ಕೊನೆಗೂ ಬಂತು ಆಗಸದಲ್ಲಿ ಹಾರಾಡುವ ಕಾರ್ !ಭೂಮಿ ಮತ್ತು ಆಕಾಶ ಎರಡರಲ್ಲೂ ಚಲಿಸುತ್ತೆ ಈ ಸೂಪರ್ ಕಾರ್..

Kannada Mahiti
Advertisements

ಆಕಾಶದಲ್ಲಿ ಇನ್ಮುಂದೆ ಹಾರಾಡಲು ವಿಮಾನವೇ ಬೇಕಾಗಿಲ್ಲ. ಹೆಲಿಕಾಪ್ಟರ್ ಕೂಡ ಬೇಕಾಗಿಲ್ಲ. ಇಬ್ಬರು ಆರಾಮಾಗಿ ಒಂದು ರೌಂಡ್ ಹೋಗಿ ಬರಬೇಕು ಅಂದ್ರೆ ಈಗ ಹೊಸದೊಂದು ಕಾರು ಬಂದಿದೆ. ಅದೇ ಫ್ಲೈಯಿಂಗ್ ಕಾರ್. ಈ ಏರ್ ಕಾರ್ ಹೇಗಿದೆ, ಅದ್ರ ವಿಶೇಷತೆ ಏನು ಅನ್ನೋದನ್ನು ಹೇಳ್ತೀವಿ..ಇಲ್ಲಿ ಹಾರಾಡ್ತೋ ಇರೋದು ದೊಡ್ಡ ಡ್ರೋಣ್ ಅಲ್ಲ. ಸಣ್ಣ ಹೆಲಿಕಾಪ್ಟರ್ ಕೂಡ ಅಲ್ಲ. ಇದು ಏರ್ ಕಾರ್. ಹೌದು. ಎಲ್ಲಿ ಬೇಕಾದರೂ ಹಾರಾಡಬಲ್ಲದು ಈ ಏರ್ ಕಾರ್. ಇದನ್ನು ಫ್ಲೈಯಿಂಗ್ ಕಾರು ಅಂತಾ ಕರೀತಾರೆ. ಇದನ್ನು ಕಂಪನಿಯೊಂದು ರೆಡಿ ಮಾಡಿದೆ. ಇನ್ನೇನು ಮಾರಾಟಕ್ಕೂ ಸಿದ್ಧವಾಗ್ತಾ ಇದೆ. ಇನ್ನು ಆಕಾಶದಲ್ಲಿ ಹಾರಾಡಬೇಕು, ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕು ಅಂದ್ರೆ ಹೆಲಿಕಾಪ್ಟರ್,ಟ್ರೇನ್, ಫ್ಲೈಟ್ ಬೇಕಾಗಿಲ್ಲ. ಇನ್ಮುಂದೆ ಇಬ್ಬರು ಜೊತೆಗೂಡಿ ಈ ಫ್ಲೈಯಿಂಗ್ ಕಾರು ತೆಗೆದುಕೊಂಡು ಹೊರಟು ಬಿಡಬಹುದು. ಬಹುಷಃ ಇನ್ನಷ್ಟು ವರ್ಷಗಳು ಕಳೆದರೆ ಇಂತಹ ಕಾರುಗಳ ಸಂಖ್ಯೆಯೇ ಜಾಸ್ತಿಯಾಗಿ ಆಕಾಶದಲ್ಲೂ ಕಾರುಗಳು ಡಿಕ್ಕಿ ಆಗಬಹುದು. ಏರ್ ಟ್ರಾಫಿಕ್ ಕಂಟ್ರೋಲರ್ ವ್ಯಾಪ್ತಿಗೆ ಈ ಫ್ಲೈಯಿಂಗ್ ಕಾರು ಕೂಡ ಸೇರಿಕೊಳ್ಳಬಹುದು. ಭೂಮಿಯಿಂದ ಸಾಕಷ್ಟು ಮೇಲೆ ಹಾರಾಡುತ್ತಾ ನಿಮ್ಮನ್ನು ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೆ ಅರಾಮಾಗಿ ಶರವೇಗದಲ್ಲಿ ತಲುಪಿಸಿ ಬಿಡುತ್ತೆ. ವಿಶ್ವದಲ್ಲಿ ಆಟೊ ಮೊಬೈಲ್ ತಂತ್ರಜ್ಞಾನ ಸಿಕ್ಕಾಪಟ್ಟೆ ಮುಂದುವರಿದಿದೆ.

