ಇದ್ದಕ್ಕಿದ್ದಂತೆ ಹೊತ್ತಿ ಉರಿದ ಸಮುದ್ರ !ಆಗಿದ್ದೇನು ಗೊತ್ತಾ? ವೈರಲ್ ವಿಡಿಯೋ..

Kannada News
Advertisements

ಇದು ಯಾವುದೋ ತೈಲ ಬಾವಿಯಲ್ಲ. ತೈಲ ಸಂಗ್ರಹಗಾರವೂ ಅಲ್ಲ. ಇದು ಸಮುದ್ರ. ಆದರೆ ನೋಡಿ ಹೀಗೆ ಹೊತ್ತಿ ಉರಿಯುತ್ತಿದೆ. ಬೆಂಕಿ ಧಗ ಧಗಿಸುತ್ತಿದೆ. ಜ್ವಾಲಾಮುಖಿ ಎದ್ದು ಲಾವಾರಸ ಹೊರಚೆಲುತ್ತಿರುವಂತೆಯೂ ಕಾಣುತ್ತಿದೆ. ಆದ್ರೆ ಇಲ್ಲಿ ಅದ್ಯಾವುದೂ ಆಗಿಲ್ಲ. ಆದರೂ ಇಲ್ಲಿ ಸಮುದ್ರ ಹೀಗೆ ಧಗ ಧಗನೆ ಉರಿಯುತ್ತಿದೆ. ಈ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿದ್ದು ಮೆಕ್ಸಿಕೋದ ಬಳಿ. ಈ ಘಟನೆಯಿಂದ ಮೆಕ್ಸಿಕೋದ ಜನರೆಲ್ಲ ತೀವ್ರ ಆತಂಕಕ್ಕೊಳಗಾಗಿದ್ದರು. ಹೀಗೆ ಸಮುದ್ರವೇ ಹೊತ್ತಿ ಉರಿಯತೊಡಗಿದರೆ ಆತಂಕ ಸಹಜವೇ. ಹೀಗೆ ಬೆಂಕಿ ಹತ್ತಿ ಉರಿದಿದ್ದು, ಲಾವಾರಸ ಉಕ್ಕುವಂತೆ ಕಂಡಿದ್ದು ಮೆಕ್ಸಿಕೋದ ಯೂಕಟನ್ ಪರ್ಯಾಯ ದ್ವೀಪದ ಪಶ್ಚಿಮ ಭಾಗದ ಸಾಗರದಲ್ಲಿ. ಇದ್ದಕ್ಕಿದ್ದಂತೆ ಬೆಂಕಿ ಧಗ ಧಗಿಸಲು ಆರಂಭಿಸಿದಾಗ ನಿಜಕ್ಕೂ ಇಲ್ಲಿನ ಜನ ಕಂಗಾಲಾಗಿ ಹೋಗಿದ್ದರು. ಈ ವಿಡಿಯೋ ವೈರಲ್ ಆಗ್ತಾ ಇದ್ದಂತೆ ಹೀಗೆ ಸಾಗರದಲ್ಲೂ ಬೆಂಕಿ ಹೊತ್ತಿಕೊಳ್ಳಲು ಸಾಧ್ಯವೇ ಅಂತ ಚರ್ಚೆಯು ಶುರುವಾಗಿತ್ತು. ಇದು ನಿಜವೇ,ಅಥವಾ ಸುಳ್ಳೇ ಅಂತಾನೂ ಚೆಕ್ ಮಾಡಿತೊಡಗಿದ್ದರು. ಆದರೆ ಇದು ನಡೆದಿದ್ದು ಸತ್ಯ. ಹೀಗೆ ಬೆಂಕಿ ಮತ್ತಷ್ಟು ವ್ಯಾಪಿಸುತ್ತಿದ್ದಂತೆ ಇಲ್ಲಿ ಭೀತಿ ಹೆಚ್ಚಾಗಿತ್ತು. ಜ್ವಾಲಾಮುಖಿ ಸ್ಫೋಟಗೊಂಡಾಗ ಲಾವಾರಸ ಉಕ್ಕಿ ಹರಿದು ಜೊತೆ ಜೊತೆಗೆ ಕೆಂಡದ ಮಳೆಯಾಗೋದನ್ನು ನಾವು ನೋಡಿದ್ದೇವೆ.

