ಗೋಲ್ಡನ್ ಬಾಬಾ ಧರಿಸಿರೋ ಈ ಚಿನ್ನದ ಮಾಸ್ಕ್ ಬೆಲೆ ಎಷ್ಟು ಗೊತ್ತಾ? ಚಿನ್ನದ ಮಾಸ್ಕ್ ಗೆ ಸ್ಯಾನಿಟೈಸರ್ ಸಹ ಹಾಕ್ತಾರಂತೆ?

Kannada Mahiti
Advertisements

ಚಿನ್ನ ಅನ್ನೋದು ಎಲ್ಲರ ಅಚ್ಚು ಮೆಚ್ಚಿನ ಮೆಟೆಲ್. ಮದುವೆ ಶುಭ ಸಮಾರಂಭಗಳು ಅಂದ್ರೆ ಚಿನ್ನ ಮಸ್ಟ್ ಆ್ಯಂಡ್ ಶುಡ್ಡ್. ರಾಜಮಹಾರಾಜರ ಕಾಲದಿಂದಲೂ ಚಿನ್ನಕ್ಕೆ ಡಿಮ್ಯಾಂಡ್ ಕಡಿಮೆ ಆಗೇ ಇಲ್ಲ. ಸಾಮಾನ್ಯವಾಗಿ ಚಿನ್ನವನ್ನು ತೊಟ್ಟು ಸಣ್ಣ ಪುಟ್ಟ ಪ್ರದರ್ಶನ ಮಾಡುವವರು ಎಲ್ಲ ಕಡೆ ಇದ್ದೆ ಇರ್ತಾರೆ. ಇದೀಗ ಕೊರೊನಾ ಕಾಲ. ಈ ವೇಳೆಯಲ್ಲಿ ಎಲ್ಲರ ಮುಖದ ಮೇಲೆ ಮಾಸ್ಕ್ ಅಂತು ಕಡ್ಡಾಯ. ಕೆಲವರು ಕೊರೊನಾಗೆ ಹೆದರಿ ಮಾಸ್ಕ್ ಹಾಕಿದರೆ, ಇನ್ನು ಕೆಲವರು ದಂಡ ಕಟ್ಟ ಬೇಕಾಗುತ್ತದೆ ಅನ್ನೋ ಭಯಕ್ಕೆ ಮನಬಂದಂತೆ ಮಾಸ್ಕ್ ಧರಿಸಿರುತ್ತಾರೆ. ಒಟ್ನಲ್ಲಿ, ಎಲ್ಲರ ಮುಖ ಮುಚ್ಚಿಬಿಟ್ಟಿದೆ ಈ ವೈರಸ್. ಕೊರೊನಾ ವಕ್ಕರಿಸಿದ ಬಳಿಕ ಮಾಸ್ಕ್‌ಗಳಿಗೆ ಭಾರಿ ಬೇಡಿಕೆ ಇದೆ. ಇದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಮಾಸ್ಕ್‌ಗಳು ಲಭ್ಯವಿದೆ. ಮೋದಿ ಹೆಸರಿನ ಮಾಸ್ಕ್​ ಕೂಡ ಮಾರುಕಟ್ಟೆಯಲ್ಲಿ ಟ್ರೆಂಡ್​ ಸೆಟ್ ಮಾಡಿದೆ. ಕೆಲವರಂತೂ ಮಾಸ್ಕ್​ಗಳಿಗೆ ಕೊರೊನಾ ಮಾಸ್ಕ್​ ಎಂದೇ ಹೆಸರಿಸಿ ವ್ಯಾಪಾರ ಮಾಡ್ತಿದ್ದಾರೆ.

[widget id=”custom_html-4″]

