ಬ್ರಹ್ಮಗಂಟು ಸೀರಿಯಲ್ ಗುಂಡಮ್ಮನನ್ನ ನೋಡಿ ನಕ್ಕವರೇ ಹೆಚ್ಚು..ಆದರೆ ಈಗ ಹೇಗಾಗಿದ್ದಾರೆ ಈ ನಟಿ.!

Entertainment

ಪ್ರಿಯ ಸ್ನೇಹಿತರೇ, ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಬ್ರಹ್ಮಗಂಟು ಧಾರಾವಾಹಿಯನ್ನ ನೆನೆಸಿಕೊಂಡಾಗ ಮೊದಲು ನೆನಪು ಬರುವುದೇ ಗುಂಡಮ್ಮ ಖ್ಯಾತಿಯ ನಟಿ ಗೀತಾ ಭಟ್. ನೋಡಲು ದೊಡ್ಡ ದೇಹ ಹೊಂದಿದ್ದರೂ, ಸಿನಿಮಾ ನಟಿಯರನ್ನು ಕೂಡ ನಾಚಿಸುವಂತಹ ಸ್ಪುರದ್ರೂಪಿಯಾಗಿದ್ದರು ಗುಂಡಮ್ಮ ಅಲಿಯಾಸ್ ಗೀತಾ ಭಟ್. ಈ ಸುಂದರ ನಟಿಯ ದೇಹ ನೋಡಿ ಎಷ್ಟೋ ಜನ ಅ’ವಮಾನ ಮಾಡಿದ್ದು ಉಂಟು. ಆದರೆ ಅದೇ ದಪ್ಪನಾದ ದೇಹದ ನಟಿ ಗೀತಾ ಬ್ರಹ್ಮಗಂಟು ಸೀರಿಯಲ್ ನಲ್ಲಿ ನಟಿಸುವ ಮೂಲಕ ಫೇಮಸ್ ಆದವರು. ಇಷ್ಟೇ ಅಲ್ಲದೆ ಕಿರುತೆರೆಯ ಖ್ಯಾತ ಶೋ ಬಿಗ್ ಬಾಸ್ ಎಂಟರ ಸೀಸನ್ ನಲ್ಲಿ ಕೂಡ ಭಾಗವಹಿಸಿ ಹೆಸರು ಮಾಡಿದವರು. ಇನ್ನು ಇದೆಲ್ಲಾ ಮುಗಿದ ಮೇಲೂ ಕೂಡ ಸುದ್ದಿಯಾಗುತ್ತಿದ್ದಾರೆ ನಟಿ ಗೀತಾ ಭಟ್..

ಹೌದು, ನಟಿ ಗೀತಾ ಭಟ್ ಅವರು ಸೀರಿಯಲ್ ಮೂಲಕ ಏನೋ ಫೇಮಸ್ ಆದರು. ಆದರೆ ಇಷ್ಟು ದಪ್ಪಗೆ ಇರುವ ಈ ನಟಿಗೆ ಸಿನಿಮಾಗಳಲ್ಲಿ ಅವಕಾಶಗಳು ಸಿಗುತ್ತಾ ಎಂಬ ಪ್ರಶ್ನೆಯನ್ನ ಕೇಳಿದವರೇ ಹೆಚ್ಚು. ಆದರೆ ಈಗ ಅವಮಾನ, ಅಪಮಾನಗಳನ್ನ ಬದಿಗೊತ್ತಿ ಹಲವು ವರ್ಷಗಳ ಬಳಿಕ ನಿರ್ಧಾರವೊಂದನ್ನ ತೆಗೆದುಕೊಂಡಿದ್ದು ಸಣ್ಣಗಾಗಲು ನಿರ್ಧಾರ ಮಾಡಿದ್ದಾರೆ. ಹೌದು, ತಮ್ಮ ಆರೋಗ್ಯದ ದೃಷ್ಟಿಯಿಂದ ಸಣ್ಣಗಾಗಲು ನಿರ್ಧಾರ ಮಾಡಿರುವ ಗೀತಾ ಭಟ್ ಅವರು ಅದಾಗಲೇ ವರ್ಕ್ ಔಟ್ ಮಾಡಲು ಶುರು ಮಾಡಿದ್ದಾರೆ. ತಮ್ಮ ವರ್ಕೌಟ್ ಜರ್ನಿ ಎಲ್ಲರಿಗು ತಿಳಿಯುವಂತಾಗಲು ತಮ್ಮ ಸ್ವಂತ ಯೌಟ್ಯೂಬ್ ಚಾನೆಲ್ ಕೂಡ ಶುರು ಮಾಡಿದ್ದಾರೆ. ಅದರಲ್ಲಿ ತಾವು ಪ್ರತೀ ದಿನ ಮಾಡುವ ವರ್ಕೌಟ್ ವಿಡಿಯೊಗಳನ್ನ ಪೋಸ್ಟ್ ಮಾಡುತ್ತಾರೆ.

