ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪತ್ನಿ ಶಿಲ್ಪಾಗಣೇಶ್ ನಡುವೆ ವಯಸ್ಸಿನ ಅಂತರ ಎಷ್ಟಿದೆ ಗೊತ್ತಾ.?

Cinema

ಸ್ನೇಹಿತರೆ ಸಿನಿಮಾರಂಗ ಅಂದ್ರೆನೇ ಹಾಗೇನೇ ಯಾವಾಗ ಯಾರ ಜೀವನದಲ್ಲಿ ಯಾವ ಸಂದರ್ಭದಲ್ಲಿ ಹೇಗೆ ಬದಲಾಗುತ್ತದೆ, ಎಷ್ಟರಮಟ್ಟಿಗೆ ಬದಲಾಗುತ್ತದೆ ಎಂದು ಹೇಳಲಿಕ್ಕಾಗದು. ಸಿನಿಮಾರಂಗದಲ್ಲಿ ಸತತ ಪ್ರಯತ್ನ ಒಂದಿದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಸಾಕಷ್ಟು ಜನರ ಉದಾಹರಣೆಗಳಿವೆ. ಸಾಕಷ್ಟು ಕಲಾವಿದರ ಜೀವನ ಮಾದರಿಯಾಗಿವೆ. ಹೌದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಬಗ್ಗೆ ಈಗಾಗಲೇ ಸಾಕಷ್ಟು ಜನರಿಗೆ ಗೊತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್ ಎಂಬ ಬಿರುದಿನ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಗಣೇಶ್ ಇಂದಿಗೂ ಅವರ ಯಶಸ್ಸಿನ ನಾಗಾಲೋಟ ಮುಂದುವರಿಸಿದ್ದಾರೆ ಎಂದರೆ ತಪ್ಪಾಗಲಾರದು. ನಟ ಗಣೇಶ್ ಅವರು ಕನ್ನಡ ಕಿರುತೆರೆಯಲ್ಲಿ ಕಾಮಿಡಿ ಟೈಮ್ ಎನ್ನುವ ಕಾರ್ಯಕ್ರಮವೊಂದರ ಮೂಲಕ ಅವರ ನಿರೂಪಣೆಯನ್ನು ಆರಂಭಿಸಿದರು. ಅವರದ್ದೇ ಆದ ಮಾತಿನ ಶೈಲಿಯ ಮೂಲಕ ಗಣೇಶ್ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಹುಟ್ಟಿಕೊಂಡಿತು.

ನಂತರ 2006ರಲ್ಲಿ ಗಣೇಶ್ ಅವರು ಚೆಲ್ಲಾಟ ಎಂಬ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದ್ದು ನಟನೆಯಲ್ಲಿ ಗಣೇಶ್ ಅವರು ಪಾಸಾದರು ಎನ್ನಬಹುದು. ನಂತರ ಮುಂಗಾರು ಮಳೆ, ಗಾಳಿಪಟ, ಹುಡುಗಾಟ, ಚೆಲುವಿನ ಚಿತ್ತಾರ, ಒಂದಾದ ಮೇಲೆ ಒಂದು ಚಿತ್ರದಂತೆ ಎಲ್ಲಾ ಹಿಟ್ ಚಿತ್ರಗಳನ್ನು ನೀಡಿದರು. ಗಣೇಶ್ ಅವರ ಸ್ಟಾರ್ ಗಿರಿಯನ್ನು ಕೂಡ ಇತ್ತೀಚಿನ ಕೆಲ ಕತೆ ಸರಿಯಿಲ್ಲದ ಚಿತ್ರಗಳು ಕೆಳ ಬೀಳುವಂತೆ ಮಾಡಿದ್ದು ಸತ್ಯ. ಸರ್ಕಸ್, ಮಳೆಯಲಿ ಜೊತೆಯಲಿ, ಹೀಗೆ ಇನ್ನೂ ಅನೇಕ ಸಿನಿಮಾಗಳು ಗಣೇಶ್ ಅವರಿಗೆ ಅಷ್ಟು ಯಶಸ್ಸು ತಂದು ಕೊಡಲಿಲ್ಲ. ಗಣೇಶ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ತಮ್ಮ ಜೀವನದ ಬಗ್ಗೆ ಕೆಲವೊಂದಿಷ್ಟು ವಿಚಾರ ಹೇಳಿದ್ದರು.

ಚಿತ್ರಾನ್ನ ತಿನ್ನಲು ಒಂದು ಸಮಯದಲ್ಲಿ ನನ್ನ ಬಳಿ ದುಡ್ಡು ಇರಲಿಲ್ಲ, ಆದರೆ ಇದೀಗ ದೇವರು ನನ್ನ ಯೋಗ್ಯತೆಗೆ ಮೀರಿ ಕೊಟ್ಟಿದ್ದಾನೆ ಎಂದು ಹೇಳಿ ಅವರ ವ್ಯಕ್ತಿತ್ವವನ್ನ ತೋರಿಸಿಕೊಟ್ಟಿದ್ದರು. ಹೌದು ಗಣೇಶ್ ಅವರ ನಿಜ ಜೀವನಕ್ಕೆ ಬರುವುದಾದರೆ ಶಿಲ್ಪ ಹಾಗೂ ಗಣೇಶ್ ಅವರಿಗೆ ಇಬ್ಬರು ಮಕ್ಕಳಿದ್ದು, ಗಣೇಶ್ ಹಾಗೂ ಶಿಲ್ಪ ಅವರ ವಯಸ್ಸಿನ ಅಂತರ ಎಷ್ಟಿರಬಹುದು ಎಂದು ನೋಡುವುದಾದರೆ, ನಟ ಗಣೇಶ್ ಅವರು ಜುಲೈ 2, 1980ನೇ ವರ್ಷದಲ್ಲಿ ಜನಿಸಿದ್ದಾರೆ. ಇನ್ನು ಪತ್ನಿ ಶಿಲ್ಪಾ ಅವರು ನವೆಂಬರ್ ೩೦ರಲ್ಲಿ ಜನಿಸಿದ್ದಾರೆ ಎಂದು ಕೇಳಿಬಂದಿದೆ.

ಆದರೆ ಶಿಲ್ಪ ಗಣೇಶ್ ಎಷ್ಟನೆ ವರ್ಷದಲ್ಲಿ ಹುಟ್ಟಿದ್ದಾರೆ ಎಂಬ ನಿಖರವಾದ ಮಾಹಿತಿ ತಿಳಿದುಬಂದಿಲ್ಲ. ಬದಲಿಗೆ ಇವರಿಬ್ಬರ ನಡುವೆ 5 ವರ್ಷ ವಯಸ್ಸು ಅಂತರವಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಹಾಗೆ ಗಣೇಶ್ ಅವರಿಗಿಂತಲೂ ಶಿಲ್ಪ ಗಣೇಶ್ ಅವರೇ ದೊಡ್ಡವರು ಎನ್ನುವ ಮಾತುಗಳು ಕೇಳಿಬಂದಿವೆ. ಏನೇ ಆಗಲಿ ಈ ಜೋಡಿ ನಗುನಗುತ್ತಾ ಹೀಗೆ ಜೀವನ ಸಾಗಿಸಲಿ ಖುಷಿಯಾಗಿರಲಿ ಎಂದು ಹಾರೈಸಿ, ಧನ್ಯವಾದಗಳು…