[widget id=”custom_html-4″]

Advertisements

ಅದು ಐಸ್ ಲ್ಯಾಂಡ್ ನಲ್ಲಿ ಆಗಲಿ, ಸಮುದ್ರ ತೀರದಲ್ಲಾಗಲಿ, ಪರ್ವತದ ತುತ್ತ ತುದಿಗಾಗಲಿ ಬೆಂಕಿ ಹೊತ್ತಿ ಉರಿದು ಬಿಡುತ್ತದೆ. ಒಮ್ಮೆ ಜ್ವಾಲಾಮುಖಿ ಸ್ಫೋಟಗೊಂಡಿತೆಂದರೆ ಕಿಲೋ ಮೀಟರ್ ಗೆಟ್ಟಲೇ ದಟ್ಟ ಹೊಗೆ ವ್ಯಾಪಿಸುತ್ತದೆ. ಅಲ್ಲಿ ಕುರುಚಲು ಕಾಡಿದ್ದರಂತೂ ಬೆಂಕಿ ಧಗ ಧಗಿಸತೊಡಗುತ್ತದೆ. ಅಷ್ಟೇ ಅಲ್ಲ. ಲಾವಾರಸ ಉಕ್ಕಿ ಅದು ಹೊಳೆಯಂತೆ ಹರಿದು ಬರಲಾರಂಭಿಸುತ್ತದೆ. ತನ್ನ ಬಾಯಿಗೆ ಸಿಕ್ಕಿದ್ದನ್ನೆಲ್ಲ ಆ’ಹುತಿ ಪಡೆಯುತ್ತದೆ ಈ ಲಾವಾರಸದ ಹೊಳೆ. ಇದು ಜ್ವಾಲಾಮುಖಿ ಸ್ಫೋಟಿಸಿದಾಗ ಆಗೋದು ಸಹಜ. ಆದ್ರೆ ಹೀಗೆ ಸಮುದ್ರದಲ್ಲಿ ಬೆಂಕಿ ಹೊತ್ತಿ ಉರಿಯೋದು ಅಂದ್ರೆ ಅದು ನಿಜಕ್ಕೂ ಅಪರೂಪದ, ಅಚ್ಚರಿಯ ಸಂಗತಿಯೇ ಅಲ್ವಾ. ಆದರೆ ಇದಕ್ಕೊಂದು ಕಾರಣವಿದೆ. ಮೆಕ್ಸಿಕೋದ ಯೂಕಟನ್ ಪರ್ಯಾಯ ದ್ವೀಪದ ಪಶ್ಚಿಮ ಸಾಗರದಲ್ಲಿ ಅಗ್ನಿ ಜ್ವಾಲೆ ಹೀಗೆ ನರ್ತಿಸಿದ್ದು ಆತಂಕ, ಅಷ್ಟೇ ಆಶ್ಚರ್ಯವನ್ನೂ ಉಂಟು ಮಾಡಿತ್ತು. ಇದಕ್ಕೆ ಐ ಆಫ್ ಫೈರ್ ಅಂತಾನೂ ನಾಮಕರಣ ಮಾಡಲಾಗಿತ್ತು. ಆದರೆ ಇಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಅಂತ ನೋಡಿದ್ರೆ ಅಲ್ಲೊಂದು ಯಡವಟ್ಟಾಗಿದ್ದೇ ಕಾರಣ. ಈ ಸಮುದ್ರದ ಆಳದಲ್ಲಿ ಗ್ಯಾಸ್ ಪೈಪ್ ಲೈನ್ ನಿಂದ ಅನಿಲ ಸೋರಿಕೆಯಾಗಿ ಅದಕ್ಕೆ ಬೆಂಕಿ ತಗುಲಿಕೊಂಡಿದ್ದೇ ಇಷ್ಟೆಲ್ಲ ಅ’ನಾಹುತಕ್ಕೆ ಕಾರಣವಾಗಿ ಹೋಗಿತ್ತು. ಹೀಗೆ ಬೆಂಕಿ ಹೊತ್ತಿಕೊಂಡಿದ್ದಕ್ಕೆ ಕಾರಣ ಈ ಪೈಪ್ ಲೈನ್ ನಲ್ಲಿದ್ದ ಅನಿಲ. ಇದು ಸೋರಿಕೆಯಾದ ತಕ್ಷಣ ಬೆಂಕಿ ಕಾಣಿಸಿಕೊಂಡು ಇದು ಬಳಿಕ ಭಯಂಕರವಾಗಿ ಧಗ ಧಗಿಸಿತ್ತು.