ಗೀತ್ ಭಟ್ ಅವರಿಗೆ ತಾವು ಸಣ್ಣಗಾಗಬೇಕು ಎಂಬುದು ಹಲವಾರು ವರ್ಷಗಳ ಕನಸಂತೆ. ಅದರಂತೆ ವರ್ಕೌಟ್ ಸ್ಟಾರ್ಟ್ ಮಾಡಿರುವ ಗೀತಾ ಡಯೆಟ್ ಕೂಡ ಮಾಡುತ್ತಿದ್ದಾರೆ. ಖ್ಯಾತ ಜಿಮ್ ಟ್ರೈನರ್ ಒಬ್ಬರು ನಾಟಿಗೆ ವರ್ಕೌಟ್ ಮಾಡಿಸುತ್ತಿದ್ದು, ಒಂದರಿಂದ ಎರಡು ವರ್ಷಗಳ ಕಾಲ ಸತತ ಪ್ರಯತ್ನ ಪಟ್ಟರೆ ಗೀತಾ ಭಟ್ ಅವರು ಆರೋಗ್ಯದ ಜೊತೆಗೆ ಸಿನಿಮಾ ನಟಿಯನ್ನ ಮೀರಿಸುವಷ್ಟರ ಮಟ್ಟಿಗೆ ಅವರು ಚೇಂಜ್ ಆಗುತ್ತಾರೆ ಎಂದು ಅವರ ಜಿಮ್ ತರಭೇತುದಾರ ಹೇಳುತ್ತಾರೆ. ಇನ್ನು ಈಗಾಗಲೇ ಸಿಹಿ ಪದಾರ್ಥಗಳು, ಸೇರಿದಂತೆ ಎಲ್ಲಾ ರೀತಿಯ ಜಂಕ್ ಫುಡ್ ಗಳಿಗೆ ಇತಿಶ್ರೀ ಹಾಡಿರುವ ಗೀತಾ ಅವರಿಗೆ ಪಾನಿ ಪುರಿ, ಸ್ವೀಟ್ ಗಳು ಕಾಣಿಸಿದ್ರೇ ಬಾಯಲ್ಲಿ ನೀರು ಬರುತ್ತೆ, ಆದ್ರೆ ತಿನ್ನೋ ಆಗಿಲ್ಲ ಎಂದು ಹೇಳುತ್ತಾರೆ. ಆರೋಗ್ಯದ ದೃಷ್ಟಿಯಿಂದ ವರ್ಕೌಟ್ ಮಾಡುತ್ತಿರುವುದಾಗಿ ಹೇಳಿರುವ ನಟಿ ಗೀತಾ ಭಟ್ ಇಷ್ಟು ದಿನಗಳ ಬಳಿಕ ನನಗೆ ಒಂದು ಒಳ್ಳೆ ರೀತಿಯ ಫೀಲ್ ಆಗಲು ಶುರುವಾಗಿದೆ ಲೈಫ್ ಸ್ಟೈಲ್ ನಲ್ಲಿ ತುಂಬಾ ಬದಲಾವಣೆಯಾಗುತ್ತಿದೆ ಎಂದಿದ್ದಾರೆ.