ಮಗನಿಗಾಗಿ ಬರೋಬ್ಬರಿ 280ಕಿಮೀ ಸೈಕಲ್ ತುಳಿದು ದೊಡ್ಡ ಸಾಹಸವನ್ನೇ ಮಾಡಿದ ತಂದೆ ! ನಿಜಕ್ಕೂ ಇದು ಗ್ರೇಟ್ ಅಂದ್ರೆ..

Kannada News
Advertisements

ಸ್ನೇಹಿತರೇ, ಈ ಕೊ’ರೋನಾದ ಕಾರಣದಿಂದಾಗಿ ಕರ್ನಾಟಕ ಸೇರಿದಂತೆ ಭಾರತದ ಬಹುತೇಕ ರಾಜ್ಯಗಳಲ್ಲಿ ಲಾಕ್ ಡೌನ್ ಮಾಡಲಾಗಿದೆ. ಅಗತ್ಯ ಸೇವೆಗಳಿಗಾಗಿ ಸರ್ಕಾರಗಳು ಸೂಚಿಸಿದ ಸಮಯ ಬಿಟ್ಟು ಸಾರ್ವಜನಿಕರು ಮನೆಯಿಂದ ಹೊರಗೆ ಬರುವಂತಿಲ್ಲ. ಇನ್ನು ಇಂತಹ ಸಮಯದಲ್ಲಿ ದೂರದ ಪ್ರಯಾಣ ಮಾಡುವುದಂತೂ ಅಸಾಧ್ಯವಾಗಿದೆ. ಹೊರಗಡೆ ಇಂತಹ ಕಠಿಣ ಪರಿಸ್ಥಿತಿ ಇರುವಾಗ ತಂದೆಯೊಬ್ಬರಿಗೆ ತನ್ನ ಮಗನಿಗೆ ಬೇಕಾದ ಔಷಧಿ ತರುವ ಸಲುವಾಗಿ ಅವರ ಗ್ರಾಮದಿಂದ ಬರಿಯೊಬ್ಬರಿ 280ಕಿಮೀ ಇರೋ ಬೆಂಗಳೂರಿಗೆ ಹೋಗಲೇಬೇಕಾದ ಪರಿಸ್ಥಿತಿ ಎದುರಾಗಿದ್ದು, ಮಗನಿಗೋಸ್ಕರ ಆ ತಂದೆ ದೊಡ್ಡ ಸಾಹಸವನ್ನೇ ಮಾಡಬೇಕಾಯಿತು. ಹಾಗಾದ್ರೆ ಮಗನಿಗೆ ಮೆಡಿಸನ್ ತರುವುದೋಕೋಸ್ಕರ ತಂದೆಯಾದವನು ಮಾಡಿದಾದ್ರು ಏನು ಗೊತ್ತಾ ?

[widget id=”custom_html-4″]

Advertisements

ಹೌದು, ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಆನಂದ್ ಈ ವ್ಯಕ್ತಿ ತನ್ನ ಮಗನ ಔಷಧಿಗೋಸ್ಕರ ೨೮೦ಕಿಮೀ ಅಂತರ ಇರೋ ಬೆಂಗಳೂರಿಗೆ ಪ್ರಯಾಣ ಮಾಡಬೇಕಾದ ಸಂದರ್ಭ ಎದುರಾಗಿದೆ. ಇನ್ನು ಆನಂದ್ ಅವರ ಮಗ ಮಾನಸಿಕವಾಗಿ ವಿಶೇಷ ಚೇತನರಾಗಿರುವ ಕಾರಣ ಅದಕ್ಕಾಗಿ ಕಳೆದ ಒಂಬತ್ತು ವರ್ಷಗಳಿಂದ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತಿತ್ತು. ಆದರೆ ಲಾಕ್ ಡೌನ್ ಆಗಿರೋ ಇದೆ ವೇಳೆ ಮಗನಿಗೆ ಕೊಡಬೇಕಾದ ಔಷಧಿ ಖಾಲಿಯಾಗಿದ್ದು ಅದನ್ನ ತರುವ ಸಲುವಾಗಿ ಬೆಂಗಳೂರಿಗೆ ಹೋಗಲೆಂದು ವಾಹನಕ್ಕಾಗಿ ವಿಚಾರಿಸಿದಾಗ ಲಾಕ್ ಡೌನ್ ಇರೋ ಕಾರಣ ಯಾರು ಬೆಂಗಳೂರಿಗೆ ಬರಲು ಒಪ್ಪಿರಲಿಲ್ಲ.

[widget id=”custom_html-4″]

ಆಗ ಬೇರೆ ದಾರಿ ಕಾಣದೆ, ತಂದೆ ಆನಂದ್ 280ಕಿಮೀ ದೂರವಿರುವ ಬೆಂಗಳೂರಿಗೆ ಸೈಕಲ್ ತುಳಿದುಕೊಂಡೇ ಹೋಗಬೇಕೆಂದು ದಿಟ್ಟ ನಿರ್ಧಾರ ಮಾಡಿ, ಅದೇ ರೀತಿ ಸೈಕಲ್ ನಲ್ಲೆ ಬೆಂಗಳೂರಿಗೆ ಹೋಗಿ ಮಗನಿಗೆ ಬೇಕಾದ ಔಷಧವನ್ನ ಕೊಂಡು ತರುತ್ತಾರೆ. ಎರಡು ತಿಂಗಳಿಗೆ ಒಮ್ಮೆ ಮಗನಿಗೆ ಬೆಂಗಳೂರಿನಿಂದ ಔಷಧಿ ತರಲೇಬೇಕಾದ ಪರಿಸ್ಥಿತಿ ಇದೆ ಎಂದು ತಂದೆ ಆನಂದ್ ಹೇಳಿದ್ದಾರೆ. ಇನ್ನು ಆನಂದ್ ಅವರು ಹೇಳುವಂತೆ ಮಗನಿಗೆ ೧೮ವರ್ಷ ಆಗುವವರೆಗೂ ತಪ್ಪದೇ ಈ ಔಷಧಿಯನ್ನ ಕೊಡಲೇಬೇಕಾದ ಪರಿಸ್ಥಿತಿ ಇದೆಯಂತೆ. ಇನ್ನು ಇದು ಸ್ಥಳೀಯ ಮೆಡಿಕಲ್ ಸ್ಟೋರ್ ಅಥ್ವಾ ಆಸ್ಪತ್ರೆಗಳಲ್ಲಿ ಸಿಗೋದಿಲ್ಲವಂತೆ. ಹಾಗಾಗಿ ಮಗನಿಗೋಸ್ಕರ ಆನಂದ್ ಅವರು ದೊಡ್ಡ ಸಾಹಸವನ್ನೇ ಮಾಡಿದ್ದಾರೆ. ತಂದೆ ತಾಯಿಗಳು ತಮ್ಮ ಮಕ್ಕಳಿಗೋಸ್ಕರ ಏನು ಬೇಕಾದ್ರು ಮಾಡುತ್ತಾರೆ ಎಂಬುದಕ್ಕೆ ಇದೊಂದು ನೈಜ ಉದಾಹರಣೆ.