[widget id=”custom_html-4″]

Advertisements

ಆದ್ರೆ ಈ ರೀತಿಯ ಹೊಸ ಪ್ರಯೋಗ, ಹೊಸ ರೀತಿಯ ಆವಿಷ್ಕಾರಗಳು ನಡೆದಾಗ ವಿಶೇಷವಾಗಿ ಗಮನ ಸೆಳೆಯುತ್ತವೆ. ಹಾಲಿವುಡ್ ಸಿನಿಮಾಗಳಲ್ಲಿ ಹಾರುವ ಕಾರುಗಳ ರೀಲ್ ದೃಶ್ಯಗಳನ್ನು ತೋರಿಸಲಾಗ್ತಿತ್ತು. ಈ ದೃಶ್ಯವನ್ನು ನೋಡಿದ ವೀಕ್ಷಕರು, ನಿಜ ಜೀವನದಲ್ಲಿಯೂ ಹಾರುವ ಕಾರ್ ಗಳಲ್ಲಿದ್ರೆ ಎಷ್ಟೊಂದು ಸುಂದರವಾಗಿರುತ್ತಲ್ವಾ ಎಂದು ಕನಸು ಕಂಡಿದ್ರು. ಇದೀಗ ಆ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತ ಎಲ್ಲಿಗೆ ಬೇಕೋ ಅಲ್ಲಿಗೆ ಮಿಂಚಿನ ವೇಗದಲ್ಲಿ ತಲುಪುವ ಕಾಲ ಹತ್ತಿರವಾಗಿದೆ. ಕಳೆದ ಕೆಲ ವರ್ಷಗಳಿಂದ ತಂತ್ರಜ್ಷಾನ ವಯಲಗಳಲ್ಲಿ ಅದೊಂದು ಮಾತು ಕೇಳತ್ತಲೇ ಇತ್ತು. ಆದ್ರೆ ಅದ್ಕೆ ಕೊರೊನಾ ಸೇರಿದಂತೆ ಹಲವು ಅಡೆತಡೆಗಳು ಎದುರಾಗಿದ್ದವು. ಆದ್ರೆ ಇದೀಗ ಆ ಕಾಲ ಸನ್ನಿಹಿತವಾಗಿದೆ. ಇದ್ರಿಂದ 20 ವರ್ಷಗಳ ಪ್ರಯತ್ನಕ್ಕೆ ಇದೀಗ ಫಲ ಸಿಕ್ಕಿದಂತ್ತಾಗಿದೆ. ಇದೀಗ ಸ್ಲೋವಾಕಿಯೋ ದೇಶವು ಮತ್ತೊಂದು ಅಚ್ಚರಿಯ ಆವಿಷ್ಕಾರ ಮಾಡುವ ಮೂಲಕ ತಂತ್ರಜ್ಷಾನ ಕ್ಷೇತ್ರದಲ್ಲಿ ಹೊಸತನ ಸೃಷ್ಠಿಸಿದೆ. ನೆಲದ ಮೇಲೆ ಶರವೇಗದಲ್ಲಿ ಚಲಿಸಿ ನಂತರ ನಿಧಾನವಾಗಿ ರೆಕ್ಕೆಗಳನ್ನು ಬಿಟ್ಟ ಹಾರಾಡ್ತಿದೆ ನೋಡಿ. ಮೇಲ್ನೋಟಕ್ಕೆ ಇದು ಹೆಲಿಕಾಫ್ಟರ್ ತರ ಕಾಣುತ್ತಿದೆ. ಆದ್ರೆ ಇದು ಹೆಲಿಕಾಫ್ಟರ್ ಕೂಡ ಅಲ್ಲ, ಡ್ರೋನ್ ಕೂಡ ಅಲ್ಲ. ಇದು ಸ್ಲೋವಾಕಿಯಾದ ಪ್ರಸಿದ್ಧ ಕಂಪನಿ ಕ್ಲೈನ್ ​​ವಿಷನ್ ಸಿದ್ದಪಡಿಸಿರುವ ಸ್ಪೆಷಲ್ ಕಾರ್ ಇದು. ಆರಂಭದಲ್ಲಿ ಕಾರ್ ತರ ಕಾಣಿಸಿಕೊಂಡ್ರು ಕೇವಲ ಎರಡೇ ನಿಮಿಷಲ್ಲಿ ತನ್ನ ಸ್ವರೂಪವನ್ನ ವಿಮಾನವಾಗಿ ಪರಿವರ್ತಿಸಿಕೊಳ್ಳುತ್ತೆ.

