ಮಾಸ್ಕ್ ನಲ್ಲಿಯೇ ಕೊರೊನಾ ಕಂಡು ಹಿಡಿಯಬಹುದು ! ಅದು ಕೇವಲ 90 ನಿಮಿಷದಲ್ಲೇ..

Kannada News
Advertisements

ಒಂದು ವರ್ಷದ ಹಿಂದಿನ ಮಾತು. ಯಾರಿಗಾದ್ರೂ ಕೋವಿಡ್ ಲಕ್ಷಣ ಕಂಡುಬಂದ್ರೆ, ಅವರ ಸ್ವಾಬ್ ಕಲೆಕ್ಟ್ ಮಾಡಿ ಅದನ್ನ ಲ್ಯಾಬ್‍ಗೆ ಕಳುಹಿಸಿ, ರಿಸಲ್ಟ್ ಗಾಗಿ ದಿನಗಟ್ಟಲೇ ಕಾಯಬೇಕಾಗಿತ್ತು. ಆದ್ರೆ, ವೈರಸ್ ಎಷ್ಟು ಬೇಗ ಬೇಗ ತನ್ನ ರೂಪ ಬದಲಿಸಕೊಳ್ತೋ, ಹಾಗೆನೇ ಅದನ್ನ ಪರೀಕ್ಷೆ ಮಾಡೋ ವಿಧಾನಗಳೂ ವೇಗ ಪಡೆದುಕೊಳ್ತಿವೆ. ಇದೀಗ ಜಸ್ಟ್ ಒಂದೇ ಒಂದು ಮಾಸ್ಕ್ ನಲ್ಲಿ ಇದೆಲ್ಲಾ ತಿಳಿದುಹೋಗಲಿದೆ. ನಾವು ಈಗ ಒಂದರಿಂದ ಒಂದೂವರೆ ವರ್ಷದ ಹಿಂದೆ ಹೋಗೋಣ. ಆವಾಗ ಕೊರೊನಾ ಲಕ್ಷಣ ಕಾಣಿಸಿಕೊಂಡರೆ ಭಯ ಬಿದ್ದು ಆಸ್ಪತ್ರೆಗೆ ಓಡೋಡಿ ಹೋಗ್ತಾ ಇದ್ವಿ, ಅಲ್ಲಿನ ವೈದ್ಯಕೀಯ ಸಿಬ್ಬಂದಿ ನಮ್ಮ ವಿಳಾಸ, ಮೊಬೈಲ್ ನಂಬರ್ ಪಡೆದು, ಗಂಟಲು ದ್ರವ ಸಂಗ್ರಹಿಸಿಕೊಂಡು ವಾಪಸ್ ಕಳುಹಿಸುತ್ತಿದ್ರು. ಒಮ್ಮೆ ಪರಿಸ್ಥಿತಿ ಗಂಭೀರವಾಗಿದ್ರೆ ಆಸ್ಪತ್ರೆಗೆ ದಾಖಲಿಸಿಕೊಳ್ಳುತ್ತಿದ್ರು. ನಮ್ಮಿಂದ ಪಡೆದ ಗಂಟಲು ದ್ರವದ ಸ್ಯಾಂಪಲ್ ಲ್ಯಾಬ್‍ಗೆ ಹೋಗಿ ವರದಿ ಬರೋದು ಕನಿಷ್ಠ ಅಂದರೂ ಎರಡ್ಮೂರು ದಿನವಾದ್ರೂ ಆಗುತ್ತಿತ್ತು. ಅಲ್ಲಿಯವರೆಗೂ ನಮಗೆ ಕೊರೊನಾ ಬಂದಿದೆಯಾ? ಇಲ್ಲವೇ? ಸಾಮಾನ್ಯ ನೆಗಡಿ ಜ್ವರನಾ? ಅನ್ನೋದೇ ತಿಳಿಯುತ್ತಿರಲಿಲ್ಲ. ಅದು ಸಾಮಾನ್ಯ ನೆಗಡಿ ಜ್ವರ ಆದ್ರೋ ವರದಿ ಬರೋವರೆಗೂ ಭಯಭೀತರಾಗಿಯೇ ಇರ್ತಾ ಇದ್ವಿ.

