ಬೈಕ್ ಸ್ಟಂಟ್ ಮಾಡಿ ವಿಡಿಯೋ ವೈರಲ್ ಆದ ಬಳಿಕ ಬೈಕ್ ರಾಣಿಯರಿಗೆ ಬಿತ್ತು ಬಾರಿ ದಂಡ..ಕಟ್ಟಿದ ಫೈನ್ ಎಷ್ಟು ಗೊತ್ತಾ ?

Kannada News Uncategorized
Advertisements

ಈಗಂತೂ ಸಿಕ್ಕ ಸಿಕ್ಕ ವಿಡಿಯೋ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಖಯಾಲಿ ಈಗಿನ ಯುವ ಜನಾಂಗದಲ್ಲಿ ಹೆಚ್ಚಾಗಿದೆ. ಹೌದು, ಇದೆ ರೀತಿ ಹುಡುಗಿಯರಿಬ್ಬರು ಹಾಕಿದ ವಿಡಿಯೋವೊಂದರಿಂದ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದು ದಂಡ ಕೂಡ ಪಾವತಿ ಮಾಡಬೇಕಾದ ಪರಿಸ್ಥಿತಿ ಒದಗಿಬಂದಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‍ನವರಾದ ಇಬ್ಬರು ಹುಡುಗಿಯರು ಸ್ಟಂಟ್ ಮಾಡಿದ್ದು ಅದರ ವಿಡಿಯೋವನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

[widget id=”custom_html-4″]

ಇನ್ನು ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಪೋಲೀಸರ ಗಮನಕ್ಕೆ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಶಿವಾಂಗಿ ಎಂಬ ಯುವತಿ ತನ್ನ ಸ್ನೇಹಿತೆ ಆಗಿರುವ ಸ್ನೇಹಾ ಎಂಬ ಯುವತಿಯ ಹೆಗಲ ಮೇಲೆ ಕುಳಿತು ತಮ್ಮ ಬುಲೆಟ್ ಬೈಕ್ ನಲ್ಲಿ ಸ್ಟಂಟ್ ಮಾಡಿ ಗಾಜಿಯಾಬಾದ್‍ ರಸ್ತೆಗಳಲ್ಲಿ ತಿರುಗಾಡಿದ್ದಾರೆ. ಇದೆ ವೇಳೆ ವಿಡಿಯೋ ಶೂಟ್ ಕೂಡ ಮಾಡಿಸಿದ್ದು ಆ ವಿಡಿಯೋವನ್ನ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

[widget id=”custom_html-4″]

Advertisements

ಈ ವಿಡಿಯೋ ವೈರಲ್ ಆಗಿ ಸ್ಥಳೀಯ ಪೋಲೀಸರ ಗಮನಕ್ಕೆ ಬಂದಿದ್ದು, ಬುಲೆಟ್ ಬೈಕ್ ನ ಓನರ್ ಗೆ 17 ಸಾವಿರ ರೂಪಾಯಿ, ಹಾಗೂ ಬೈಕ್ ರೈಡ್ ಮಾಡಿದ್ದ ಸ್ನೇಹಾ ಅವರಿಗೆ 11 ಸಾವಿರ ರೂಪಾಯಿ ದಂಡ ಹಾಕಿದ್ದಾರೆ. ಒಟ್ಟಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಬೈಕ್ ಸ್ಟಂಟ್ ರಾಣಿಯರು ತಾವು ಮಾಡಿದ ವಿಡಿಯೋದಿಂದಲೇ 28 ಸಾವಿರ ರೂಪಾಯಿ ದಂಡ ಕಟ್ಟುವಂತಾಗಿದೆ.