[widget id=”custom_html-4″]

ವಿಮಾನದ ರೂಪ ತಾಳಿದ ಮೇಲೆ ಮತ್ತೆ ಮೂರೇ ನಿಮಿಷದಲ್ಲಿ ಮತ್ತೆ ಕಾರಿನ ರೂಪ ಪಡೆದುಕೊಳ್ಳುತ್ತೆ.. ಇದು ನಿಮಗೆ ವಿಸ್ಮಯ ಅನಿಸಿದ್ರು ಅಚ್ಚರಿ ಇಲ್ಲ. ಈ ಕಾರು ರನ್ ವೇ ಮೂಲಕ ಕ್ರಮಿಸಿ ನಂತರ 2.15 ನಿಮಿಷದಲ್ಲಿ ಆಕಾಶಕ್ಕೆ ಜಿಗಿಯುತ್ತೆ. ಅಲ್ಲೆ ಕೆಲ ಸಯಮ ಹಾರಾಡಿ ಮತ್ತೆ ಭೂಮಿಗೆ ಇಳಿದು ಮತ್ತೆ ಕಾರಿನ ರೂಪ ಪಡೆದುಕೊಳ್ಳುತ್ತೆ. ಈ ಫ್ಲೈಯಿಂಗ್ ಕಾರ್‌ನ ಮೊದಲ ಐತಿಹಾಸಿಕ ಹಾರಾಟವನ್ನು ಕ್ಲೈನ್ ​​ವಿಷನ್‌ನ ಸ್ಥಾಪಕ ಮತ್ತು ಸಿಇಒ ಸ್ಟೀಫನ್ ಕ್ಲೈನ್ ​​ನಿರ್ವಹಿಸಿದ್ದಾರೆ. ಸ್ಲೋವಾಕಿಯಾದ ನಿಟ್ರಾ ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಲೋವಾಕಿಯಾದ ಬ್ಲಾಟಿಸ್ಲಾವ ನಗರದ ವಿಮಾನದ ನಿಲ್ದಾಣದ ನಡುವೆ ಇದನ್ನು ಪರೀಕ್ಷಾರ್ಥ ಹಾರಾಟ ನಡೆಸಲಾಗಿದೆ. ಈ ಎರಡು ನಗರಳ ನಡುವೆ ಇದ್ದ ಒಂದುವರೆಗೆ ಗಂಟೆಯ ಅವಧಿಯ ಪ್ರಯಾಣವನ್ನು ಕೇಲವಲ 35 ನಿಮಿಷದಲ್ಲಿ ತಲುಪಿದೆ. ವಿಮಾನ ನಿಲ್ದಾಣದಲ್ಲಿ ಇಳಿದ ನಂತರ, ಸ್ಟೀಫನ್ ಕ್ಲೈನ್ ಅವರು ತಮ್ಮ ಏರ್‌ಕಾರನ್ನು ಸಾಮಾನ್ಯ ಕಾರಿನಂತೆ ಸುಮಾರು ಮೂರು ನಿಮಿಷಗಳ ಕಾಲ ನಗರದೊಳಗೆ ಓಡಿಸಿದ್ದಾರೆ. ಈ ಏರ್‌ಕಾರ್ ಹಲವು ವಿಶೇಷತೆಗಳನ್ನ ಹೊಂದಿದೆ. ಫ್ಲೈಯಿಂಗ್ ಕಾರ್ ಭೂಮಿ ಮತ್ತು ಗಾಳಿ ಎರಡರಲ್ಲೂ ಚಲಿಸುವ ಸಾಮರ್ಥ್ಯ ಹೊಂದಿದೆ. ಈ ಏರ್‌ಕಾರ್, ಬಿಎಂಡಬ್ಲ್ಯು ಎಂಜಿನ್ ಹೊಂದಿದ್ದು, ಸಾಮಾನ್ಯ ಪೆಟ್ರೋಲ್ ಬಳಸಬಹುದಾಗಿದೆ. ಈ ಏರ್ ಕಾರ್ ನಲ್ಲಿ 16 ಅಶ್ವ ಶಕ್ತಿಯ ಬಿಎಂಡಬ್ಲ್ಯೂ ಕಾರಿನ ಇಂಜಿನ್ ಬಳಕೆ ಮಾಡಲಾಗಿದೆ. 8200 ಅಡಿ ಎತ್ತರದಲ್ಲಿ 1000 ಕಿಲೋ ಮೀಟರ್ ದೂರ ಹಾರಾಡುವ ಸಾಮರ್ಥ್ಯ ಹೊಂದಿದೆ.