[widget id=”custom_html-4″]

Advertisements

ಆದ್ರೆ, ದಿನಕಳೆದಂತೆ ಹೊಸ ಹೊಸ ಸಂಶೋಧನೆಗಳು ಬೆಳಕಿಗೆ ಬಂದ್ವು. ಒಂದೇ ಗಂಟೆಯಲ್ಲಿ ವರದಿ ನೀಡುವಂತಹ ಆಂಟಿಜೆನ್ ಟೆಸ್ಟ್ ಕೂಡ ಬಂತು. ಈಗ ಮತ್ತೊಂದು ಸಂತೋಷದ ವಿಷಯವನ್ನು ಅಮೆರಿಕಾದ ಎಂಐಟಿ, ಹಾರ್ವರ್ಡ್ ವಿಶ್ವವಿದ್ಯಾಲಯದವರು ಕೊಟ್ಟಿದ್ದಾರೆ,. ಭವಿಷ್ಯದಲ್ಲಿ ಕೋವಿಡ್ ಟೆಸ್ಟ್ ಗೆ ಅದುವೇ ಪ್ರಮುಖ ವಿಧಾನ ಅದ್ರೋ ಅಚ್ಚರಿ ಇಲ್ಲ. ಅಷ್ಟಕ್ಕೂ ಅದು ಏನು ಅನ್ನೋದನ್ನು ಹೇಳ್ತೀವಿ ನೋಡಿ. ಹೌದು, ಅಂತಹ ಒಂದು ಆಶಾ ಭಾವನೆ ಚಿಗುರೊಡೆಸಿದ್ದು, ಈ ಸಂಶೋಧನೆ. ತುಂಬಾ ಕಡಿಮೆ ಮೆಚ್ಚದಲ್ಲಿಯೇ ಫಲಿತಾಂಶ ಪಡೆಯಬಹುದಾದ ಟೆಸ್ಟ್ ಇದು ಅನ್ನುತಾರೆ ಸಂಶೋಧಕರು. ಈ ಟೆಸ್ಟ್ ಗೆ ನೀವು ಸ್ಯಾಂಪಲ್ ಕೊಟ್ಟು ದಿನಗಟ್ಟಲೇ ಕಾಯುವ ಪರಿಸ್ಥಿತಿಯ ಅಗತ್ಯವೇ ಇಲ್ಲ. ಆಸ್ಪತ್ರೆಗೂ ಹೋಗಬೇಕಾಗಿ ಇಲ್ಲ. ಹಾಗಾದ್ರೆ ಆ ಸಂಶೋಧನೆ ಏನು? ನಾವು ಎಲ್ಲರೂ ಮನೆ ಬಿಟ್ಟು ಹೊರಡುವಾಗ ಮಾಸ್ಕ್ ಧರಿಸಿಯೇ ಹೊರಡುತ್ತೇವೆ. ಒಮ್ಮೆ ಮಾಸ್ಕ್ ಧರಿಸಿಲ್ಲ ಅಂದ್ರೆ ದಂಡ ಬೀಳೋದು ಗ್ಯಾರಂಟಿ. ಇದು ನಮ್ಮ ರಾಷ್ಟ್ರವೊಂದರ ಕಥೆಯಲ್ಲ. ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿಯೂ ಇದೆ ಕಥೆ. ಕೆಲವೇ ತಿಂಗಳ ಹಿಂದೆ ಮಾಸ್ಕ್ ಧರಿಸುವ ಅಗತ್ಯ ಇಲ್ಲ ಅಂತ ಘೋಷಿಸಿದ್ದ ಇಸ್ರೇಲ್ ಈಗ ಮತ್ತೆ ಮಾಸ್ಕ್ ಕಡ್ಡಾಯ ಮಾಡಿದೆ.

