ನಮಸ್ತೇ ಸ್ನೇಹಿತರೇ, ಸಿನಿಮಾಗಳಿಗಿಂತ ಧಾರಾವಾಹಿಗಳನ್ನ ನೀಡುವವರು ಈಗ ಹೆಚ್ಚಾಗಿದ್ದಾರೆ. ಜೊತೆಗೆ ಕಿರುತೆರೆ ಕಲಾವಿದರಿಗೂ ಕೂಡ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ಧಾರಾವಾಹಿಗಳನ್ನ ಪ್ರತೀ ದಿನ ತಪ್ಪದೆ ನೋಡುವವರು ಸಂಖ್ಯೆಯೂ ಕೂಡ ಈಗ ಹೆಚ್ಚಾಗಿದೆ. ಅದರಲ್ಲೂ ‘ಜೊತೆ ಜೊತೆಯಲಿ’ ಸೀರಿಯಲ್ ಬಂದಮೇಲೆ ಯುವಕರಿಂದ ಹಿಡಿದು ಮುದುಕರವರೆಗೂ ಧಾರಾವಾಹಿಗಳನ್ನ ನೋಡುತ್ತಿದ್ದಾರೆ. ಇನ್ನು ಸೀರಿಯಲ್ ಗಳಲ್ಲಿ ನಟಿಸುವ ನಟ ನಟಿಯರಿಗೆ ಕೊಡುವ ಸಂಭಾವನೆ ಬಗ್ಗೆ ವೀಕ್ಷಕರಲ್ಲಿ ಕುತೂಹಲವಂತೂ ಇದ್ದೆ ಇದೆ.
ಕ್ನನಡದ ಖಾಸಗಿ ವಾಹಿನಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳಲ್ಲಿ ನಟ ಅನಿರುದ್ದ್ ಅಭಿನಯದ ‘ಜೊತೆ ಜೊತೆಯಲಿ’ ಹಾಗೂ ‘ಗಟ್ಟಿಮೇಳ’ ತುಂಬಾ ಫೇಮಸ್ ಆದ ಸೀರಿಯಲ್ ಗಳಾಗಿವೆ. ಈ ಧಾರಾವಾಹಿಗಳನ್ನ ಪ್ರತೀ ದಿನ ತಪ್ಪದೆ ನೋಡುವ ವೀಕ್ಷಕರು ಇದ್ದಾರೆ. ಇನ್ನು ಗಟ್ಟಿಮೇಳ ಧಾರಾವಾಹಿಯಂತೂ ಟಿಆರ್ಪಿ ರೇಟಿಂಗ್ ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಗಟ್ಟಿಮೇಳ ಧಾರಾವಾಹಿಯಲ್ಲಿ ಬರುವ ವೇದಾಂತ್ ಹಾಗೂ ಅಮೂಲ್ಯ ಪಾತ್ರಗಳಂತೂ ದಿನದಿಂದ ದಿನಕ್ಕೆ ಹೆಚ್ಚೆಚ್ಚು ವೀಕ್ಷಕರನ್ನ ಸೆಳೆಯುತ್ತಲೇ ಇದೆ.

ಇನ್ನು ಇವರು ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಬಗ್ಗೆ ಹೇಳುವುದಾದರೆ ವೇದಾಂತ್ ಪಾತ್ರದಲ್ಲಿ ನಟಿಸಿರುವ ರಕ್ಷ್ ಒಂದು ಎಪಿಸೋಡ್ ಗೆ ಬರೋಬ್ಬರಿ 15 ಸಾವಿರ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗಿದೆ. ಇನ್ನು ಅಮೂಲ್ಯ ಪಾತ್ರದಲ್ಲಿ ಮಿಂಚಿರುವ ನಟಿ ನಿಶಾ ಒಂದು ಎಪಿಸೋಡ್ ಗೆ 13 ಸಾವಿರ ರೂಗಳನ್ನ ಸಂಭಾವನೆಯಾಗಿ ಪಡೆಯುತ್ತಾರೆ ಎನ್ನಲಾಗಿದೆ.