[widget id=”custom_html-4″]

ಅಲ್ಲದೇ ಈ ಏರ್ ಕಾರ್ ಗರಿಷ್ಠ 170 ರಿಂದ 190 ಕಿಲೋ ಮೀಟರ್ ವೇಗದಲ್ಲಿ ಹಾರಾಟ ಮಾಡಬಲ್ಲದು. ಈ ಏರ್ ಕಾರ್ ಇಬ್ಬರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಇದು ಮಹತ್ವಾಕಾಂಕ್ಷೆಯ ಪ್ರಯತ್ನ. ಈ ಏರ್‌ಕಾರ್‌ನ ಮೂಲಮಾದರಿಯು ಎರಡು ದಶಕದ ಕಠಿಣ ಪರಿಶ್ರಮದ ನಂತರ ಅಸ್ತಿತ್ವಕ್ಕೆ ಬಂದಿದೆ.ಈ ಫ್ಲೈಯಿಂಗ್ ಕಾರ್ ಇದುವರೆಗೆ 140 ಕ್ಕೂ ಹೆಚ್ಚು ಪರೀಕ್ಷಾ ಹಾರಾಟಗಳನ್ನು ಪೂರ್ಣಗೊಳಿಸಿದೆ. ಕೇವಲ ಗುಂಡಿಯನ್ನು ಒತ್ತುವ ಮೂಲಕ ಈ ಕಾರನ್ನು ವಿಮಾನವಾಗಿ ಪರಿವರ್ತಿಸಬಹುದು. ಈ ಪ್ರಕ್ರಿಯೆಯು ಕೇವಲ 135 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಈ ಹಾರುವ ಕಾರು ದ್ವಿ ಸಾರಿಗೆ ವಾಹನಗಳ ಹೊಸ ಯುಗಕ್ಕೆ ನಾಂದಿ ಹಾಡಲಿದೆ.ಕ್ಲೈನ್ ಕಂಪನಿಯು ಮತ್ತೊಂದು ಹೊಸ ಆವಿಷ್ಕಾರಕ್ಕೆ ಸಿದ್ಧತೆ ನಡೆಸಿದೆ. ಏರ್ ಕಾರ್ ಪ್ರೋಟೋಪೈಪ್ 2 ಇದ್ಕಿಂತಲೂ ಹೆಚ್ಚು ಸಾಮರ್ಥ್ಯ ಹೊಂದಿರುವ ಕಾರನ್ನ ಸಿದ್ದಪಡಿಸಲು ಕಂಪನಿ ರೆಡಿಯಾಗಿದೆ. 300 ಹಾರ್ಸ್ ಪವರ್ ಇಂಜಿನಿ ಸಾಮರ್ಥ್ಯದ ಮತ್ತೊಂದು ಕಾರನ್ನು ಸಿದ್ಧಪಡಿಸಲು ಮುಂದಾಗಿದ್ದಾರೆ. ವಾಣಿಜ್ಯವಾಗಿ ಏರ್ ಕಾರ್ ಉತ್ಪಾದನೆಗೆ ಅನುಮೋದನೆ ದೊರಕುವ ಸಾಧ್ಯತೆ ಇದೆ. ಇದ್ರಿಂದ ಇವು ಶೀಘ್ರವಾಗಿ ಮಾರು ಕಟ್ಟೆಗೆ ಕೂಡ ಬರಲಿದೆ. ಈ ಆಧುನಿಕ ಯುಗದಲ್ಲಿ ಜನ ಕೆಲಸಗಳು ಸರಳವಾಗಿ ವೇಗವಾಗಿ ನಡೆಯಬೇಕೆಂದು ಅಂದ್ಕೊಳ್ಳುವುದು ಕಾಮನ್. ದಿನನಿತ್ಯ ಟ್ರಾಫಿಕ್ ಎಂಬ ಸಾಗರವನ್ನ ದಾಟುವುದೇ ಜನರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಮುಂದೊಂದು ದಿನ ಬೆಂಗಳೂರಿನಂತಹ ಮಹಾ ನಗರಗಳಿಗೆ ಇಂತಹ ಕಾರ್ ಎಂಟ್ರಿ ಕೊಟ್ರೆ, ಸ್ಥಿತವಂತರು ಇಂತಹ ಕಾರುಗಳನ್ನು ತಮ್ಮದಾಗಿಸಿಕೊಳ್ಳಬಹುದು.