Advertisements

ಇನ್ನು ಶ್ರೀಮಂತರು ತಮ್ಮ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಮಾಸ್ಕ್ ಖರೀದಿಸಿ, ಧರಿಸುತ್ತಾರೆ. ಇಷ್ಟರ ನಡುವೆ ಚಿನ್ನದ ಮಾಸ್ಕ್ ಅನ್ನೋದು ಈಗ ಎಲ್ಲ ಕಡೆ ಟ್ರೆಂಡ್ ಸೃಷ್ಟಿ ಮಾಡಿಬಿಟ್ಟಿದೆ. ಹೀಗೊಂದು ಸ್ಪೆಷಲ್ ಚಿನ್ನದ ಮಾಸ್ಕ್ ಹಾಗೂ ಅದರ ಡಿಫರೆಂಟ್ ಮಾಲೀಕನ ಬಗ್ಗೆ ಹೇಳ್ತಿವಿ ನೋಡಿ. ಉತ್ತರ ಪ್ರದೇಶದ ಕಾನ್ಪುರ್ ನಲ್ಲಿ ಹೀಗೊಬ್ಬ ಬಂಗಾರ ಪ್ರಿಯ ಇದ್ದಾರೆ. ಇವರ ಚಿನ್ನದ ಮೇಲಿನ ಪ್ರೀತಿಗೆ ಗೋಲ್ಡನ್ ಬಾಬಾ, ಸೋನ ಕೀ ಬಾಬಾ, ಡಿಫೆರೆಂಟ್ ಬಾಬಾ ಜೊತೆಗೆ ಮನೋಜಾನಂದ ಮಹರಾಜ್ ಎಂದು ಗೌರವದಿಂದಲೂ ಕರೆಯಲಾಗುತ್ತದೆ. ಇವರ ಚಿನ್ನದ ಮೇಲಿನ ಪ್ರೀತಿ ಬಣ್ಣಿಸಲಾಗುವುದಿಲ್ಲ. ಚಿನ್ನದ ಮೇಲೆ ಭಾರೀ ಮೋಹ ಇರುವ ಮನೋಜ್‌ ಬಳಿ ಒಟ್ಟಾರೆ ಎರಡು ಕಿಲೋಗ್ರಾಂ ತೂಗುವ ಚಿನ್ನಾಭರಣಗಳ ಸಂಗ್ರಹವಿದೆ. ಇದೇ ಕಾರಣಕ್ಕೆ ಇವರನ್ನು ‘ಗೋಲ್ಡನ್ ಬಾಬಾ’ ಎಂದು ಕರೆಯಲಾಗುತ್ತದೆ. ಈ ವ್ಯಕ್ತಿಯ ಮೈಮೇಲೆ ಚಿನ್ನಾಭರಣದ ರಾಶಿ ನೋಡಿ ಜನ, ಈತನನ್ನು ಯು.ಪಿಯ ಬಿಪ್ಪಿ ಲಹರಿ ಎಂದೇ ಫೇಮಸ್ ಮಾಡಿದ್ದಾರೆ.

[widget id=”custom_html-4″]

ಮನೋಜಾನಂದರ ಬಳಿ ಸದ್ಯ ಶಂಖ ಚಿಪ್ಪು, ಮೀನು ಮತ್ತು ಭಗವಾನ್ ಹನುಮನ ಲಾಕೆಟ್ ಮತ್ತು ಕಾಂಚ್‌ ಕವಚ ಇದ್ದು, ಇವೆಲ್ಲವೂ ಚಿನ್ನದಿಂದ ಮಾಡಲ್ಪಟ್ಟಿವೆ. ಅಂದಹಾಗೆ ಇವರ ಮೈಮೇಲೆ ಸದಾ ಚಿನ್ನದ ರಾಶಿಯೇ ಇರುತ್ತದೆ. ಒಟ್ಟಾರೆ 250 ಗ್ರಾಂ ತೂಗುದ ನಾಲ್ಕು ಚಿನ್ನದ ಸರಗಳನ್ನು ಧರಿಸಿರುತ್ತಾರೆ ಬಂಗಾರದ ಬಾಬಾ. ಇದಲ್ಲೆದಕ್ಕಿಂತ ಇವರು ಓಡಾಡುವಾಗ ಇವರ ದಾರಿ ಉದ್ದಕ್ಕೂ ಒಬ್ಬ ಸೇವಕ ಬೆಳ್ಳಿಯ ಬೀಸಣಿಕೆಯಿಂದ ಗಾಳಿ ಬೀಸ್ತಾ ಇರ್ತಾನೆ. ಇದೆಲ್ಲ ಹಾಕಿಕೊಂಡೆ ಈ ಬಾಬಾ ಶಿವನ ಸೇವೆ ಮಾಡೋದು. ಅಲ್ಲದೆ ಇವರ ವೇಷಭೂಷಣವೂ ಬಂಗಾರ ತೊಟ್ಟ ಸನ್ಯಾಸಿಯಂತಿದೆ. ಹಣೆ ಮೇಲೆ ಉದ್ದದ ಗಂಧದ ತಿಲಕ, ಮಧ್ಯದಲ್ಲಿ ಕುಂಕುಮ, ಎದೆ ಮೇಲೆ ಹಳದಿ ಶಾಲು, ಅದರ ಮೇಲೊಂದು ನವಿಲು ಗರಿ. ಅದಕ್ಕೆ ಅಲ್ಲಿನ ಜನ ಇವರನ್ನು ಡಿಫೆರೆಂಟ್ ಬಾಬಾ ಅಂತಾನೆ ಕರಿಯೋದು. N95 ಮಾಸ್ಕ್ ಗೆ 100 ರೂಪಾಯಿ ಕೊಡೋದಕ್ಕೂ ಮಧ್ಯಮ ವರ್ಗದ ಜನರಿಗೆ ಕಷ್ಟ. ಅಂಥಾದ್ರಲ್ಲಿ ಇಲ್ಲೊಬ್ಬ ಚಿನ್ನದ ಮಾಸ್ಕ್ ಹಾಕೋತಾನೆ ಅಂದ್ರೆ ನಂಬ್ತೀರಾ ? ನಂಬಲೇಬೇಕು, ಯಾಕಂದ್ರೆ ಗೋಲ್ಡನ್ ಬಾಬಾ ಈ ಟೈಪ್ ಮಾಸ್ಕ್ ಮಾಡಿಸಿಕೊಂಡಿದ್ದಾರೆ. ಅಷ್ಟಕ್ಕೂ ಈ ರೀತಿ ಚಿನ್ನದ ಮಾಸ್ಕ್ ಹೊಸದೇನಲ್ಲ ಬಿಡಿ.

