ಮಹಿಳೆಯೊಬ್ಬರ ಮನೆಗೆ ಸೊಪ್ಪು ಮಾರಲು ಬಂದ ಅಜ್ಜಿ ಮಾಡಿರುವ ಕೆಲಸ ನೋಡಿದ್ರೆ ಗ್ರೇಟ್ ಅಂತೀರಾ !

Inspire
Advertisements

ಸ್ನೇಹಿತರೇ, ದುಡಿಯುವ ಶಕ್ತಿ ಇದ್ದರೂ ಭಿಕ್ಷೆ ಬೇಡಿ, ಮೋಸ, ಕಳ್ಳತನ ಮಾಡಿ ಜೀವನ ಮಾಡುವವರೇ ಹೆಚ್ಚಾಗಿದ್ದಾರೆ. ಇನ್ನು ಇವರ ಜೊತೆಗೆ ಕೆಲಸ ಇಲ್ಲವೆಂಬ ನೆಪ ಹೇಳಿಕೊಂಡು ಸೋಮಾರಿಗಳಾಗಿ ಸುತ್ತಾಡುವವರು ಕೂಡ ನಮ್ಮಲ್ಲಿದ್ದಾರೆ. ಆದರೆ ಇಂತಹವರ ನಡುವೆಯೂ ತಮ್ಮಲ್ಲಿ ದುಡಿಯುವ ತಾಕತ್ತು ಇಲ್ಲದಿದ್ದರೂ ಕೂಡ ನಿಯತ್ತಿನಿಂದ ದುಡಿದು ತಿನ್ನುವವರು ಬಹುತೇಕರಿದ್ದಾರೆ. ಅಂತಹವರಲ್ಲಿ ೮೦ ವರ್ಷದ ಈ ಅಜ್ಜಿಯೂ ಕೂಡ ಒಬ್ಬರು. ಇಷ್ಟು ವಯಸ್ಸಾಗಿದ್ದರೂ ಕೂಡ ಜೀವನಕ್ಕಾಗಿ ಈ ಅಜ್ಜಿ ಮಾಡುತ್ತಿರುವ ಕೆಲಸ ಕೇಳಿದ್ರೆ ಅಚ್ಚರಿ ಆಗದೆ ಇರೋದಿಲ್ಲ..

[widget id=”custom_html-4″]

Advertisements

ಹೌದು, ಶಾರದಮ್ಮ ಎನ್ನುವ ಆ ಅಜ್ಜಿಯ ವಯಸ್ಸು ಬರೊಬ್ಬರೋ ೮೦ ವರ್ಷ. ಮಕ್ಕಳು, ಮೊಮ್ಮಕ್ಕಳ ಜೊತೆಯಾಗಿ ಸುಖವಾಗಿರಬೇಕಾದ ವಯಸ್ಸಿದು. ಆದರೆ ನಡೆಯಲೂ ಕೂಡ ಕಷ್ಟವಾಗುವ ಈ ಇಳಿ ವಯಸ್ಸಿನಲ್ಲಿ ಇಂದಿಗೂ ಕೂಡ ಕುಟುಂಬದ ಜವಾಬ್ದಾರಿ ಹೊತ್ತುಕೊಂಡಿದ್ದಾಳೆ ಈ ಅಜ್ಜಿ. ಕಳೆದ ಹತ್ತು ವರ್ಷಗಳಿಂದ ಮನೆಗೆ ಮನೆಗೆ ಹೋಗಿ ಸೊಪ್ಪು ಮಾರಾಟ ಮಾಡುವ ಕಾಯಕ ಮಾಡುತ್ತಿದ್ದಾರೆ ಈ ಅಜ್ಜಿ. ಇನ್ನು ಹೀಗೆ ಸೊಪ್ಪಿನ ವ್ಯಾಪಾರ ಮಾಡಿಕೊಂಡು ಕುಟುಂಬವನ್ನ ನೋಡಿಕೊಳ್ಳುತ್ತಿದ್ದ ಅಜ್ಜಿ ಒಂದು ದಿನ ಸೊಪ್ಪು ಮಾರುವಾಗ ಮಹಿಳೆಯೊಬ್ಬರು ಅಜ್ಜಿ ಬಳಿ ಸೊಪ್ಪನ್ನ ತೆಗೆದುಕೊಳ್ಳುವ ಸಲುವಾಗಿ ತಾವಿದ್ದ ಬಿಲ್ಡಿಂಗ್ ನ ೩ನೇ ಅಂತಸ್ತಿನಿಂದ ಅಜ್ಜಿಯನ್ನ ಬರುವಂತೆ ಕರೆಯುತ್ತಾರೆ. ಇನ್ನು ನಡೆಯುವುದೇ ಕಷ್ಟವಾಗಿರುವ ಆ ವಯಸ್ಸಿನಲ್ಲಿ ಅಜ್ಜಿ ಮೆಟ್ಟಿಲುಗಳನ್ನ ಹತ್ತಿಕೊಂಡು ಮಹಿಳೆಯಿದ್ದ ಮೂರನೇ ಮಹಡಿಗೆ ಹೋಗಿ ಎರಡು ಕಟ್ಟು ಸೊಪ್ಪನ್ನ ೨೦ ರೂಗಳಿಗೆ ಮಾರಾಟ ಮಾಡುತ್ತಾಳೆ.

