ಇಡೀ ದೇಶವೇ ಅಚ್ಚರಿ ಪಡುವಂತಹ ಕೆಲಸ ಮಾಡಿರುವ ನಾಯಿ ! ಇದು ಮಾಡಿರುವುದನ್ನ ನೋಡಿದ್ರೆ ಗ್ರೇಟ್ ಅಂತೀರಾ..

Advertisements

ಸ್ನೇಹಿತರೇ, ನಿಯತ್ತಿನ ಪ್ರತಿರೂಪ ಎಂದರೆ ಅದು ನಾಯಿ. ಅದಕ್ಕೆ ನಾಯಿಗಿರೋ ನಿಯತ್ತು ಕೂಡ ಮನುಷ್ಯನಿಗಿಲ್ಲ ಎಂಬ ಕೇಳಿಬರುತ್ತಿರುತ್ತದೆ. ಎಷ್ಟೋ ವೇಳೆ ನಾಯಿಗಳು ತನಗೆ ಊಟ ಹಾಕಿ ಸಾಕಿದ ಮಾಲೀಕನನ್ನ ಪ್ರಾಣ ಒತ್ತೆಯಿಟ್ಟು ಕಾಪಾಡಿದ ಸುದ್ದಿಗಳ ಬಗ್ಗೆ ನಾವು ಓದಿದ್ದೇವೆ. ಇನ್ನು ಇದೆ ರೀತಿಯ ಘಟನೆಯೊಂದು ಜಪಾನ್ ದೇಶದಲ್ಲಿ ನಡೆದ್ದಿದ್ದು ನಾಯಿ ಮಾಡಿದ ಕೆಲಸ ನೋಡಿ ಎಲ್ಲರು ಅಚ್ಚರಿಗೊಳ್ಳುವಂತೆ ಮಾಡಿದೆ. ಹೌದು, ಜಪಾನ್ ದೇಶದ ಟೋಕಿಯೋ ನಗರದ ವಿಶ್ವವಿದ್ಯಾನಿಲಯವೊಂದರಲ್ಲಿ ಯ್ಯೋನೊ ಎಂಬ ವ್ಯಕ್ತಿ ಲಚ್ಚರ್ ಆಗಿ ಭೋದನೆ ಮಾಡುತ್ತಿದ್ದರು. ಇನ್ನು ಇವರು ಪ್ರತೀದಿನ ರೈಲಿನ ಮೂಲಕ ಪ್ರಯಾಣ ಮಾಡುತ್ತಿದ್ದು, ರಸ್ತೆಯೊಂದರ ಬಳಿ ನಾಯಿ ಮರಿಯೊಂದನ್ನ ನೋಡಿ ಅದಕ್ಕೆ ಏನಾದರೂ ತಿಂಡಿ ಕೊಡುತ್ತಿರುತ್ತಾರೆ. ಹೀಗೆ ಆ ವ್ಯಕ್ತಿ ಮತ್ತು ನಾಯಿಯ ನಡುವೆ ಉತ್ತಮ ಬಾಂದವ್ಯ ಬೆಳೆಯುತ್ತದೆ.

[widget id=”custom_html-4″]

Advertisements

ಇನ್ನು ಆ ಬೀದಿ ನಾಯಿಯ ಮೇಲೆ ಪ್ರೀತಿ ಹೆಚ್ಚಾದ ಕಾರಣ ಆ ವ್ಯಕ್ತಿ ನಾಯಿಯನ್ನ ತನ್ನ ಮನೆಗೆ ಕರೆದುಕೊಂಡು ಹೋಗಿ ಅದಕ್ಕೆ ಆಚಿಕೋ ಎಂಬ ಹೆಸರಿನ್ನಿಟ್ಟು ಚೆನ್ನಾಗಿ ಸಾಕುತ್ತಿರುತ್ತಾರೆ. ಇನ್ನು ತನ್ನ ಯಜಮಾನನ ಜೊತೆ ಪ್ರೀತೀ ದಿವಸ ರೈಲ್ವೆ ಸ್ಟೇಷನ್ ತನಕ ಹೋಗುತ್ತಿದ್ದ ನಾಯಿ ಮತ್ತೆ ಆತ ಮರಳು ಬರುವವರೆಗೂ ಅಂದರೆ ಸಂಜೆಯವರೆಗೂ ಕಾದು ಯ್ಯೋನೊ ಜೊತೆಗೇನೆ ಮನೆಗೆ ಮರಳಿ ಬರುತಿತ್ತು. ಇನ್ನು ಇದೆ ರೀತಿ ಕೆಲ ವರ್ಷಗಳ ಕಾಲ ಹೀಗೆ ನಡೆಯುತ್ತದೆ. ಇನ್ನು ಹೀಗೊಂದು ದಿನ ವಿಶ್ವವಿದ್ಯಾನಿಲಯಕ್ಕೆ ಹೋಗಿದ್ದ ಯ್ಯೋನೊ ಸಂಜೆಯಾದರೂ ಮರಳಿ ಬರಲಿಲ್ಲ. ಇನ್ನು ರೈಲ್ವೆ ಸ್ಟೇಷನ್ ಬಳಿಯೇ ಕಾಡು ಕುಳಿತಿದ್ದ ಆ ನಾಯಿ ತಾನಂ ಪ್ರೀತಿಯ ಯಜಮಾನ ಬಾರದಿದ್ದನ್ನ ನೋಡಿ ರೈಲ್ವೆ ಸ್ಟೇಷನ್ ಎಲ್ಲಾ ಹುಡುಕಾಡುತ್ತದೆ. ಇನ್ನು ಹೀಗೆ ಆ ನಾಯಿ ವರ್ಶಗಳು ಕಳೆದರೂ ಕೂಡ ತನ್ನ ಯಜಮಾನ ಬರುತ್ತಾನೆ ಎಂಬ ನಂಬಿಕೆಯಿಂದ ಅದೇ ಸ್ಟೇಷನ್ ಬಳಿಯೇ ಹುಡುಕಾಡುತ್ತಾ ಅಲ್ಲಿಯೇ ಕಾದು ಕುಳಿತಿತ್ತು.