[widget id=”custom_html-4″]

ಈಗಾಗಲೇ ಮೂರ್ನಾಲ್ಕ್ ಜನ ಮಾಡಿಸಿಕೊಂಡಿದ್ದಾರೆ. ಆದ್ರೆ, ಈತನ ಬಳಿ ಇರುವ ಮಾಸ್ಕ್ ಅದೆಲ್ಲದಕ್ಕಿಂತ ಸ್ಪೆಷಲ್. ಈ ಚಿನ್ನದ ಮಾಸ್ಕ್ ಮುಖಕ್ಕೆ ವೈರಸ್ ತಾಗದಂತೆ ಮುಚ್ಚುವುದಲ್ಲದೆ, ಪದೇ ಪದೇ ತನ್ನನ್ನು ತಾನು ಸ್ಯಾನಿಟೈಸ್ ಕೂಡ ಮಾಡಿಕೊಳ್ಳತ್ತಂತೆ. ಈ ಮಾಸ್ಕ್‌ ಹಿಂದೆ ಸ್ಯಾನಿಟೈಸರ್‌ ದ್ರವವಿದೆ. ಇದು 36 ತಿಂಗಳು ಸ್ಯಾನಿಟೈಸ್ ಮಾಡಿ ಕೊರೊನಾ ತಡೆಯುವಂತೆ ಕೆಲಸ ಮಾಡಲಿದೆಯಂದು ಅವರೇ ತೋರಿಸಿದ್ದಾರೆ. ಇಷ್ಟೆಲ್ಲ ಫೆಸಿಲಿಟಿ ಇರುವ ಈ ಮಾಸ್ಕ್ ನ ಬೆಲೆ ಬರೋಬರಿ 5 ಲಕ್ಷ ರೂಪಾಯಿ. ಅಲ್ಲದೆ ಈ ಮಾಸ್ಕ್ ಅನ್ನು ಡಿಸೈನ್ ಮಾಡಿದವನು ಅದರಲ್ಲಿ ಶಿವನ ಮುಖವನ್ನು ಕೆತ್ತಿರುವುದರಿಂದ ಈ ಮಾಸ್ಕ್ ಇಷ್ಟು ಬೆಲೆ ಬಂದಿರಬಹುದು. ಮಾರ್ಕೆಟ್ ನಲ್ಲಿ ನಿಂತು, 5 ರೂಪಾಯಿ, 10 ರೂಪಾಯಿಗೆ ಸಿಗೋ ಮಾಸ್ಕ್ ಗೆಲ್ಲ ಕೊರೊನಾ ಮಾಸ್ಕ್ ಅನ್ನೋ ಹೆಸರಿದೆ. ಈ ಬಂಗಾರದ ಮಾಸ್ಕ್ ಗೆ 5 ಲಕ್ಷ ಕೊಟ್ಟ ಬಾಬಾ ಇದಕ್ಕೊಂದು ಹೆಸರು ಇಡೋದು ಬೇಡ್ವಾ ? ಅಲ್ಲದೆ ಈ ಚಿನ್ನದ ಪ್ರಿಯ ಬಾಬಾ ಬಳಿ ಇರುವ ಎಲ್ಲ ಚಿನ್ನದ ಆಭರಣಕ್ಕೂ ಒಂದೊಂದು ಹೆಸರಿಟ್ಟಿದ್ದಾರೆ. ಅದೇ ರೀತಿ ಈ ಚಿನ್ನದ ಮಾಸ್ಕ್ ಗೂ ಬಾಬಾ ಇಟ್ಟ ಹೆಸರು ಶಿವ ಶರಣ್ ಮಾಸ್ಕ್. ಪಟ್ಟ ಶಿವ ಭಕ್ತನಾಗಿರುವ ಬಾಬಾನಿಗೆ ಈ ಮಾಸ್ಕ್ ತನ್ನನ್ನು ಕೊರೊನಾದಿಂದ ಕಾಪಾಡುವ ಶಿವ ಇದು ಎನ್ನುವುದಕ್ಕೆ ಈ ಹೆಸರು ಇಡ್ತಾರಂತೆ.