[widget id=”custom_html-4″]

ಆದರೆ ಆ ಮಹಿಳೆ ೨೦ರೂ ಕೊಡಬೇಕಾದ ಜಾಗದಲ್ಲಿ ನೂರು ರೂಪಾಯಿ ಕೊಡುತ್ತಾಳೆ. ಆಗ ಅಜ್ಜಿ ಮಹಿಳೆಗೆ ಇದು ನನ್ನ ಮೊದಲನೇ ಬೋಣಿ..ನನ್ನ ಬಳಿ ಚಿಲ್ಲರೆ ಎಲ್ಲ ಎಂದು ಹೇಳಿದಾಗ..ಮಹಿಳೆ ಅಜ್ಜಿ ನೀವು ಇದೇ ಏರಿಯಾದಲ್ಲಿ ತಾನೇ ಪ್ರತೀ ದಿನ ವ್ಯಾಪಾರ ಮಾಡೋದು..ಉಳಿದ ಹಣವನ್ನ ನಾಳೆ ಕೊಡಿ ಎಂದು ಹೆಳುತ್ತಾಳೆ. ಇನ್ನು ಆ ದಿನವೆಲ್ಲಾ ವ್ಯಾಪಾರ ಮಾಡಿದ ಅಜ್ಜಿ, ಬಳಿಕ ಚಿಲ್ಲರೆ ಹಿಂತಿರುಗಿಸಬೇಕಾಗಿದ್ದ ಮಹಿಳೆಗೆ ೮೦ ರೂ ಹಣವನ್ನ ಹಿಂತಿರುಗಿಸುತ್ತಾಳೆ. ಆಗ ಮಹಿಳೆ ಅಜ್ಜಿಗೆ ಹೇಳುತ್ತಾಳೆ..ಅಜ್ಜಿ ಚಿಲ್ಲರೆಯನ್ನ ನಾಳೆ ಅಥ್ವಾ ಮತ್ತೊಂದು ದಿನ ಕೊಟ್ಟರೆ ಆಗುತ್ತಿತ್ತು ಆಲ್ವಾ..ನೀವು ಈ ವಯಸ್ಸಿನಲ್ಲಿ ಮೆಟ್ಟಿಲುಗಳನ್ನ ಹತ್ತಿ ಬಂದು ಚಿಲ್ಲರೆ ವಾಪಾಸ್ ಮಾಡುವ ಅವಶ್ಯಕತೆ ಏನಿತ್ತು ಎಂದು ಹೇಳುತ್ತಾಳೆ.

ಆಗ ಅಜ್ಜಿ, ನನಗೆ ೮೦ವರ್ಷ ವಯಸ್ಸಾಗಿದೆ. ನಾನು ನಾಳೆ ಬದುಕಿರುತ್ತೇನೋ ಇಲ್ಲವೋ ಎಂಬ ನಂಬಿಕೆ ಇಲ್ಲ. ನಾನು ಯಾರ ಬಾಕಿ ಹಣವನ್ನ ಉಳಿಸಿಕೊಳ್ಳಲು ಇಷ್ಟ ಪಡುವುದಿಲ್ಲ. ಒಂದು ವೇಳೆ ಬಾಕಿ ಹಣ ಕೊಡದೆ ನಾನು ತೀ’ರಿಕೊಂಡು ಬಿಟ್ಟರೆ ನನಗೆ ಸ’ತ್ತ ಮೇಲೂ ನೆಮ್ಮದಿ ಸಿಗುವುದಿಲ್ಲ ಎಂದು ಹೇಳುತ್ತಾ ಅಜ್ಜಿ ಅಲ್ಲಿಂದ ಹೊರಡಲು ಮುಂದಾಗುತ್ತಾಳೆ. ಆಗ ಆ ಮಹಿಳೆ ಅಲ್ಲಿಯೇ ನಿಲ್ಲಿ ಎಂದು ಹೇಳಿ ಅಜ್ಜಿಯ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತಾ, ಪರರಿಗೆ ಮೋ’ಸ ಮಾಡಿ ಸುಖವಾಗಿರುವ ಜನರಿರುವ ಈ ಕಾಲದಲ್ಲಿ ನಿಮ್ಮಂತಹವರು ಇರುವುದು ಗ್ರೇಟ್ ಎಂದು ಹೇಳಿ ಅಜ್ಜಿಯಿಂದ ಆಶೀರ್ವಾದ ಪಡೆಯುತ್ತಾರೆ.