[widget id=”custom_html-4″]

ಯಾಕಂದ್ರೆ ಸೋಂಕು ಹರಡುವುದನ್ನು ತಡೆಯಲು ಇರುವಂತಹ ಪ್ರಮುಖ ಮಾರ್ಗವೇ ಮಾಸ್ಕ್ ಧರಿಸುವಂತಹದ್ದು. ಆದ್ರೆ, ಇದೇ ಮಾಸ್ಕ್ ನಲ್ಲಿ ನೀವು ಈಗ ಕೋವಿಡ್ ಟೆಸ್ಟ್ ಮಾಡಿಕೊಳ್ಳಬಹುದು. ಅಂತಹ ಒಂದು ಸಂತೋಷದ ಸುದ್ದಿ ನೀಡಿರುವುದು ಹಾರ್ವರ್ಡ್ ವಿವಿ. ಕೇವಲ 90 ನಿಮಿಷ ಮಾಸ್ಕ್ ಧರಿಸಿದ್ರೆ ಸಾಕು ಸೋಂಕು ಇದೆಯೋ? ಇಲ್ಲವೋ ಅನ್ನೋದನ್ನು ಖಚಿವಾಗಿ ಪತ್ತೆಯಾಗಿ ಬಿಡುತ್ತೆ. ಇದು ವಿಜ್ಞಾನಿಗಳ ಸಂಶೋಧನೆ. ಜೈವಿಕ ಸೆನ್ಸರ್‍ಗಳನ್ನು ಘನೀಕೃತಗೊಳಿಸಲಾಗಿದೆ. ಅದನ್ನು ಒಣಗಿಸಿ ಮಾಸ್ಕ್ ಒಳಗೆ ಅಂಟಿಸಿರುತ್ತಾರೆ. ಅದನ್ನು ಅಳವಡಿಸಿರುವಲ್ಲಿಯೇ ಒಂದು ಚಿಕ್ಕ ಬಟನ್ ನೀಡಲಾಗಿರುತ್ತೆ. ಮಾಸ್ಕ್ ಹಾಕಿಕೊಳ್ಳುವಾಗ ಆ ಬಟನ್ ಪ್ರೆಸ್ ಮಾಡಬೇಕು. ಹಾಗೆ ಪ್ರೆಸ್ ಮಾಡಿದ ಮೇಲೆ 90 ನಿಮಿಷಗಳ ಕಾಲ ಮಾಸ್ಕ್ ಧರಿಸಿಕೊಂಡೆ ಇರಬೇಕು. ಆ ಸಂದರ್ಭದಲ್ಲಿ ನಮ್ಮ ಉಸಿರಾಟದ ಮೂಲಕ ಹೊರಹೊಮ್ಮುವ ಕಣಗಳನ್ನು ಸೆನ್ಸರ್ ಅಧ್ಯಯನ ಮಾಡುತ್ತೆ. 90 ನಿಮಿಷಗಳ ನಂತರ ಮಾಸ್ಕ್ ಹೊರ ತೆಗೆದಾಗ ಕೊರೊನಾ ಪಾಸಿಟಿವ್ ಇದೆಯೋ, ನೆಗೆಟಿವ್ ಇದೆಯೋ ಅನ್ನೋದು ಅಳವಡಿಸಿರುವ ಸೆನ್ಸರ್‍ನಲ್ಲಿಯೇ ಗೊತ್ತಾಗಿ ಬಿಡುತ್ತೆ. ಈ ಸಂಶೋಧನೆ ಮಾಡಿರುವ ಮಾಸ್ಕ್ ಆರ್‍ಟಿಪಿಸಿಆರ್ ಟೆಸ್ಟ್ ನಷ್ಟೇ ಖಚಿತ ಮತ್ತು ಆಂಟಿಜೆನ್‍ನಷ್ಟೇ ವೇಗ ಹೊಂದಿದೆ. ಇದೊಂದು ಬಹು ಉಪಯೋಗಿ ಮಾಸ್ಕ್ ಆಗಿ ಬಿಟ್ಟಿದೆ. ವೈದ್ಯಕೀಯ ಕ್ಷೇತ್ರಕ್ಕೆ ಹೊಸ ಆಶಾ ಕಿರಣವಾಗಿ ಕಾಣಿಸುತ್ತಿದೆ.