[widget id=”custom_html-4″]

ಶಿವನ ಆಜ್ಞೆ ಇಲ್ಲದೆ ಜಗತ್ತಿನಲ್ಲಿ ಏನು ನಡೆಯದು. ಶಿವ ಸೂಚಿಸಿರುವ ಹಾಗೆ ಈ ಮಾಸ್ಕ್ ನನ್ನನ್ನು ಕೊರೊನಾದಿಂದ ಕಾಪಾಡುತ್ತದೆ. ಇದರಿಂದ ಇದಕ್ಕೆ ಶಿವ ಶರಣ್ ಎಂದು ಹೆಸರಿಟ್ಟಿದ್ದೇನೆ. ಚಿನ್ನ ಅಂದ್ರೆ ನಂಗೆ ಅಚ್ಚು ಮೆಚ್ಚು. ಆದ್ದರಿಂದ ಚಿನ್ನದಿಂದಲೇ ಇದನ್ನು ಮಾಡಿಸಿಕೊಂಡಿದ್ದೇನೆ. ಕೊರೊನಾ ವೈರಸ್ ವಿಶ್ವದಿಂದ ತೊಲಗಬೇಕು ನಿಜ, ಆದರೆ ಹೀಗೆ ಚಿನ್ನದ ಮಾಸ್ಕ್ ಬಳಸುವುದರಿಂದ ಏನು ಲಾಭವೋ ಗೊತ್ತಿಲ್ಲ. ಕೇವಲ ಪ್ರತಿಷ್ಠೆಯಷ್ಟೆ. ಕೊರೊನಾ ಮಹಾಮಾ’ರಿಗೆ ಶ್ರೀಮಂತಿಕೆ ಮೂಲಕ ಬೆದರಿಕೆ ಹಾಕುತ್ತಿದ್ದಾರಾ ಭಾರತದ ಶ್ರೀಮಂತ ಮಾಸ್ಕ್ ದಾರಿಗಳು ಗೊತ್ತಿಲ್ಲ. ಇವರ ಈ ಹುಚ್ಚಾಟದಿಂದ ತಿಳಿದು ಬರುವುದೇನೆಂದರೆ ಇವರಿಗೆಲ್ಲ ಮಾಸ್ಕ್ ಧರಿಸಬೇಕಾಗಿರುವ ಮೂಲ ಉದ್ದೇಶ ತಿಳಿದಿದ್ಯಾ ಅನ್ನೋದು? ಚಿನ್ನ ಅನ್ನೋದು ಆಭರಣವಾಗಿ ದೇಹದ ಮೇಲಿದ್ದರೆ ಚಂದ ಅನ್ನೋ ಹಾಗೆ ಭಾರತದಲ್ಲಿ ಗೋಲ್ಡ್ ಮಾಸ್ಕ್ ಟ್ರೆಂಡ್ ಆಗುತ್ತಿದೆ. ಉದ್ಯಮಿಗಳು, ಶ್ರೀಮಂತರು ಇದೀಗ ಚಿನ್ನದ ಮಾಸ್ಕ್ ಧರಿಸಿ ಸದ್ದು ಮಾಡುತ್ತಿದ್ದಾರೆ. ಹಾಗೆ ಕಾನ್ಪುರದ ಈ ಬಾಬಾ ಚಿನ್ನದ ಮಾಸ್ಕ್​ ನಿಂದ ಸುದ್ದಿಯಲ್ಲಿದ್ದಾರೆ.