[widget id=”custom_html-4″]

ಮೆಕ್ಸಿಕೋ ತೈಲ ಕಂಪನಿ ಪೆೆಮೆಕ್ಸ್ ಈ ಅಗ್ನಿ ಅನಾಹುತವನ್ನು ಖಚಿತಪಡಿಸಿ ,ಈ ಘಟನೆ ನಡೆದಿದ್ದು ನಿಜ ಅಂತ ದೃಢೀಕರಿಸಿದೆ. ಜ್ವಾಲಾಮುಖಿ ಸ್ಫೋಟಗೊಂಡಾಗ ಲಾವಾರಸ ಚಿಮ್ಮುವ ರೀತಿಯಲ್ಲಿ ನೀರಿನ ಮಧ್ಯೆ ಬೆಂಕಿಯ ಜ್ವಾಲೆ ಹೊರಹೊಮ್ಮುತ್ತಿದ್ದರೆ ಇದನ್ನು ನಂದಿಸೋದು ಹೇಗಪ್ಪಾ ಅಂತ ಚಿಂತೆ ಶುರುವಾಗಿತ್ತು. ಬಳಿಕ ತಕ್ಷಣ ತೈಲ ಕಂಪನಿ ಮತ್ತು ಮೆಕ್ಸಿಕೋದ ಸಾಗರ ರಕ್ಷಣಾ ಪಡೆಗಳು ಬೆಂಕಿಯನ್ನು ನಂದಿಸುವ ಕಾರ್ಯಾಚರಣೆಯನ್ನು ಶುರು ಮಾಡಿಕೊಂಡಿದ್ದವು. ಒಂದು ಕಡೆ ಮೆಕ್ಸಿಕೋದ ತೈಲ ಕಂಪನಿ ಈ ಪೈಪ್ ಲೈನ್ ನಲ್ಲಿ ಅನಿಲ ಸಪ್ಲೈ ಆಗೋದನ್ನು ಬಂದ್ ಮಾಡಿತ್ತು. ತಕ್ಷಣ ಹಡಗುಗಳು ನೀರಿನ ಟ್ಯಾಂಕರ್ ಹೊತ್ತು ಈ ದುರಂತ ನಡೆದ ಸ್ಥಳಕ್ಕೆ ಧಾವಿಸಿ ಬಂದವು. ಈ ಬೆಂಕಿಯನ್ನು ತಹ ಬಂದಿಗೆ ತರಲು ನೀರಿನ ಟ್ಯಾಂಕರ್ ಹೊತ್ತ ಹಡಗುಗಳು, ದೊಡ್ಡ ದೊಡ್ಡ ದೋಣಿಗಳು ವರ್ಷಧಾರೆಯನ್ನೇ ಸುರಿಸಿದವು. ಇದು ಒಂದೆರಡು ಗಂಟೆಯಲ್ಲ. ಬರೋಬ್ಬರಿ ಐದು ಗಂಟೆಗಳ ಕಾಲ ಈ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ. ಸಮುದ್ರದಲ್ಲಿ ಬೆಂಕಿ ಪ್ರಜ್ವಲಿಸುತ್ತಿದ್ದರೆ ಅಷ್ಟೇ ಬಿರುಸಾಗಿ ಬೆಂಕಿ ನಂದಿಸಲು ಸಿಬ್ಬಂದಿ ಶ್ರಮಿಸಿದರು. ಕೊನೆಗೂ ಈ ಬೆಂಕಿ ಶಮನವಾಯಿತು. ಸಾಗರ ತೀರದಲ್ಲಿ ಅಗ್ನಿ ಶಾಂತವಾಗಿದ್ದು ಕಂಡು ಅಂತು ಇಂತು ನಿಟ್ಟುಸಿರು ಬಿಟ್ಟರು. ಆದರೆ, ಒಂದು ದಿನ ಇಲ್ಲಿ ಸಿಕ್ಕಾಪಟ್ಟೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪುಣ್ಯಕ್ಕೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಅಂತ ವರದಿಗಳು ತಿಳಿಸಿವೆ.