[widget id=”custom_html-4″]

ಯಾಕಂದ್ರೆ ಅದರ ಉಪಯೋಗವೇ ಹಾಗಿದೆ ನೋಡಿ. ಈ ಮಾಸ್ಕ್ ನಲ್ಲಿ ಕೇವಲ ಕೊರೊನಾ ಸೋಂಕು ಪತ್ತೆ ಮಾಡುವುದಲ್ಲ, ಬೇರೆ ಬೇರೆ ರೀತಿಯ ವೈರಸ್, ಬ್ಯಾಕ್ಟೀರಿಯಾಗಳನ್ನು ಪತ್ತೆ ಮಾಡಬಹುದು. ವೈದ್ಯರು ರೋಗಿಗೆ ಯಾವ ಸೋಂಕು ತಗುಲಿದೆ ಅನ್ನೋದನ್ನು ಸುಲಭವಾಗಿ ಗೊತ್ತು ಮಾಡಬಹುದು. ಅದಕ್ಕೆ ಬೇಕಾದ ಚಿಕಿತ್ಸೆಯನ್ನು ಆರಂಭಿಸಲು ವೈದ್ಯರಿಗೆ ನೆರವಾಗುತ್ತೆ. ಹೌದು, ವಿಜ್ಞಾನಿಗಳು ಸಂಶೋಧಿಸಿದ ಮಾಸ್ಕ್ ದುಬಾರಿಯಾಗಿರುತ್ತೆ. ಅದನ್ನು ಬಳಸುವುದು ಕಷ್ಟ. ಅದು ಅಷ್ಟು ಸುಲಭದಲ್ಲಿ ಸಿಗಲ್ಲ ಅನ್ನೋ ಭಾವನೆ ಬೇಡವೇ ಬೇಡ. ಇನ್ನೂ ಮಾರುಕಟ್ಟೆಗೆ ಬರದಿದ್ದರೂ ಅದು ಕಡಿಮೆಯ ದರದಾಗಿರುತ್ತೆ ಅನ್ನೋದನ್ನು ವಿಜ್ಞಾನಿಗಳೇ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಸೆನ್ಸರ್ ಅನ್ನು ದುಬಾರಿ ಮಾಸ್ಕ್ ನಲ್ಲಿ ಅಷ್ಟೇ ಅಲ್ಲ, ನಾವು ಧರಿಸುವ ಬಟ್ಟೆ ಮಾಸ್ಕ್ ನಲ್ಲಿಯೂ ಅಳವಡಿಸಿಕೊಳ್ಳಬಹುದಂತೆ. ಆ ಮೂಲಕವೂ ಫಲಿತಾಂಶ ಪಡೆಯಬಹುದಂತೆ. ಇದು ಬಹು ಮುಖ್ಯವಾಗಿ ಉಪಯೋಗಕ್ಕೆ ಬರುವುದು ಕೋವಿಡ್ ವಾರಿಯರ್ಸ್‍ಗೆ. ಪ್ರತಿನಿತ್ಯ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವಂತಹ ವೈದ್ಯರು, ದಾದಿಯರು ಉಳಿದಂತೆ ಆಶಾ ಕಾರ್ಯಕರ್ತೆಯರು, ಭದ್ರತಾ ಸಿಬ್ಬಂದಿಗೂ ತುಂಬಾ ಉಪಯೋಗಕಾರಿ. ಹೀಗಾಗಿ, ಈ ಮಾಸ್ಕ್ ಆದಷ್ಟು ಬೇಗ ಮಾರುಕಟ್ಟೆಗೆ ಬರಬೇಕು, ಜನಸಾಮಾನ್ಯರಿಗೆ ಉಪಯೋಗ ಆಗುವಂತಾಗಬೇಕು.