[widget id=”custom_html-4″]

ಇನ್ನು ತನ್ನ ಯಜಮಾನ ಯ್ಯೋನೊ ನಂತೆ ಕಾಣಿಸಿದ ವ್ಯಕ್ತಿಗಳ ಬಳಿ ಹೋಗಿ ನೋಡಿ ವಾಪಸಾಗುತಿತ್ತು. ನಾಯಿಯ ಈ ವರ್ತನೆ ಅಲ್ಲಿನವರಿಗೆ ವಿಚಿತ್ರವೆನಿಸಿದ್ರು ಬಳಿಕ ಅದರ ಬಗ್ಗೆ ತಿಳಿದು ಆ ನಾಯಿಯನ್ನ ಪ್ರೀತಿಯಿಂದ ಜನರು ನೋಡಲು ಶುರುಮಾಡಿದ್ರು. ಹೀಗೆ ತನ್ನ ಪ್ರೀತಿಯ ಯಜಮಾನಿಗಾಗಿ ಬರೋಬ್ಬರಿ ಹತ್ತು ವರ್ಷಗಳ ಕಾಲ ರೈಲ್ವೆ ಸ್ಟೇಷನ್ ಬಳಿ ಕಾದ ನಾಯಿ ಒಂದು ದಿನ ಆರೋಗ್ಯ ಸಮಸ್ಯೆ ಉಂಟಾಗಿ ಸಾ’ವನ್ನಪ್ಪುತ್ತದೆ. ಇನ್ನು ಅಂದು ವಿಶ್ವವಿದ್ಯಾನಿಲಯಕ್ಕೆ ಹೋಗಿದ್ದ ಯ್ಯೋನೊ ಅಲ್ಲಿ ಹಾರ್ಟ್ ಅಟ್ಯಾಕ್ ಗೆ ಒಳಗಾಗಿ ಸಾವನಪ್ಪಿರುತ್ತಿರುತ್ತಾರೆ. ಆದರೆ ಇದ್ಯಾವುದರ ಬಗ್ಗೆ ಅರಿವಿಲ್ಲದ ನಾಯಿ ವರ್ಷಗಟ್ಟಲೆ ತನ್ನ ಯಜಮಾನನಿಗಾಗಿ ಕಾದದ್ದು, ನಾಯಿಯ ನಿಯತ್ತಿಗೆ ದೊಡ್ಡ ನಿರ್ದರ್ಶನ. ಇನ್ನು ಈ ನಾಯಿಯ ನಿಯತ್ತಿನ ಕತೆಯನ್ನ ಕೇಳಿ ಹಲವಾರು ಸಿನಿಮಾಗಳು ಕೂಡ ಬಂದದ್ದು, ಜಪಾನ್ ನಂತಹ ದೇಶವು ಆಚಿಕೋ ನಾಯಿಯ ಗೌರವಾರ್ಥವಾಗಿ ಅದರ ಪ್ರತಿಮೆಗಳನ್ನ ತನ್ನ ದೇಶದಲ್ಲಿ ಸ್ಥಾಪನೆ ಮಾಡಿರುವುದು ನಾಯಿಯ ನಿಯತ್ತಿಗೆ ಕೊಟ್ಟ ಗೌರವವಾಗಿದೆ.