[widget id=”custom_html-4″]

ಮೆಕ್ಸಿಕೋದ ಈ ಗ್ಯಾಸ್ ಪೈಪ್ ಲೈನ್ ಎರಡು ಪ್ರಮುಖ ಘಟಕಗಳನ್ನು ಸಂಪರ್ಕಿಸುತ್ತದೆ. ಅದೃಷ್ಟವಶಾತ್ ಇಲ್ಲಿಂದ ಸಪ್ಲೈ ಅಗುವ ಗ್ಯಾಸ್ ಬಂದ್ ಮಾಡಿದ್ದರಿಂದ ಈ ಎರಡೂ ಘಟಕಗಳು ಸುರಕ್ಷಿತವಾಗಿವೆ. ಇಲ್ಲವಾದರೆ ಈ ಪೈಪ್ ಲೈನ್ ನಿಂದ ಬೆಂಕಿ ತೈಲ ಘಟಕದವರೆಗೂ ವ್ಯಾಪಿಸಿ ದೊಡ್ಡ ದು’ರಂತವೇ ಆಗಿ ಹೋಗುವ ಸಂಭವ ಇತ್ತು. ಆದರೆ ಮೆಕ್ಸಿಕೋ ಅಧಿಕಾರಿಗಳ ಸಕಾಲಿಕ ಕ್ರಮದಿಂದ ಈ ದುರಂತ ತಪ್ಪಿದೆ. ಸಾಗರದಲ್ಲಿ ಅಗ್ನಿ ದು’ರಂತಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಇತ್ತೀಚೆಗಷ್ಟೇ ಶ್ರೀಲಂಕಾದ ಸಾಗರ ತೀರದಲ್ಲಿ ಹಡಗಿಗೆ ಬೆಂಕಿ ಹೊತ್ತಿಕೊಂಡು ಅನಾಹುತ ಸಂಭವಿಸಿತ್ತು. ಇಡೀ ಹಡಗೇ ಹೊತ್ತಿ ಉರಿದು ಕೋಟಿ ಕೋಟಿ ನಷ್ಟವಾಗಿತ್ತು. ಆದರೆ,ಹೀಗೆ ಸಮುದ್ರದಿಂದಲೇ ಬೆಂಕಿಯ ಉಂಡೆ ಉಕ್ಕಿ ಬಂದಿದ್ದು ಮಾತ್ರ ಅಪರೂಪ,ಅಷ್ಟೇ ಅಲ್ಲ ಅಚ್ಚರಿ ಕೂಡ ತಂದಿತ್ತು. ಆದರೆ, ಸಕಾಲಿಕ ಕ್ರಮದಿಂದ ಇದು ಶಮನವಾಗಿದೆ. ನೀರಿನ ಟ್ಯಾಂಕರ್ ಹೊತ್ತ ಹಡಗುಗಳು ಆಪರೇಷನ್ ನಡೆಸಿ ಬೆಂಕಿಯನ್ನು ಆರಿಸಿದ್ದಾರೆ.ಸಮುದ್ರದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಯಾಕೆ ಅಂತ ಎಲ್ಲಾ ಕಡೆ ಆತಂಕ ಆಗಿತ್ತು. ಆದ್ರೆ ಇದಕ್ಕೆ ಗ್ಯಾಸ್ ಪೈಪ್ ಲೈನ್ ಸೋರಿಕೆಯೆ ಕಾರಣ ಅಂತ ಗೊತ್ತಾಯ್ತು. ಇನ್ಮುಂದೆ ಇಂತಹ ಅವಘಡ ಆಗದಂತೆ ಎಲ್ಲೆಲ್ಲಿ ಗ್ಯಾಸ್ ಲೈನ್ ಇದ್ದಾವೋ ಅಲ್ಲೆಲ್ಲ ಮುಂಜಾಗ್ರತಾ ಕ್ರಮ ಹೆಚ್ಚಿಸಬೇಕಾಗಿದೆ.