋಟೋಗಳಿಲ್ಲ. ಹಾಗಾದ್ರೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ಡ್ರೋನ್ ಪಕ್ಕ ನಿಂತಿರುವ ಫೋಟೋಗಳು ಯಾವು ಎಂಬುದರ ಬಗ್ಗೆ ನಿಮ್ಮಲ್ಲಿ ಪ್ರಶ್ನೆಗಳು ಮೂಡಿರುವುದು ಸಹಜ. ಫೋಟೋವೊಂದರಲ್ಲಿ ಪ್ರತಾಪ್ ಇರುವುದು ACSL ಎಂಬ ಜಪಾನಿನ ಡ್ರೋನ್ ಅದು. ಪ್ರತಾಪ್ ಹೇಳುವ ಹಾಗೆ ಆ ಡ್ರೋನ್ ನ್ನ ಯಾವುದೇ ರಿಸೈಕಲ್ ವಸ್ತುಗಳಿಂದ ಮಾಡಲಾಗಿಲ್ಲ. ಬದಲಿಗೆ ಅದೇ ಕಂಪನಿಯ ವಸ್ತುಗಳನ್ನು ಮಾಡಲಾಗಿದೆ. ಎಕ್ಸಿಬ್ಯುಷನ್ ಒಂದರಲ್ಲಿ ಈ ಡ್ರೋನ್ ಇರಿಸಿದಾಗ ಪ್ರತಾಪ್ ಫೋಟೋ ತೆಗೆಸಿಕೊಂಡಿದ್ದಾರೆ ಅಷ್ಟೇ. ಇನ್ನು ಆಪೋಟೋವನ್ನ ಸೂಕ್ಷ್ಮವಾಗಿ ಗಮನಿಸಿದಾಗ ACSL ಎಂಬ ಕಂಪನಿಯ ಸ್ಟಿಕರ್ ಇದ್ದು ಅದೇ ಕಂಪನಿಯ ಟಿ ಶರ್ಟ್ ಧರಿಸಿರುವ ಸಿಬ್ಬಂದಿಯನ್ನು ಸಹ ಕಾಣಬಹುದಾಗಿದೆ. ಇನ್ನು OPIndia ದವರು ACSL ಸಂಸ್ಥೆಗೆ ಮೇಲ್ ಮಾಡಿ ನಿಮ್ಮಲ್ಲಿ ಪ್ರತಾಪ್ ಎಂಬ ವ್ಯಕ್ತಿ ಕೆಲಸ ಮಾಡುತ್ತಿದ್ದಾರೆಯೇ ಎಂಬುದರ ಬಗ್ಗೆ ಸ್ಪಷ್ಟಿಕರಣ ಕೇಳಿದಾಗ ಆ ತರದ ಯಾವುದೇ ವ್ಯಕ್ತಿ ಸಿಬ್ಬಂದಿ ನಮ್ಮಲ್ಲಿ ಇಲ್ಲ ಎಂದು ಆ ಕಂಪನಿಅಯ್ವರೂ ಹೇಳಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಕರ್ನಾಟಕದಲ್ಲಿ ಪ್ರವಾಹ ಬಂದ ಸಮಯದಲ್ಲಿ ಪ್ರತಾಪ್ ತಯಾರಿಸದ್ದ ಡ್ರೋನ್ ಬಳಸಿ ಅತ್ಯಗತ್ಯ ಆಹಾರ ಸಾಮಗ್ರಿಗಳನ್ನ ಸಂತ್ರಸ್ತರಿಗೆ ತಲುಪಿಸಲಾಗಿತ್ತು ಎಂದು ವರದಿಯಾಗಿತ್ತು. ಆದರೆ ಸುಳ್ಳು ಎಂದು ಹೇಳಲಾಗಿದ್ದು ಇದರಿಂದ ಎರಡು ಸತ್ಯಗಳು ಹೊರಬಿದ್ದಿವೆ. ಆತ ತಯಾರಿಸಿದ್ದು ಕೇವಲ ಅದರ ರಿಮೋಟ್ ಕಂಟ್ರೋಲ್ ಹೊರತು ಡ್ರೋನ್ ಅಲ್ಲ. ಡ್ರೋನ್ ನಿಂದ ಅಷ್ಟೊಂದು ಬಹ್ರಾವಾದ ವಸ್ತುಗಳನ್ನ ಸಾಗಿಸಲು ಸಾಧ್ಯವೇ ಇಲ್ಲ. ಇದರಿಂದ ಕೇವಲ ಪ್ರವಾಹದಲ್ಲಿ ಸಿಲುಕಿದ ಸಂತ್ರಸ್ತರನ್ನ ಹುಡುಕಬಹುದಾಗಿದೆ ಎಂದು ವರದಿಯಾಗಿದೆ. ಇನ್ನು ಪ್ರತಾಪ್ ೬೦೦ ಡ್ರೋನ್ ಗಳನ್ನ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಒಂದು ಡ್ರೋನ್ ಮಾಡಲು ತಿಂಗಳುಗಳ ಕಾಲ ಪರಿಶ್ರಮ ಪಡಬೇಕು. ಆದರೆ ಅದೇ ೬೦೦ ಡ್ರೋನ್ ಗಳನ್ನ ಮಾಡಲು ಹತ್ತಾರು ವರ್ಶಗಳೇ ಬೇಕು. ಆದರೆ ಪ್ರತಾಪ್ ಹೇಳಿರುವುದೆಲ್ಲಾ ಸುಳ್ಳು ಎಂದು OPIndia ಬಹಿರಂಗ ಮಾಡಿದ್ದು ಇದಕ್ಕೆ ಪ್ರತಪ್ ಏನು ಸ್ಪಷ್ಟಿಕರಣ ನೀಡುತ್ತಾನೆ ಎಂದು ಕಾದು ನೋಡಬೇಕಾಗಿದೆ.